ಕೋಲ್ಕತ್ತಾದ ಬಂದರಿನಲ್ಲಿ ಗುಜರಾತ್ ಪೊಲೀಸರಿಂದ 200 ಕೋಟಿ ಮೌಲ್ಯದ ಹೆರಾಯಿನ್​ ಜಪ್ತಿ

author img

By

Published : Sep 9, 2022, 5:25 PM IST

gujarat-ats-and-dri-seize-40-kg-heroin-from-kolkata-port

ಕೋಲ್ಕತ್ತಾದ ಬಂದರಿನಲ್ಲಿ ಗುಜರಾತ್ ಪೊಲೀಸ್​ ಅಧಿಕಾರಿಗಳ ತಂಡ 40 ಕೆಜಿ ಹೆರಾಯಿನ್​ ಜಪ್ತಿ ಮಾಡಿದೆ.

ಗಾಂಧಿನಗರ (ಗುಜರಾತ್​): ಗುಜರಾತ್ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯವು ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಬಂದರಿನಲ್ಲಿ 40 ಕೆಜಿ ಹೆರಾಯಿನ್​ ಜಪ್ತಿ ಮಾಡಿದೆ.

ಜಪ್ತಿ ಮಾಡಲಾದ ಈ 40 ಕೆಜಿ ಹೆರಾಯಿನ್ ಮಾರುಕಟ್ಟೆ ಮೌಲ್ಯವು ಅಂದಾಜು 200 ಕೋಟಿ ರೂ.ಗಳಾಗಿದೆ. ಸ್ಕ್ರ್ಯಾಪ್ ಕಂಟೈನರ್‌ನಲ್ಲಿ ಹೆರಾಯಿನ್​ ಕೋಲ್ಕತ್ತಾದ ಬಂದರಿಗೆ ತರಲಾಗಿತ್ತು ಎನ್ನಲಾಗಿದೆ. ಅಲ್ಲದೇ, ಈ ಕಂಟೈನರ್‌ ಫೆಬ್ರವರಿಯಲ್ಲಿ ದುಬೈನಿಂದ ಬಂದಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಓಣಂ ಹಬ್ಬದ ನಿಮಿತ್ತ ಒಂದೇ ವಾರದಲ್ಲಿ 625 ಕೋಟಿ ರೂಗಳ ಮದ್ಯ ಮಾರಾಟ! ಇದು ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.