ಇಂದು ಉಪರಾಷ್ಟ್ರಪತಿ ಚುನಾವಣೆಗೆ ಮತದಾನ.. ಕನ್ನಡತಿ ಮಾರ್ಗರೇಟ್​ ಆಳ್ವಗೆ ಸೋಲು ಖಚಿತವೇ?!

author img

By

Published : Aug 6, 2022, 7:55 AM IST

Updated : Aug 6, 2022, 8:38 AM IST

Jagdeep Dhankar vs Margaret Alva fight for vice president election, vice president poll, NDA nominee Jagdeep Dhankar, opposition candidate Margaret Alva, vice president poll 2022 news, ಭಾರತದ ಮುಂದಿನ ಉಪರಾಷ್ಟ್ರಪತಿ ಆಯ್ಕೆ, ಉಪರಾಷ್ಟ್ರಪತಿ ಚುನಾವಣೆ, ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌, ವಿರೋಧ ಪಕ್ಷದ ಅಭ್ಯರ್ಥಿ ಆಳ್ವ, ಉಪಾಧ್ಯಕ್ಷರ ಚುನಾವಣಾ ನಿಯಮ, ರಹಸ್ಯ ಮತದಾನ,

ಭಾರತದ ಮುಂದಿನ ಉಪರಾಷ್ಟ್ರಪತಿ ಆಯ್ಕೆಗಾಗಿ ಮಾಡಲು ಇಂದು ಚುನಾವಣೆ ನಡೆಯಲಿದೆ. ಈ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಗೆಲ್ಲುವ ಸಾಧ್ಯತೆ ಹೆಚ್ಚಾಗಿದ್ದು, ಕನ್ನಡತಿ ಮಾರ್ಗರೇಟ್​ ಆಳ್ವ ಸೋಲುವ ಸಾಧ್ಯತೆ ಇದೆ ಎನ್ನುತ್ತಿವೆ ರಾಜಕೀಯ ಲೆಕ್ಕಾಚಾರಗಳು.

ನವದೆಹಲಿ: ಭಾರತದ ಮುಂದಿನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆ. ಪ್ರಸ್ತುತ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದೆ. ನೂತನ ಉಪರಾಷ್ಟ್ರಪತಿಯ ಆಯ್ಕೆಗೆ ಇಂದು ಚುನಾವಣೆ ನಡೆಯಲಿದ್ದು, ಸಂಸತ್ತಿನಲ್ಲಿ ಇರುವ ಸಂಖ್ಯಾಬಲವನ್ನು ನೋಡಿದರೆ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಅವರು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಉಪಾಧ್ಯಕ್ಷರು ಐದು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಂವಿಧಾನದ ನಿಬಂಧನೆಯ ಪ್ರಕಾರ ರಾಷ್ಟ್ರಪತಿಯ ಕರ್ತವ್ಯಗಳು ಮತ್ತು ಕಾರ್ಯಗಳನ್ನು ನಿರ್ವಹಿಸುತ್ತಾರೆ. ಈಗ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯು ಭಾರತದ 16 ನೇ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲಿದೆ. ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್‌ ಆಳ್ವ ಅವರು ಕಣಕ್ಕೆ ಇಳಿದಿದ್ದು, ಬಹುತೇಕ ಪ್ರತಿಪಕ್ಷಗಳು ಇವರಿಗೆ ಬೆಂಬಲ ಸೂಚಿಸಿವೆ. ಟಿಆರ್‌ಎಸ್‌ ಕೂಡ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ. ಟಿಆರ್‌ಎಸ್‌ ಸಂಸದೀಯ ಪಕ್ಷದ ನಾಯಕ ಡಾ. ಕೆ.ಕೇಶವ ರಾವ್‌ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಸಾಂವಿಧಾನಿಕ ನಿಬಂಧನೆಗಳು: ಸಂವಿಧಾನದ 66 ನೇ ವಿಧಿಯ ನಿಬಂಧನೆಗಳ ಪ್ರಕಾರ ಉಪಾಧ್ಯಕ್ಷರನ್ನು ಎಲೆಕ್ಟರೋಲ್​​​ ಅನ್ವಯ ಸದಸ್ಯರು ಆಯ್ಕೆ ಮಾಡುತ್ತಾರೆ. ಇನ್ನು ಎರಡೂ ಸದನಗಳ ಸದಸ್ಯರಿಂದ ಮತದಾನ ಪ್ರಕ್ರಿಯೆ ನಡೆಯಲಿದೆ. ಲೋಕಸಭೆಯ 543 ಚುನಾಯಿತ ಸದಸ್ಯರು ಹಾಗೂ ರಾಜ್ಯಸಭೆಯ 237 ಚುನಾಯಿತ ಮತ್ತು 12 ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಿ ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ. ರಾಜ್ಯಸಭೆಯಲ್ಲಿ ಎಂಟು ಸ್ಥಾನಗಳು ಖಾಲಿ ಇವೆ. ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಇದಾದ ಬಳಿಕ ಮತಗಳ ಎಣಿಕೆ ನಡೆಯಲಿದೆ.

