ಬಾಯ್​​ಫ್ರೆಂಡ್​​ಗೆ ಏಡ್ಸ್​​ ಇದೆ ಎಂದು ತನ್ನ ದೇಹದೊಳಗೂ HIV ಸೇರಿಸಿಕೊಂಡ ಗೆಳತಿ!

author img

By

Published : Aug 5, 2022, 5:13 PM IST

GIRLFRIEND INSERTS HIV INTO HER BODY

ತಾನು ಪ್ರೀತಿಸುತ್ತಿದ್ದ ಯುವಕನಿಗೆ HIV ಇದೆ ಎಂಬ ಕಾರಣಕ್ಕೆ ಯುವತಿಯೋರ್ವಳು ಆತನ ದೇಹದಿಂದ ರಕ್ತ ಹೊರತೆಗೆದು ತನ್ನ ದೇಹದೊಳಗೂ ಇಂಜೆಕ್ಟ್ ಮಾಡಿಕೊಂಡಿರುವ ವಿಚಿತ್ರ ಘಟನೆ ಅಸ್ಸೋಂನಲ್ಲಿ ನಡೆದಿದೆ.

ಗುವಾಹಟಿ(ಅಸ್ಸೋಂ): ಪ್ರೀತಿಗೊಸ್ಕರ ಪ್ರೇಮಿಗಳು ಅನೇಕ ರೀತಿಯ ತ್ಯಾಗ-ಬಲಿದಾನಗಳನ್ನು ಮಾಡಿರುವ ಸಾಕಷ್ಟು ಪ್ರಕರಣಗಳಿವೆ. ಆದರೆ, ಅಸ್ಸೋಂನಲ್ಲಿ ವಿಚಿತ್ರ ಮತ್ತು ವಿಭಿನ್ನ ಘಟನೆ ನಡೆದಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಇಲ್ಲೊಬ್ಬಳು 19 ವರ್ಷದ ಯುವತಿ ತನ್ನ ಬಾಯ್​​ಫ್ರೆಂಡ್​ಗೆ ಮಾರಣಾಂತಿಕ ಖಾಯಿಲೆ ಏಡ್ಸ್​ ಇದೆ ಎಂದು ಗೊತ್ತಾದ ಬಳಿಕ ತನ್ನ ದೇಹದೊಳಗೂ ಎಚ್​​ಐವಿ ಇಂಜೆಕ್ಟ್ ಮಾಡಿಕೊಂಡಿದ್ದಾಳೆ. ಈ ಮೂಲಕ ಆತನ ಮೇಲಿನ ವಿಲಕ್ಷಣ ಪ್ರೀತಿ ಪ್ರದರ್ಶಿಸಿದ್ದಾಳೆ. ಅಸ್ಸೋಂನ ಕಮ್ರೂಪ್ ಜಿಲ್ಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.

ರಾಜಧಾನಿ ಗುವಾಹಟಿಯಿಂದ 30 ಕಿಲೋ ಮೀಟರ್ ದೂರದ ಸುಲ್ಕುಚಿ ಎಂಬ ಹಳ್ಳಿಯಲ್ಲಿ ಪ್ರಕರಣ ನಡೆದಿದೆ. ಇಲ್ಲಿನ ಶಾಲೆಯೊಂದರಲ್ಲಿ ಓದುತ್ತಿರುವ ಯುವತಿ ಈ ರೀತಿ ನಡೆದುಕೊಂಡಿದ್ದಾಳೆ. ಈಕೆಯ ಪ್ರಿಯಕರ ಸದ್ಯ ಜೈಲಿನಲ್ಲಿದ್ದು, ಆತನಿಗೆ ಏಡ್ಸ್​ ಇದೆ. ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಯತ್ನವನ್ನೂ ಈಕೆ ನಿರಂತರವಾಗಿ ನಡೆಸುತ್ತಿದ್ದಾಳೆ.

ಪ್ರೇಮ ಕಹಾನಿಯ ವಿವರ: ಮೂರು ವರ್ಷಗಳ ಹಿಂದೆ ಫೇಸ್​ಬುಕ್ ಮೂಲಕ ಯುವತಿ ಹಾಗೂ ಯುವಕ ಪರಿಚಯವಾಗಿದ್ದರು. ತದನಂತರ ಪರಸ್ಪರ ಪ್ರೀತಿಸಲು ಶುರು ಮಾಡ್ತಾರೆ. ಈ ಪ್ರೀತಿ ಅತ್ಯಂತ ಗಾಢವಾಗಿ ಬೆಳೆಯುತ್ತದೆ. ಇದರ ಮಧ್ಯೆ ಯುವಕನಿಗೆ ಎಚ್​ಐವಿ ಸೋಂಕು ಇರುವುದು ಯುವತಿಗೆ ಗೊತ್ತಾಗುತ್ತದೆ. ಗೆಳೆಯನಿಗೆ ಎಚ್​ಐವಿ ಪಾಸಿಟಿವ್​ ಇದೆ ಅಂತ ಗೊತ್ತಾದ್ರೂ ಸಹ ಆತನೊಂದಿಗೆ ಮೂರು ಸಲ ಮನೆ ಬಿಟ್ಟು ಪರಾರಿಯಾಗಿದ್ದಳು. ಆದರೆ, ಯುವತಿಯ ಕುಟುಂಬಸ್ಥರು ಆಕೆಯನ್ನು ವಾಪಸ್ ಕರೆತಂದಿದ್ದಾರೆ. ಯುವಕನನ್ನು ಸೆರೆಹಿಡಿದ ಅವರು ಪೊಲೀಸರಿಗೆ ಒಪ್ಪಿಸಿದ್ದರು.

ಇದನ್ನೂ ಓದಿ: ನೆಲಕ್ಕುರುಳಿ ಬಿದ್ದ ಬೋಗಿಗಳ ಮೇಲೆ ನಿಂತು ಸೆಲ್ಫಿ; ಯುವಕರಿಬ್ಬರಿಗೆ ತಾಗಿದ ಹೈಟೆನ್ಷನ್ ವೈರ್!

ಬಾಯ್​​ಫ್ರೆಂಡ್​ ದೇಹದಿಂದ ರಕ್ತ ತೆಗೆದು ಇಂಜೆಕ್ಟ್​: ಓಡಿ ಹೋಗಿದ್ದ ಸಂದರ್ಭದಲ್ಲಿ ಗೆಳೆಯನ ದೇಹದಿಂದ ರಕ್ತ ಹೊರತೆಗೆದ ಯುವತಿ ಅದನ್ನು ತನ್ನ ದೇಹದೊಳಗೆ ಇಂಜೆಕ್ಟ್ ಮಾಡಿಕೊಂಡಿದ್ದಾಳೆ. ಇದನ್ನು ಆಕೆಯೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಆತನೊಂದಿಗೆ ಮೂರು ಸಲ ಓಡಿ ಹೋಗಿದ್ದು, ದೈಹಿಕ ಸಂಪರ್ಕ ಬೆಳೆಸಿರುವುದಾಗಿಯೂ ತಿಳಿಸಿದ್ದಾಳೆ!. ಈ ಹಿನ್ನೆಲೆಯಲ್ಲಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಲಾಗಿದ್ದು, ಏಡ್ಸ್‌ ಇರುವುದು ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.