ಜಾಗತಿಕ ಮಟ್ಟದಲ್ಲಿ ಭಾರತ ನ್ಯಾಯಸಮ್ಮತ ವರ್ಚಸ್ಸು ಪಡೆದು ಅನುಭವಿಸುತ್ತಿದೆ: ರಷ್ಯಾಧ್ಯಕ್ಷ ಪುಟಿನ್

author img

By

Published : Aug 15, 2022, 5:05 PM IST

india-rightfully-enjoys-considerable-prestige-on-world-stage-says-putin

ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತ ರಚನಾತ್ಮಕ ಪಾತ್ರ ವಹಿಸುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ತಿಳಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಶುಭಾಶಯ ತಿಳಿಸಿರುವ ಅವರು ಭಾರತವನ್ನು ಅಭಿನಂದಿಸಿದ್ದಾರೆ.

ನವೆದಹಲಿ: ವಿಶ್ವ ಮಟ್ಟದಲ್ಲಿ ಭಾರತ ನ್ಯಾಯಸಮ್ಮತವಾದ ವರ್ಚಸ್ಸು ಪಡೆದು ಅದನ್ನು ಸಂಭ್ರಮಿಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಶುಭಾಶಯ ಕಳುಹಿಸಿರುವ ಅವರು, ಭಾರತೀಯರನ್ನು ಅಭಿನಂದಿಸಿ ದೇಶದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

  • Russian President Vladimir Putin extends his "warmest congratulations on the occasion of the 75th anniversary of India's independence."

    "Russian-Indian relations are developing in the spirit of the special & privileged strategic partnership...," reads his statement pic.twitter.com/1NWZwtiVls

    — ANI (@ANI) August 15, 2022 " class="align-text-top noRightClick twitterSection" data=" ">

ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮ ಆತ್ಮೀಯ ಅಭಿನಂದನೆಗಳನ್ನು ಸ್ವೀಕರಿಸಿ. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಿಮ್ಮ ದೇಶವು ಆರ್ಥಿಕ, ಸಾಮಾಜಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಇತರ ಕ್ಷೇತ್ರಗಳಲ್ಲಿ ಗುರುತರ ಯಶಸ್ಸು ಸಾಧಿಸಿದೆ. ಅಲ್ಲದೇ, ಜಾಗತಿಕ ಮಟ್ಟದಲ್ಲಿ ಭಾರತವು ತನ್ನ ಗಣನೀಯವಾದ ವರ್ಚಸ್ಸನ್ನು ನ್ಯಾಯಸಮ್ಮತವಾಗಿ ಪಡೆದು ಸಂಭ್ರಮಿಸುತ್ತಿದೆ. ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ರಚನಾತ್ಮಕ ಪಾತ್ರ ನಿರ್ವಹಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾ ಅಧ್ಯಕ್ಷರು ಅಭಿನಂದಿಸಿ, ಉತ್ತಮ ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ಕೋರಿದ್ದಾರೆ. ಮಾಸ್ಕೋ ಮತ್ತು ನವದೆಹಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸಹಕರಿಸುತ್ತಿವೆ. ಯುಎನ್, ಬ್ರಿಕ್ಸ್, ಎಸ್‌ಸಿಒ ಮತ್ತು ಇತರ ಬಹುಪಕ್ಷೀಯ ರಚನೆಗಳ ಚೌಕಟ್ಟಿನೊಳಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುತ್ತಿವೆ ಎಂದು ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: ಟೆಲಿಪ್ರಾಂಪ್ಟರ್​ ಕೈಬಿಟ್ಟು ಪೇಪರ್ ನೋಟ್ಸ್‌ ಮೂಲಕ 83 ನಿಮಿಷ ಭಾಷಣ ಮಾಡಿದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.