ಎನ್‌ಡಿಎ ಪರೀಕ್ಷೆ: ಅಂದು 'ಹುಡುಗರಿಗೆ ಮಾತ್ರ' ಎಂದು ಅವಕಾಶ ನಿರಾಕರಣೆ, ಇಂದು ಟಾಪರ್‌!

author img

By

Published : Jun 22, 2022, 10:29 PM IST

first time that the NDA will admit women cadets to the institute

ಹರಿಯಾಣದ ರೋಹ್ಟಕ್ ನಿವಾಸಿಯಾಗಿರುವ ಶಾನನ್ ಢಾಕಾ (19) ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪ್ರವೇಶ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ.

ರೋಹ್ಟಕ್​​: ಶಾನನ್ ಢಾಕಾ ಎಂಬುವವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಇವರು ಹರಿಯಾಣದ ರೋಹ್ಟಕ್ ನಿವಾಸಿ. ಇದೇ ಮೊದಲ ಬಾರಿಗೆ ಎನ್‌ಡಿಎ ಮಹಿಳಾ ಕೆಡೆಟ್‌ಗಳಿಗೆ ಪ್ರವೇಶ ನೀಡಲಿದೆ.

ಜೂನ್ 14ರಂದು ಪ್ರಕಟವಾದ ಎನ್‌ಡಿಎ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಇವರು ಒಟ್ಟಾರೆ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿದ್ದರು. ಎನ್‌ಡಿಎ ಕೋರ್ಸ್‌ನಲ್ಲಿ 19 ಮಹಿಳಾ ಕೆಡೆಟ್‌ಗಳು ಇರುತ್ತಾರೆ. ಸೇನೆಗೆ 10, ವಾಯುಪಡೆಗೆ ಆರು ಮತ್ತು ನೌಕಾಪಡೆಗೆ ಮೂವರು. ಈ ಕೆಡೆಟ್‌ಗಳಿಗೆ ಮೂರು ವರ್ಷಗಳ ತರಬೇತಿ ನೀಡಲಾಗುವುದು ಎಂದು ಅಕಾಡೆಮಿ ಹೇಳಿದೆ.

ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಉದ್ಧವ್​ ಠಾಕ್ರೆ

"ಸೇನೆಯಲ್ಲಿ ಕೆಲಸ ಮಾಡುವುದೆಂದರೆ ಅದು ಉದ್ಯೋಗವಲ್ಲ, ಸೇವೆ. ಒಮ್ಮೆ ಶಾಲೆಯಲ್ಲಿ NDA ಅಣಕು ಪರೀಕ್ಷೆ ನಡೆಯುವಾಗ ಹುಡುಗಿಯರು ಬರೆಯಲು ಬಯಸಿದ್ದರು. ಆದರೆ ಇದು ಹುಡುಗರಿಗೆ ಮಾತ್ರ ಎಂದು ಹೇಳಿ ಅವರಿಗೆ ಅನುಮತಿ ನೀಡಲಿಲ್ಲ. ಈಗ ನಾನು ಆ ದಿನವನ್ನು ನೆನಪಿಸಿಕೊಂಡಾಗ ತುಂಬಾ ಸಂತೋಷವಾಗುತ್ತದೆ" ಎಂದು ಶಾನನ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.