ಸಂಸತ್ತಿನ ಎಲ್ಲಾ 788 ಚುನಾಯಿತ/ನಾಮನಿರ್ದೇಶಿತ ಸದಸ್ಯರ ಮತದ ಮೌಲ್ಯವು ಒಂದು ಮತವಾಗಿದೆ. ಸಂವಿಧಾನದ 68 ನೇ ವಿಧಿಯ ಪ್ರಕಾರ ನಿರ್ಗಮಿಸುವ ಉಪಾಧ್ಯಕ್ಷರ ಅವಧಿ ಮುಗಿಯುವ ಮೊದಲೇ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆದೇಶಿಸುತ್ತದೆ.

ಪಕ್ಷಗಳ ಸಂಖ್ಯಾಬಲ ಆಧರಿಸಿ ಹೇಳುವುದಾದರೆ ಧನಕರ್‌ ಅವರು 518 ರಿಂದ 539 ಮತಗಳನ್ನು ಹಾಗೂ ಆಳ್ವ ಅವರು 189 ಮತಗಳನ್ನು ಪಡೆಯುವ ಸಾಧ್ಯತೆ ಇದೆ. ತೃಣಮೂಲ ಕಾಂಗ್ರೆಸ್‌ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಇರುವ ಪಕ್ಷಗಳು ಅಷ್ಟೇ ಅಲ್ಲದೆ ಬಿಜೆಡಿ, ಬಿಎಸ್‌ಪಿ, ವೈಎಸ್‌ಆರ್‌ ಕಾಂಗ್ರೆಸ್‌, ಟಿಡಿಪಿ ಮೊದಲಾದ ಪಕ್ಷಗಳು ಧನಕರ್‌ ಅವರಿಗೆ ಬೆಂಬಲ ಸೂಚಿಸಿವೆ.

ಯುಪಿಎ ಮೈತ್ರಿಕೂಟದಲ್ಲಿ ಇಲ್ಲದೆ ಇರುವ ಎಎಪಿ ಕೂಡ ವಿರೋಧ ಪಕ್ಷದ ಅಭ್ಯರ್ಥಿ ಆಳ್ವ ಅವರಿಗೆ ಬೆಂಬಲ ಸೂಚಿಸಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ್ದ ಜೆಎಂಎಂ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆಳ್ವ ಅವರನ್ನು ಬೆಂಬಲಿಸುವುದಾಗಿ ಹೇಳಿದೆ.

