ಕೋಪದಲ್ಲಿ ಕತ್ತು ಹಿಸುಕಿ ಕೊಂದು 35 ಪೀಸ್​ ಮಾಡಿದೆ: ಕೋರ್ಟ್​ಗೆ ತಿಳಿಸಿದ ಶ್ರದ್ಧಾ ಹಂತಕ ಅಫ್ತಾಬ್​

author img

By

Published : Nov 22, 2022, 8:01 PM IST

Updated : Nov 22, 2022, 8:14 PM IST

accused-aaftab-poonawala

ಐದು ದಿನಗಳ ಕಸ್ಟಡಿ ಅವಧಿ ಮುಗಿದಿದ್ದು, ಶ್ರದ್ಧಾ ವಾಲ್ಕರ್​ ಹಂತಕ ಅಫ್ತಾಬ್​ನನ್ನು ಇಂದು ದೆಹಲಿ ಹೈಕೋರ್ಟ್​ಗೆ ಹಾಜರುಪಡಿಸಲಾಯಿತು. ವಿಚಾರಣೆಯ ಬಳಿಕ ಮತ್ತೆ 4 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿರುವ ಶ್ರದ್ಧಾ ವಾಲ್ಕರ್​ಳ ಭೀಕರ ಹತ್ಯೆ ಕೋಪದಲ್ಲಾದ ಘಟನೆಯಾಗಿದೆ. ವಾಗ್ವಾದದ ವೇಳೆ ಆಕೆಯ ಕುತ್ತಿಗೆ ಹಿಸುಕಿ ಕೊಂದೆ. ಬಳಿಕ ಮೃತದೇಹವನ್ನು 35 ತುಂಡು ಮಾಡಿದೆ ಎಂದು ಆರೋಪಿ ಅಫ್ತಾಬ್​ ಅಮೀನ್​ ಪೂನಾವಾಲಾ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯ ವಿಚಾರಣೆಗಾಗಿ ಕಸ್ಟಡಿ ಅವಧಿಯನ್ನು ವಿಸ್ತರಿಸಲು ಕೋರಿದ್ದ ಪೊಲೀಸರು, ಕೋರ್ಟ್​ ಮುಂದೆ ಹಾಜರುಪಡಿಸಿದಾಗ ಹಂತಕ ಘಟನೆಯನ್ನು ಉಸುರಿದ್ದಾನೆ. ಬಳಿಕ ಹೆಚ್ಚಿನ ವಿಚಾರಣೆಗೆ ಅಫ್ತಾಬ್​ನ ಕಸ್ಟಡಿ ಅವಧಿಯನ್ನು 4 ದಿನಗಳವರೆಗೆ ವಿಸ್ತರಿಸಿದೆ. ಈ ಮಧ್ಯೆ, ಪ್ರಕರಣವನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಕೋಪದಲ್ಲಿ ಕತ್ತು ಹಿಸುಕಿ ಕೊಂದು, 35 ಪೀಸ್​ ಮಾಡಿದೆ
ಕೋಪದಲ್ಲಿ ಕತ್ತು ಹಿಸುಕಿ ಕೊಂದು, 35 ಪೀಸ್​ ಮಾಡಿದೆ

ಶ್ರದ್ಧಾ ಹತ್ಯಾಕಾಂಡದ 10 ಪ್ರಮುಖ ಬೆಳವಣಿಗೆಗಳು

  1. ಶ್ರದ್ಧಾ ವಾಲ್ಕರ್​ ಹತ್ಯೆ ಕೇಸನ್ನು ದೆಹಲಿ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್​ ವಜಾಗೊಳಿಸಿತು.
  2. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠ ಇದು ಪ್ರಚಾರಕ್ಕಾಗಿ ಸಲ್ಲಿಸಲಾದ ಹಿತಾಸಕ್ತಿ ಅರ್ಜಿಯಾಗಿದೆ. ಯಾವ ಕಾರಣಕ್ಕಾಗಿ ಕೇಸ್​ ವರ್ಗ ಮಾಡಬೇಕು ಎಂಬ ಬಗ್ಗೆ ಒಂದೇ ಒಂದು ಕಾರಣವನ್ನು ನೀಡಿಲ್ಲ. ಹೀಗಾಗಿ ಅರ್ಜಿಯನ್ನು ಕಾನೂನಿನ ಪರಿವ್ಯಾಪ್ತಿಯಲ್ಲಿ ಪರಿಗಣಿಸಲಾಗದು ಎಂದಿದೆ.
  3. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ, ಶ್ರದ್ಧಾ ವಾಲ್ಕರ್​ಳ ಕತ್ತು ಹಿಸುಕಿ ಕೊಲೆ ಮಾಡಿದ, ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಪೀಸ್​ ಪೀಸ್​ ಮಾಡಿದ, ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ ಶೀತಪೆಟ್ಟಿಗೆಯಲ್ಲಿ ಇಟ್ಟು, ನಂತರ ಅವುಗಳನ್ನು ರಾತ್ರಿ ವೇಳೆ ನಗರದ ಹಲವು ಭಾಗಗಳಲ್ಲಿ ಚೆಲ್ಲಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
  4. ಹಣಕಾಸಿನ ವಿಚಾರದಲ್ಲಿ ಪ್ರೇಮಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಮೇ 18 ರ ಸಂಜೆ ಹಂತಕ ಪೂನಾವಾಲಾ ಶ್ರದ್ಧಾ ವಾಲ್ಕರ್‌ಳನ್ನು ಕೊಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
  5. ದೆಹಲಿ ಹೈಕೋರ್ಟ್​ ಅಫ್ತಾಬ್ ಪೂನಾವಾಲಾನ ಪೊಲೀಸ್ ಕಸ್ಟಡಿಯ ಅವಧಿಯನ್ನು ಇನ್ನೂ 4 ದಿನಗಳವರೆಗೆ ವಿಸ್ತರಿಸಿದೆ. ಇಂದು ನಡೆದ ವಿಶೇಷ ವಿಚಾರಣೆಯಲ್ಲಿ ಅಫ್ತಾಬ್​ನನ್ನು ಗೌಪ್ಯವಾಗಿ ಹಾಜರುಪಡಿಸಲಾಯಿತು. ಬಳಿಕ ಕೋರಿಕೆಯಂತೆ ವಿಚಾರಣಾ ಅವಧಿಯನ್ನು ವಿಸ್ತರಿಸಲಾಯಿತು.
  6. ಆರೋಪಿಯ ಯೋಗಕ್ಷೇಮ ಮತ್ತು ಪೊಲೀಸರ ತೀವ್ರ ವಿಚಾರಣೆ ಬಗ್ಗೆ ಕೋರ್ಟ್​ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಫ್ತಾಬ್​ ತಾನು ಕ್ಷೇಮವಾಗಿದ್ದೇನೆ ಮತ್ತು ತನಿಖೆಗೆ ಸಹಕರಿಸುತ್ತಿದ್ದೇನೆ ಎಂದು ಹೇಳಿದ. ಶ್ರದ್ಧಾ ತನ್ನನ್ನು ಪ್ರಚೋದಿಸಿದ್ದಕ್ಕೆ ಸಿಟ್ಟಿಗೆದ್ದು ಕ್ರುದ್ಧನಾಗಿ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.
  7. ತನಿಖೆಯ ಭಾಗವಾಗಿ ಆರೋಪಿಯನ್ನು ಕೆಲವು ