ಅಂತರ್ಜಾತಿ ವಿವಾಹ.. ಸತ್ತಾಗ ಮರುಗದ ಆ ಮನಸುಗಳು:  ಸಹಾಯಕ್ಕೆ ನಿಂತ ಸ್ನೇಹಿತರು!

author img

By

Published : Jun 23, 2022, 12:37 PM IST

Humanity

ಅಂತರ್ಜಾತಿ ವಿವಾಹವಾದ ದಂಪತಿ ಪುತ್ರಿ ಸಾವನ್ನಪ್ಪಿದ ನಂತರ ಆಕೆಯ ಹತ್ತಿರದ ಮತ್ತು ಆತ್ಮೀಯರ ಬೆಂಬಲ ಸಿಗದಿದ್ದಾಗ, ನೆರೆಹೊರೆಯವರು ಸೇರಿ ದೇಣಿಗೆ ಸಂಗ್ರಹಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಡಿಂಡೋರಿ(ಮಧ್ಯಪ್ರದೇಶ): ಸಮಯ ಎನ್ನುವುದೇ ಹಾಗೇ, ಸಮಯ ತನ್ನವರ್ಯಾರು, ತನ್ನವರು ಅಲ್ಲದಿರುವವರು ಯಾರು ಎನ್ನುವುದನ್ನು ತೋರಿಸಿಕೊಡುತ್ತದೆ. ತನ್ನವರೆಂದುಕೊಂಡವರು ಕಷ್ಟದ ಸಮಯದಲ್ಲಿ ಕೈ ಬಿಟ್ಟು ಬಿಡುತ್ತಾರೆ. ಅಂತಹ ಸಮಯದಲ್ಲಿ ತಮಗೆ ತಿಳಿಯದೇ ಇರುವವರು ನಮ್ಮ ನೆರವಿಗೆ ಬರುವುದುಂಟು. ಇಂತಹ ಅನೇಕ ಪ್ರಕರಣಗಳು ಇವೆ. ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದೆ.

ಅಂತರ್ಜಾತಿ ವಿವಾಹವಾದ ದಂಪತಿಯ ಪುತ್ರಿ ಸಾವನ್ನಪ್ಪಿದ ನಂತರ ಆಕೆಯ ಹತ್ತಿರದ ಮತ್ತು ಆತ್ಮೀಯರ ಬೆಂಬಲ ಸಿಗದಿದ್ದಾಗ, ನೆರೆಹೊರೆಯವರು ದೇಣಿಗೆ ಸಂಗ್ರಹಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಸಮಾಜ ಸೇವಕರ ಈ ಕಾರ್ಯಕ್ಕೆ ಇಡೀ ದಿಂಡೋರಿ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಏನಿದು ಪ್ರಕರಣ?: ಡಿಂಡೋರಿ ನಿವಾಸಿ ಪ್ರದೀಪ್ ಸೋನಿ ಅನ್ಯ ಜಾತಿಯ ಅಲ್ಕಾ ಎಂಬುವವರನ್ನು ಪ್ರೇಮ ವಿವಾಹವಾಗಿದ್ದರು. ಬೇರೆ ಸಮಾಜದ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಪ್ರದೀಪ್ ಕುಟುಂಬಸ್ಥರು ಕೋಪಗೊಂಡಿದ್ದರು. ನಂತರ ಈ ಜೋಡಿ ಭೋಪಾಲ್​ಗೆ ಬಂದು ಜೀವನ ನಡೆಸತೊಡಗಿತ್ತು. ಪ್ರದೀಪ್ ಮತ್ತು ಅಲ್ಕಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಹಿರಿಯ ಮಗಳು ಪೂಜಾ ಕಳೆದ ವರ್ಷ ಭೋಪಾಲ್‌ನ ಗಾಂಧಿನಗರದಲ್ಲಿ ವಿವಾಹವಾಗಿದ್ದರು. ಒಂದು ವರ್ಷದ ನಂತರ ಪೂಜಾಳನ್ನು ಆಕೆಯ ಅತ್ತೆ ಮನೆಯವರು ಕಿರುಕುಳ ನೀಡಿ ಓಡಿಸಿದ್ದರು ಎನ್ನಲಾಗಿದೆ. ಈ ವೇಳೆ ಪೂಜಾರ ತಂದೆ ಪ್ರದೀಪ್ ಸಾವನ್ನಪ್ಪಿದರು. ಅದೇ ಸಮಯದಲ್ಲಿ ಪೂಜಾ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದು, ಅಲ್ಕಾರ ಪರಿಸ್ಥಿತಿ ಕಣ್ಣೀರು ತರಿಸುವಂತಿತ್ತು.