ಸಂವಿಧಾನದ 324 ನೇ ವಿಧಿಯು 1952 ರ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣೆಗಳ ಕಾಯಿದೆ ಮತ್ತು 1974 ರ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣಾ ನಿಯಮಗಳೊಂದಿಗೆ ಉಲ್ಲೇಖವಾಗಿದೆ. ಈ ವಿಧಿ ಭಾರತದ ಚುನಾವಣಾ ಆಯೋಗಕ್ಕೆ ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣಾ ನಡವಳಿಕೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರವನ್ನು ನೀಡುತ್ತದೆ. ಉಪರಾಷ್ಟ್ರಪತಿಯಾಗಿ ಆಯ್ಕೆಯಾದವರು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಚುನಾವಣೆಗೆ ರಹಸ್ಯ ಮತದಾನ : ಸಂವಿಧಾನದ ಪರಿಚ್ಛೇದ 66 (1) ರ ಪ್ರಕಾರ ಏಕ ವರ್ಗಾವಣೆ ಮತದ ಮೂಲಕ ಪ್ರಮಾಣಾನುಗುಣ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆ ನಡೆಯುತ್ತದೆ. ಈ ಮತದಾನವು ರಹಸ್ಯ ಮತದಾನದ ಮೂಲಕ ನಡೆಯಲಿದೆ. ಸಂಸತ್ತಿನ ಸದಸ್ಯರು ಅಭ್ಯರ್ಥಿಗಳ ಹೆಸರಿನ ಮುಂದೆ ತಮ್ಮ ಆದ್ಯತೆಗಳನ್ನು ಗುರುತಿಸಬೇಕಾಗುತ್ತದೆ. ಈ ಗುರುತು ಭಾರತೀಯ ಅಂಕಿಗಳ ರೂಪದಲ್ಲಿ, ರೋಮನ್ ರೂಪದಲ್ಲಿ ಅಥವಾ ಯಾವುದೇ ಮಾನ್ಯತೆ ಪಡೆದ ಭಾರತೀಯ ಭಾಷೆಯ ರೂಪದಲ್ಲಿ ಇರಬೇಕು.

ಇನ್ನು ಈ ಆದ್ಯತೆಯನ್ನು ಅಂಕಿಗಳಲ್ಲಿ ಮಾತ್ರ ಗುರುತಿಸಬೇಕು, ಪದಗಳಲ್ಲಿ ಸೂಚಿಸಬಾರದು. ಹಾಗೆ ಆದ್ಯತೆಗಳನ್ನು ಗುರುತಿಸಿಸಲು ಲೋಪವಾದರೆ ಬ್ಯಾಲೆಟ್ ಪೇಪರ್ ಮಾನ್ಯ ಮಾಡಲು ಮೊದಲ ಆದ್ಯತೆಯ ಗುರುತನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇತರ ಆದ್ಯತೆಗಳು ಐಚ್ಛಿಕವಾಗಿರುತ್ತವೆ.

ಉಪಾಧ್ಯಕ್ಷರ ಚುನಾವಣೆಯಲ್ಲಿ ಮುಕ್ತ ಮತದಾನದ ಆಯ್ಕೆಯಿಲ್ಲ ಮತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಸಂದರ್ಭಗಳಲ್ಲಿ ಮತಪತ್ರವನ್ನು ಯಾರಿಗೂ ತೋರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೇ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ವಿಷಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ಸಂಸದರಿಗೆ ಯಾವುದೇ ವಿಪ್ ಸಹ ನೀಡುವಂತಿಲ್ಲ.

ಮತದಾನ ಎಲ್ಲಿ ನಡೆಯುತ್ತದೆ?: 1974ರ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣಾ ನಿಯಮಗಳ ನಿಯಮ 8ರ ಪ್ರಕಾರ, ಯಾವುದೇ ಸ್ಪರ್ಧೆಯಿಲ್ಲದಿದ್ದಲ್ಲಿ ಚುನಾವಣೆಗೆ ಸಂಸತ್ ಭವನದಲ್ಲಿ ಚುನಾವಣೆಗಳು ನಡೆಯುತ್ತವೆ.

ಈಗ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳೆರಡೂ ಉಪರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇಂದು ನವದೆಹಲಿಯ ಸಂಸತ್ ಭವನದ ಕೊಠಡಿ ಸಂಖ್ಯೆ 63 ರಲ್ಲಿ ಮತದಾನ ನಡೆಯಲಿದೆ. ನಂತರ ಮುಂದಿನ ಉಪರಾಷ್ಟ್ರಪತಿ ಆಗಸ್ಟ್ 11 ರಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಓದಿ: ರಾಷ್ಟ್ರಪತಿಯಂತೆ ಉಪರಾಷ್ಟ್ರಪತಿಯೂ ಮಹಿಳೆಯೇ ಆಗಲಿ: ಮೋಟಮ್ಮ

Last Updated :Aug 6, 2022, 8:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.