ಪೆರೋಲ್ ಅಂತ್ಯ: 40 ದಿನದ ಬಳಿಕ ಸುನಾರಿಯಾ ಜೈಲಿಗೆ ಮರಳಿದ ರಾಮ್ ರಹೀಮ್

author img

By

Published : Nov 25, 2022, 5:45 PM IST

dera chief ram rahim

ಆಶ್ರಮದ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪಂಚಕುಲದ ಸಿಬಿಐ ನ್ಯಾಯಾಲಯವು ಇವರಿಗೆ ಶಿಕ್ಷೆ ವಿಧಿಸಿದೆ. ಡೇರಾ ಮ್ಯಾನೇಜರ್ ರಣಜಿ ಸಿಂಗ್ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ 2002ರಲ್ಲಿ ರಾಮ್ ರಹೀಮ್‌ಗೆ ಶಿಕ್ಷೆ ವಿಧಿಸಲಾಗಿತ್ತು. ಇದರೊಂದಿಗೆ ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ರಾಮ್ ರಹೀಮ್ ದೋಷಿ ಎಂದು ಕೋರ್ಟ್ ಘೋಷಿಸಿದೆ.

ರೋಹ್ಟಕ್: ಡೇರಾ ಸಿರ್ಸಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಬಾಬಾ ಶುಕ್ರವಾರ ನ್ಯಾಯಾಲಯಕ್ಕೆ ಶರಣಾಗಲಿದ್ದು, 40 ದಿನಗಳ ಪೆರೋಲ್ ಮುಗಿಸಿದ ಬಳಿಕ ಮತ್ತೆ ಸುನಾರಿಯಾ ಜೈಲಿಗೆ ಮರಳುತ್ತಿದ್ದಾರೆ. ಮಧ್ಯಾಹ್ನದ ನಂತರ ರೋಹ್ಟಕ್ ತಲುಪುವ ಸಾಧ್ಯತೆ ಇದೆ. ಸುನಾರಿಯಾ ಜೈಲು ಬಾಗ್‌ಪತ್‌ನ ಬರ್ನಾವಾ ಆಶ್ರಮದಿಂದ ಭದ್ರತೆಗೆ ಒಳಪಡಲಿದೆ. ಪೆರೋಲ್ ಸಮಯದಲ್ಲಿ ರಾಮ್ ರಹೀಮ್ ಅವರು ನಡೆಸಿದ್ದ ಸತ್ಸಂಗವು ವಿವಾದದಲ್ಲಿ ಉಳಿದಿದೆ. ಈ ವೇಳೆ ಪೆರೋಲ್ ರದ್ದು ಮಾಡಬೇಕು ಎಂಬ ಭಕ್ತರಿಂದ ಆಗ್ರಹವೂ ಕೇಳಿಬಂದಿತ್ತು.

ಪೆರೋಲ್ ಅರ್ಜಿ ತಿರಸ್ಕಾರ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಅವರ ಪೆರೋಲ್ ಅರ್ಜಿಯನ್ನು ಹರಿಯಾಣ ಸರ್ಕಾರ ತಿರಸ್ಕರಿಸಿದೆ. ಕೊರೊನಾ ಕಾರಣದಿಂದಾಗಿ ಪೆರೋಲ್ ಅರ್ಜಿ ತಿರಸ್ಕರಿಸಲಾಗಿದೆ ಎಂದು ಸರ್ಕಾರ ವಾದಿಸಿದೆ. ರಾಮ್ ರಹೀಮ್ ಪರ ವಕೀಲರು ಸಲ್ಲಿಸಿರುವ ಆರನೇ ಅರ್ಜಿ ಇದಾಗಿದೆ.

40 ದಿನ 300 ಕ್ಕೂ ಹೆಚ್ಚು ಸತ್ಸಂಗ: ರಾಮ್ ರಹೀಮ್ ಅವರು ಪೆರೋಲ್ ಸಮಯದ 40 ದಿನಗಳಲ್ಲಿ 300 ಕ್ಕೂ ಹೆಚ್ಚು ಸತ್ಸಂಗಗಳನ್ನು ಪ್ರದರ್ಶಿಸಿದರು. ಈ ದಿನಗಳಲ್ಲಿ ಅವರು ಹಿಂದೂ ಧರ್ಮಕ್ಕೆ ಒತ್ತು ನೀಡಿದರು. ವೇದಗಳು ಜಗತ್ತಿನ ಅತ್ಯುತ್ತಮ ಗ್ರಂಥಗಳು ಎಂದು ಸಾರಿದರು. ಮಾದಕ ವ್ಯಸನದ ಬಗ್ಗೆ ಜನರಿಗೆ ಅರಿವು ಮೂಡಿಸಲು ಎರಡು ಹೊಸ ಹಾಡುಗಳನ್ನು ಸಹ ಬಿಡುಗಡೆ ಮಾಡಿದರು. ಡ್ರಗ್ಸ್ ವಿರುದ್ಧ ಅಭಿಯಾನ ಸಹ ಪ್ರಾರಂಭಿಸಲಾಯಿತು. ಹನಿಪ್ರೀತ್​​​​ಗೆ ಸಿಂಹಾಸನ ಸಿಗುವ ಚರ್ಚೆ ಬಿಟ್ಟ ಅವರು , ನಾವು ಗುರುಗಳು ಆಗಿದ್ದೇವೆ, ಇದ್ದೇವೆ ಮತ್ತು ಇರುತ್ತೇವೆ ಎಂದು ಹೇಳಿದರು.