ಆಸರೆಯಾಗದ ಸಂಬಂಧಿಕರು: ಇಂತಹ ಸಂದರ್ಭದಲ್ಲಿ ಸಂಬಂಧಿಕರು ಹೆಗಲು ಕೊಡಲಿಲ್ಲ. ಆರ್ಥಿಕ ಸ್ಥಿತಿ ಹದಗೆಟ್ಟಾಗ ಇಬ್ಬರು ಮಕ್ಕಳೊಂದಿಗೆ ಅಲ್ಕಾ ದಿಂಡೋರಿಗೆ ಬಂದಿದ್ದರು. ಪೂಜಾ ಕೂಡ ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಆದರೆ, ಸಂಬಂಧಿಕರು ಮೃತರ ಕುಟುಂಬಕ್ಕೆ ಹೆಗಲು ನೀಡಲು ಮುಂದೆ ಬಂದಿಲ್ಲ. ಅಲ್ಕಾ ತನ್ನ ಅತ್ತೆಯ ಬಳಿ ಸಹಾಯ ಕೇಳಿದ್ದಾರೆ. ಆದರೆ, ಕುಟುಂಬ ಸದಸ್ಯರು ಅವರನ್ನು ನೋಡಲು ಸಹ ಬಂದಿಲ್ಲ. ನಂತರ ಪ್ರದೀಪ್ ಅವರ ಕೆಲವು ಸ್ನೇಹಿತರು ಮತ್ತು ನೆರೆಹೊರೆಯವರು ದೇಣಿಗೆ ಸಂಗ್ರಹಿಸಿ ಅಂತಿಮ ವಿಧಿಗಳನ್ನು ನೆರವೇರಿಸಿದರು.

ಮೃತ ಪ್ರದೀಪ್​ಗೆ 11 ಜನ ಸಹೋದರರಿದ್ದು, ಅವರ ಬಳಿ ಕೋಟ್ಯಂತರ ರೂಪಾಯಿ ಆಸ್ತಿ ಇದೆ. ಅದರಲ್ಲಿ ಪ್ರದೀಪ್ ಅವರಿಗೂ ಪಾಲು ಇದೆ ಎಂದು ಅಲ್ಕಾ ಹೇಳಿದ್ದಾರೆ. ಅಂತರ್ಜಾತಿ ವಿವಾಹ ಹಿನ್ನೆಲೆ ನಮ್ಮನ್ನು ದೂರವಿಟ್ಟಿದ್ದಾರೆ. ನನ್ನ ಕಿರಿಯ ಮಗಳು, ತನ್ನ ತಂದೆಯ ಕೆಲವು ಸ್ನೇಹಿತರು ಮತ್ತು ನೆರೆಹೊರೆಯವರ ಸಹಾಯದಿಂದ ಹಿರಿಯ ಮಗಳ ಅಂತಿಮ ವಿಧಿಗಳನ್ನು ಮಾಡಲಾಗಿದೆ ಎಂದು ಅಲ್ಕಾ ತಿಳಿಸಿದರು.

ಇದನ್ನೂ ಓದಿ: 4 ವಿಧಾನಸಭೆ, 1 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ

ಸಾಮಾಜಿಕ ಕಾರ್ಯಕರ್ತ ರಾಜು ಬರ್ಮನ್ ಅವರು ಪೂಜಾ ಸೋನಿ ಅವರ ಬಗ್ಗೆ ತಿಳಿದುಕೊಂಡು, ಅವರೊಂದಿಗೆ ನಗರದ ಎಲ್ಲ ಪತ್ರಕರ್ತರು ಸೇರಿ ಪೂಜಾ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದರು. ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.