72 ಗಂಟೆಗಳಲ್ಲಿ ಬಿಜೆಪಿಯ 14 ಶಾಸಕರು, ಸಚಿವರ ರಾಜೀನಾಮೆ: ಕೇಸರಿ ಪಕ್ಷಕ್ಕೆ ಮುಳುವಾಗುತ್ತಾ ಒಬಿಸಿ ವೋಟ್‌ಬ್ಯಾಂಕ್?

author img

By

Published : Jan 13, 2022, 7:45 PM IST

UP Assembly Election 2022

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿಗೆ ಈ ಸಲ ಒಬಿಸಿ ಹಾಗೂ ಬ್ರಾಹ್ಮಣ ಸಮುದಾಯದ ವೋಟ್​​ ಮುಳುವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

ಲಖನೌ(ಉತ್ತರ ಪ್ರದೇಶ): ದೇಶದ ಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ಘೋಷಣೆಯಾದಾಗಿನಿಂದಲೂ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಪಕ್ಷಾಂತರ ಪರ್ವ ಜೋರಾಗಿದೆ. ಪ್ರಮುಖವಾಗಿ ಆಡಳಿತ ಪಕ್ಷ ಬಿಜೆಪಿಗೆ ಪ್ರತಿದಿನ ಶಾಕ್ ಮೇಲೆ ಶಾಕ್ ಒದಗಿ ಬರುತ್ತಿದ್ದು, ಪ್ರಮುಖ ಮುಖಂಡರು ಸೇರಿದಂತೆ ಅನೇಕ ಶಾಸಕರು, ಸಚಿವರು ಬೇರೆ ಬೇರೆ ಪಕ್ಷಗಳಿಗೆ ಜಂಪ್​ ಆಗ್ತಿದ್ದಾರೆ.

  • नाग रूपी आरएसएस एवं सांप रूपी भाजपा को स्वामी रूपी नेवला यू.पी. से खत्म करके ही दम लेगा।
    ... pic.twitter.com/RIwkEpmgfs

    — Swami Prasad Maurya (@SwamiPMaurya) January 13, 2022 " class="align-text-top noRightClick twitterSection" data=" ">

ಯೋಗಿ ಆದಿತ್ಯನಾಥ್​​ ಕ್ಯಾಬಿನೆಟ್​ನಲ್ಲಿ ಪ್ರಮುಖ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಕಳೆದ 72 ಗಂಟೆಗಳಲ್ಲಿ ಅನೇಕ ಸಚಿವರು ಸೇರಿದಂತೆ 14 ಶಾಸಕರು ಪಕ್ಷ ತೊರೆದಿದ್ದಾರೆ. ಇವರೆಲ್ಲರೂ ಪ್ರಮುಖವಾಗಿ ಒಬಿಸಿ ಹಾಗೂ ಬ್ರಾಹ್ಮಣ ಸಮುದಾಯದವರು ಅನ್ನೋದು ಇಲ್ಲಿ ಗಮನಾರ್ಹ.

  • ओबीसी समाज को सामाजिक, आर्थिक और राजनीतिक प्रतिनिधित्व जितना भाजपा में मिला है उतना किसी सरकार में नहीं मिला।

    हमारे लिए 'P' का अर्थ 'पिछड़ों का उत्थान' है।

    कुछ लोगों के लिए 'P' का अर्थ सिर्फ 'पिता-पुत्र-परिवार' का उत्थान होता है।

    — Swatantra Dev Singh (@swatantrabjp) January 13, 2022 " class="align-text-top noRightClick twitterSection" data=" ">

ಬಿಜೆಪಿ ತೊರೆದವರ ವಿವರ:

  • ಸ್ವಾಮಿ ಪ್ರಸಾದ್ ಮೌರ್ಯ
  • ಬ್ರಿಜೇಶ್​ ಕುಮಾರ್​ ಪ್ರಜಾಪತಿ
  • ಭಗವತಿ ಸಾಗರ್​​ ಪ್ರಸಾದ್
  • ವಿನಯ್​​ ಶೌಖ್ಯ
  • ರೋಶನ್ ಲಾಲ್​ ವರ್ಮಾ
  • ಧಾರಾ ಸಿಂಗ್​ ಚೌಹಾಣ್​
  • ಮುಕೇಶ್​ ವರ್ಮಾ
  • ಧರಂ ಸಿಂಗ್​ ಸೈನಿ
  • ಓಂ ಪ್ರಕಾಶ್​ ರಾಜಬರ್​

2017ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಸರ್ಕಾರ ರಚಿಸಿದ್ದ ಬಿಜೆಪಿಗೆ ಇದೀಗ ಪಕ್ಷಾಂತರ ಪರ್ವ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರ ಬಗ್ಗೆ ಬಿಜೆಪಿ ಹೈಕಮಾಂಡ್​​ ಆಗಲಿ ಅಥವಾ ಯೋಗಿ ಆದಿತ್ಯನಾಥ್ ಆಗಲಿ​ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗಾಬರಿಯಾಗ್ಬೇಡಿ, ಕೋವಿಡ್ ವಿರುದ್ಧ ಲಸಿಕೆ ಅತ್ಯುತ್ತಮ ಅಸ್ತ್ರ: ಮೋದಿ

150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಪ್ರಭಾವ:

ಈ ಹಿಂದೆ ಬಿಜೆಪಿ ಸೇರಿದ್ದ ಸ್ವಾಮಿ ಪ್ರಾಸಾದ್ ಮೌರ್ಯ ಅತಿ ಹೆಚ್ಚಿನ ಕ್ಷೇತ್ರಗಳ ಮೇಲೆ ಹಿಡಿತ ಹೊಂದಿದ್ದು, ಇದೀಗ ಪಕ್ಷ ತೊರೆದಿರುವುದು ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಕಾಣುತ್ತಿದೆ. ಇವರ ಹಿಂದೆ ದೊಡ್ಡ ರಾಜಕೀಯ ಮುಖಂಡರ ದಂಡೇ ಇದ್ದು, ಅವರೆಲ್ಲರೂ ಇದೀಗ ಒಬ್ಬೊಬ್ಬರಾಗಿ ಸಮಾಜವಾದಿ ಪಕ್ಷ ಸೇರುತ್ತಿರುವ ಕಾರಣ, ಈ ಸಲದ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸವಾಲು ಎದುರಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.