ಅಯೋಧ್ಯೆಯಲ್ಲಿ ಪವಿತ್ರ ಸ್ನಾನದ ವೇಳೆ ಪ್ರಣಯ.. ದಂಪತಿಯ ವಿಡಿಯೋ ವೈರಲ್

author img

By

Published : Jun 23, 2022, 10:55 AM IST

Updated : Jun 23, 2022, 11:10 AM IST

ದಂಪತಿ ಪ್ರಣಯ

ಪವಿತ್ರ ಸ್ಥಳ ಅಪವಿತ್ರಗೊಳಿಸಿದ ದಂಪತಿಯನ್ನು ಭಕ್ತರು ಥಳಿಸಿರುವ ಘಟನೆ ಅಯೋಧ್ಯೆಯಲ್ಲಿ ನಡೆದಿದೆ.

ಅಯೋಧ್ಯೆ (ಉತ್ತರ ಪ್ರದೇಶ): ಭಕ್ತರ ಪವಿತ್ರ ಸ್ನಾನದ ಸ್ಥಳದಲ್ಲಿ ದಂಪತಿ ಅಶ್ಲೀಲವಾಗಿ ವರ್ತಿಸಿರುವುದು ಅಯೋಧ್ಯೆಯಲ್ಲಿ ಕಂಡು ಬಂದಿದೆ. ಭಕ್ತರ ಮುಂದೆಯೇ ಪ್ರಣಯದಲ್ಲಿ ತೊಡಗಿದ್ದ ದಂಪತಿಯನ್ನು ಸ್ಥಳೀಯರು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಯೋಧ್ಯೆಯ ಪವಿತ್ರ ಸ್ನಾನದ ಸ್ಥಳದಲ್ಲಿ ಭಕ್ತರು ಮಿಂದೇಳುತ್ತಿದ್ದರು. ಇವರ ಮಧ್ಯೆ ಸ್ನಾನಕ್ಕೆಂದು ನೀರಿಗಿಳಿದ ದಂಪತಿ ಅಲ್ಲೇ ಪ್ರಣಯದಲ್ಲಿ ತೊಡಗಿದ್ದರು. ದಂಪತಿಯ ಅಶ್ಲೀಲ ವರ್ತನೆಗೆ ಭಕ್ತರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ದಂಪತಿ ತಮ್ಮ ಆಟ ಮುಂದುವರಿಸಿದ್ದರು. ಆ ಬಳಿಕ ಸ್ಥಳೀಯರೇ ದಂಪತಿಯನ್ನು ಥಳಿಸಿದ್ದಾರೆ.

ದಂಪತಿ ಪ್ರಣಯ

ಸದ್ಯ ದಂಪತಿಯ ವಿಡಿಯೋ ವೈರಲ್ ಆಗುತ್ತಿದೆ. ದಂಪತಿಯ ಕೃತ್ಯಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ಇದು ವೈರಲ್ ವಿಡಿಯೋ ಆಗಿದ್ದು, ಈಟಿವಿ ಭಾರತ ಇದನ್ನು ದೃಢಪಡಿಸುವುದಿಲ್ಲ.

(ಇದನ್ನೂ ಓದಿ: ಫೇಸ್‌ಬುಕ್ ಫಾರಿನ್ ಗೆಳತಿ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ)

Last Updated :Jun 23, 2022, 11:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.