ಹರಿದ್ವಾರ: ಅರ್ಧ ಗಂಟೆಯಲ್ಲಿ 25 ಜನರಿಗೆ ಕಚ್ಚಿದ ನಾಯಿ, ಹೊಡೆದು ಕೊಂದ ಜನರು

ಹರಿದ್ವಾರ: ಅರ್ಧ ಗಂಟೆಯಲ್ಲಿ 25 ಜನರಿಗೆ ಕಚ್ಚಿದ ನಾಯಿ, ಹೊಡೆದು ಕೊಂದ ಜನರು
ರಸ್ತೆಯಲ್ಲಿ ತಮ್ಮ ಪಾಡಿಗೆ ಹೋಗುತ್ತಿದ್ದವರನ್ನು ಕಚ್ಚಿ ಗಾಯಗೊಳಿಸುತ್ತಿದ್ದ ನಾಯಿಯನ್ನು ಜನರು ಹೊಡೆದು ಕೊಂದಿದ್ದಾರೆ.
ಹರಿದ್ವಾರ: ಬೀದಿನಾಯಿಯೊಂದು ಕೇವಲ ಅರ್ಧಗಂಟೆಯ ಅವಧಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಜನರಿಗೆ ಕಚ್ಚಿರುವ ಘಟನೆ ಹರಿದ್ವಾರದ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ. ಇದರಿಂದಾಗಿ ಇಲ್ಲಿನ ಬಿರ್ಲಾ ಘಾಟ್‌ನಿಂದ ಹರ್ ಕಿ ಪೌರಿ ಪ್ರದೇಶದವರೆಗೆ ಭಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಕ್ರೋಶಗೊಂಡ ಜನರು ಬೀದಿನಾಯಿಯನ್ನು ಕೋಲುಗಳಿಂದ ಹೊಡೆದು ಕೊಂದಿದ್ದಾರೆ.
ರಸ್ತೆಯಲ್ಲಿ ತಮ್ಮ ಪಾಡಿಗೆ ಹೋಗುತ್ತಿದ್ದ ಜನರಿಗೆ ಬೀದಿನಾಯಿ ದಾಳಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಎಲ್ಲರೂ ಒಂದು ಗಂಟೆ ಅವಧಿಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಆಸ್ಪತ್ರೆಯಲ್ಲಿಯೂ ಗದ್ದಲ ವಾತಾವರಣ ಉಂಟಾಗಿತ್ತು.
ಬೀದಿ ಪ್ರಾಣಿಗಳನ್ನು ಹಿಡಿಯಲು ಅಭಿಯಾನ: ಹರಿದ್ವಾರ ಯಾತ್ರಾಸ್ಥಳವಾಗಿದ್ದು ಇಲ್ಲಿ ಬೀದಿ ಪ್ರಾಣಿಗಳನ್ನು ಹಿಡಿಯುವ ಕಾರ್ಯ ಮಾಡಲಾಗುತ್ತಿದೆ. ಈ ಬೀದಿ ನಾಯಿ ಪ್ರಕರಣದಲ್ಲಿ, ನಾಯಿಗೆ ಹುಚ್ಚು ಹಿಡಿದಿದ್ದರಿಂದ ಈ ರೀತಿ ಆಗಿದೆ ಎಂದು ಮಹಾನಗರ ಪಾಲಿಕೆಯ ಮೇಯರ್ ಅನಿತಾ ಶರ್ಮ ಹೇಳಿದ್ದಾರೆ.
ಇದನ್ನೂ ಓದಿ: 'ಇದು ಸ್ಕೂಟರ್ ಅಲ್ಲ ಕತ್ತೆ' ಓವರ್ಲೋಡ್ ವಸ್ತು ತುಂಬಿಕೊಂಡು ರೈಡ್: ವಿಡಿಯೋ ನೋಡಿ
