ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳ ಬಂಧನ
ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ - ನಾಗ್ಪುರದ ಸವ್ನೆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ- ಇಬ್ಬರು ಆರೋಪಿಗಳ ಬಂಧನ.
ನಾಗ್ಪುರ (ಮಹಾರಾಷ್ಟ್ರ): ನಾಗ್ಪುರದ ಸವ್ನೆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮನೆಗೆ ಬಿಡುವ ನೆಪದಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸ್ಥಳೀಯ ಅಪರಾಧ ವಿಭಾಗದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಖಿಲ್ ಅಲಿಯಾಸ್ ಅಕ್ಕಿ ಮಹಾದೇವ ಭೋಂಗ್ (26) ಹಾಗೂ ಪವನ್ ವಿಠ್ಠಲ್ ಭಾಸ್ಕವರೆ (24) ಬಂಧಿತ ಆರೋಪಿಗಳು.
ಸ್ನೇಹಿತರೆಂದು ನಂಬಿದ್ದಕ್ಕೆ ಮೋಸ.. ಮೂಲಗಳ ಪ್ರಕಾರ, 10ನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಶಾಲೆ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಳು. ಆಗ ಆಕೆಯ ಪರಿಚಯದ ಇಬ್ಬರು ಯುವಕರು ಕಾರಿನಲ್ಲಿ ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಆರೋಪಿಗಳನ್ನು ಎರಡು ತಿಂಗಳ ಹಿಂದೆ ಆಕೆಯ ಸ್ನೇಹಿತೆ ಪರಿಚಯಿಸಿದ್ದಳು. ಪರಸ್ಪರ ಭೇಟಿಯಾಗುತ್ತಿದ್ದರಿಂದ ಸಂತ್ರಸ್ತೆಗೆ ಸ್ನೇಹಿತರಾಗಿದ್ದರು. ಪರಿಚಯಸ್ಥರಾಗಿದ್ದರಿಂದ ಅಪ್ರಾಪ್ತ ಬಾಲಕಿ ಅವರ ಕಾರಿನಲ್ಲಿ ಕುಳಿತಿದ್ದಳಂತೆ.
ಬಾಲಕಿ ಕಾರಿನಲ್ಲಿ ಕುಳಿತ ತಕ್ಷಣ ಆರೋಪಿಗಳು ಆಕೆಯನ್ನು ಮನೆಗೆ ಬಿಡದೆ ನೇರವಾಗಿ ಕೊಡೆಗಾಂವ್-ಖಾಪಾ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದುದಿದ್ದಾರೆ. ಬಳಿಕ ಇಬ್ಬರು ಯುವಕರು ವಿದ್ಯಾರ್ಥಿನಿಯ ಮೇಲೆ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಮನೆಗೆ ಬಂದ ಬಾಲಕಿ ತಾಯಿ ಬಳಿ ತನ್ನ ಮೇಲಾದ ದುಷ್ಕೃತ್ಯ ಬಗ್ಗೆ ವಿವರಿಸಿದ್ದಾಳೆ. ಪ್ರಕರಣ ಸಂಬಂಧ ಸಾವ್ನರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವನ ಬಂಧನ
ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ ಸಾವು: ಮತ್ತೊಂದೆಡೆ ಆತ್ಮಹತ್ಯೆಗೆ ಯತ್ನಿಸಿದ 13 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಗುಜರಾಥ್ನ ಸೂರತ್ ನಗರದ ಕವಾಸ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕೆ ತಾಯಿ ಗದರಿಸಿದ್ದರಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಸೂರತ್‌ನ ಕವಾಸ್ ಗ್ರಾಮದ ಈ ಬಾಲಕಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಕಳೆದ 10 ದಿನಗಳ ಹಿಂದೆ ಮನೆಯ ಟೆರೇಸ್ ಮೇಲೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಗಮನಿಸಿದ ಬಾಲಕಿಯ ತಾಯಿ ಗದರಿಸಿದ್ದರು. ಇದರಿಂದ ನೊಂದ ಬಾಲಕಿ ಕೋಪದಲ್ಲಿ ಇಲಿ ಪಾಷಾಣ ವಿಷ ಸೇವಿಸಿದ್ದಳು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು-ಮೂರು ದಿನಗಳ ಚಿಕಿತ್ಸೆ ಬಳಿಕ ಬಾಲಕಿ ಗುಣಮುಖಳಾಗಿದ್ದಳು. ನಂತರ ಆಕೆಯನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಮನೆಯಲ್ಲಿ ಇದ್ದ ವೇಳೆ ಮತ್ತೆ ಆರೋಗ್ಯ ಹದಗೆಟ್ಟಿತು. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಎರಡು ದಿನಗಳ ಚಿಕಿತ್ಸೆ ಬಳಿಕ ಮೃತಪಟ್ಟಿದ್ದಾಳೆ ಎಂದು ಬಾಲಕಿಯ ತಂದೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಸರಿಯಾದ ಕೆಲಸವಿಲ್ಲವೆಂದು ಖಿನ್ನತೆ.. ಗಗನಸಖಿ ಆತ್ಮಹತ್ಯೆ