ಜೈಲಿಗೆ ಸೇರುವ ಮುನ್ನ ಹಾಡು ಬಿಡುಗಡೆ: ರಾಮ್ ರಹೀಮ್ ಜೈಲಿಗೆ ಮರಳುವ ಮುನ್ನ ಮೂರನೇ ಹಾಡು ಬಿಡುಗಡೆ ಮಾಡಿದರು. ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ‘ಚಾಟ್ ಪೇ ಚಾಟ್’ ಎಂಬ ಹಾಡು ಲಾಂಚ್ ಆಗಿದ್ದು, ಈ ಹಾಡಿನಲ್ಲಿ ರಾಮ್ ರಹೀಮ್ ಮೊಬೈಲ್, ಡಿಜಿಟಲ್ ಗ್ಯಾಜೆಟ್‌ಗಳಿಂದ ದೇಹದ ಮೇಲೆ ಬೀರುವ ದುಷ್ಪರಿಣಾಮ ಕುರಿತು ಮಾತನಾಡಿದ್ದಾರೆ. ಇದಕ್ಕೂ ಮುನ್ನ ರಾಮ್ ರಹೀಮ್ ಅವರ ಮೊದಲ ಹಾಡು 'ಸದಿ ರಾತ್ ದೀಪಾವಳಿ' ಬಿಡುಗಡೆಗೊಂಡಿತು. ನಂತರ ವ್ಯಸನದ ಬಗ್ಗೆ 2ನೇ ಹಾಡು ಬಿಡುಗಡೆ ಮಾಡಲಾಯಿತು.

ಹಾಡುಗಳಿಗೆ ಬಿಡದ ವಿವಾದ: ಜೈಲಿನಿಂದ 40 ದಿನದ ಪೆರೋಲ್ ಸಮಯದಲ್ಲಿ ರಾಮ್ ರಹೀಮ್ ಅವರು ತಾವು ಹಾಡಿದ್ದ ಹಾಡುಗಳಿಂದ ವಿವಾದಕ್ಕೆ ಸಿಲುಕಿದ್ದಾರೆ. ದೆಹಲಿ ಮಹಿಳಾ ಆಯೋಗದ ಸ್ವಾತಿ ಮಲಿವಾಲ್ ಅವರು ಕೂಡ ರಾಮ್ ರಹೀಮ್ ಹಾಡುಗಳು ಮತ್ತು ಸತ್ಸಂಗಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಎಚ್‌ಸಿ ಅರೋರಾ ವಕೀಲರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ನಂತರ ಅವರು ಅರ್ಜಿ ಹಿಂಪಡೆದರು.

T10 T20 ಕ್ರಿಕೆಟ್ ಪ್ರಾರಂಭಿಸಿದ್ದೆ: ರಾಮ್ ರಹೀಮ್ ಅವರು 24 ವರ್ಷದ ಹಿಂದೆ ಹರಿಯಾಣದ ಸಿರ್ಸಾ ಜಿಲ್ಲೆಯ ಜಲಾಲನಾ ಗ್ರಾಮದಲ್ಲಿ T10 ಮತ್ತು T20 ಕ್ರಿಕೆಟ್ ಪ್ರಾರಂಭಿಸಿದರು ಎಂದು ಸತ್ಸಂಗದಲ್ಲಿ ಹೇಳಿಕೊಂಡಿದ್ದಾರೆ. ನಾನು ಇದನ್ನು ಆರಂಭಿಸಿದಾಗ ದೊಡ್ಡ ಆಟಗಾರರು ಇದೇನು ಕ್ರಿಕೆಟ್ ಅಂದಿದ್ದರು. ಆಗ ಯಾರೂ ಈ ಆಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಯಾರೂ ಅದನ್ನು ಆಡಲು ಬಯಸಲಿಲ್ಲ. ಆದರೆ, ಇಂದು ಇಡೀ ಜಗತ್ತು ಈ ಸ್ವರೂಪ ಅಳವಡಿಸಿಕೊಂಡಿದೆ. ಚೆಂಡು ಕ್ರೀಡಾಂಗಣದಿಂದ ನಿರ್ಗಮಿಸಿದಾಗ 8 ರನ್ ಮಾತ್ರ ಲಭ್ಯವಿತ್ತು. ಸಿಕ್ಸರ್‌ಗಳು ಎಂಟರನ್ನು ಮರೆಸುವ ದಿನ ದೂರವಿಲ್ಲ ಎಂದು ರಾಮ್ ರಹೀಮ್ ತಿಳಿಸಿದ್ದಾರೆ.

ಇದನ್ನೂಓದಿ:ಶ್ರದ್ಧಾ ಕೊಲೆ ಪ್ರಕರಣದ ತನಿಖೆ ಚುರುಕು: ದಂತವೈದ್ಯರ ಹೇಳಿಕೆ ದಾಖಲಿಸಿಕೊಂಡ ದೆಹಲಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.