ವಿಶಿಷ್ಟ ಸಾಮರ್ಥ್ಯದ 'ಸ್ಮಾರ್ಟ್ ಮಿರರ್' ಕಂಡುಹಿಡಿದ ಎಂಜಿನಿಯರಿಂಗ್​ ವಿದ್ಯಾರ್ಥಿ

author img

By

Published : Aug 29, 2021, 10:53 PM IST

Odisha

ಕಟಕ್​ನ ಎಂಜಿನಿಯರಿಂಗ್​ ವಿದ್ಯಾರ್ಥಿ ಸ್ವಾಧಿನ್ ದಾಸ್ 'ಸ್ಮಾರ್ಟ್ ಮಿರರ್' ಕಂಡು ಹಿಡಿದಿದ್ದು, ಇದು ವಿದ್ಯುತ್ ಬಲ್ಬ್, ಫ್ಯಾನ್, ಎಸಿ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಕಟಕ್(ಒಡಿಶಾ) : ಕಟಕ್​ನ ಭುವನಾನಂದ ಒಡಿಶಾ ಸ್ಕೂಲ್ ಆಫ್ ಎಂಜಿನಿಯರಿಂಗ್ (BOSE) ನ ವಿದ್ಯಾರ್ಥಿ ಸ್ವಾಧಿನ್ ದಾಸ್, ಒಂದು ಕೊಠಡಿಯಲ್ಲಿನ ವಿದ್ಯುತ್ ಬಲ್ಬ್, ಫ್ಯಾನ್, ಎಸಿ ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್​ಗಳನ್ನು ನಿರ್ವಹಿಸಬಲ್ಲ 'ಸ್ಮಾರ್ಟ್ ಮಿರರ್' ಅನ್ನು ಕಂಡು ಹಿಡಿದಿದ್ದಾರೆ.

ಸ್ಮಾರ್ಟ್ ಮಿರರ್ ಕಂಡುಹಿಡಿದ ಎಂಜಿನಿಯರಿಂಗ್ ವಿದ್ಯಾರ್ಥಿ

ಈ ಸ್ಮಾರ್ಟ್ ಕನ್ನಡಿ ಧ್ವನಿ ಆಜ್ಞೆ (voice command) ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಮ್ಯೂಸಿಕ್​ ಪ್ಲೆ ಮಾಡುವುದು, ನ್ಯೂಸ್​ ಓದುವುದು, ಹವಾಮಾನ ವರದಿಯನ್ನು ನೀಡುವುದಲ್ಲದೆ ಮತ್ತು ಅಲೆಕ್ಸಾನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಕೋವಿಡ್​ ಸಾಂಕ್ರಾಮಿಕ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ಕಚ್ಚಾ ವಸ್ತುಗಳು ಲಭ್ಯವಿಲ್ಲದ ಕಾರಣ ಸ್ಮಾರ್ಟ್ ಮಿರರ್ ತಯಾರಿಸಲು ವಿದ್ಯಾರ್ಥಿ ಸುಮಾರು ನಾಲ್ಕು ತಿಂಗಳು ತೆಗೆದುಕೊಂಡಿದ್ದಾನೆ. ಎಲ್‌ಇಡಿ ಮಾನಿಟರ್, ರಾಸ್‌ಪ್ಬೆರಿ ಪೈ ಮತ್ತು ಎಐ ಸಾಧನ ಒಳಗೊಂಡಂತೆ ಹಾರ್ಡ್‌ವೇರ್ ತಂತ್ರಜ್ಞಾನವನ್ನು ಹೊಂದಿರುವ (2-way mirror) ಈ ಕನ್ನಡಿಯಿಂದ ಸ್ಮಾರ್ಟ್ ಮಿರರ್ ಅನ್ನು ಮಾಡಲಾಗಿದೆ ಎಂದು ವಿದ್ಯಾರ್ಥಿ ಸ್ವಾಧಿನ್ ಹೇಳಿದ್ದಾರೆ. ತಯಾರಿಕೆಗೆ ಸುಮಾರು ರೂ. 20,000 ರೂ. ಹಣ ಖರ್ಚಾಗಿದೆ.

ಈ ಸ್ಮಾರ್ಟ್​ ತಂತ್ರಜ್ಞಾನವು ವಯಸ್ಸಾದವರು ಮತ್ತು ವಿಕಲಚೇತನರಿಗೆ ಹಾಸಿಗೆಯಿಂದ ಚಲಿಸದೆ ದೂರದಿಂದಲೇ ತಮ್ಮ ಮನೆಗಳಲ್ಲಿನ ಎಲೆಕ್ಟ್ರಾನಿಕ್​​ ಸಾಧನಗಳನ್ನು ನಿರ್ವಹಿಸಲು ಸಹಾಯಕವಾಗಿದೆ.

ಇದನ್ನೂ ಓದಿ:Video: ಸೇನಾ ಸಮವಸ್ತ್ರ ಧರಿಸಿ ರಾಷ್ಟ್ರಗೀತೆ ಹಾಡಿದ ಐದರ ಬಾಲೆಗೆ ಸಿಎಂ ಶ್ಲಾಘನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.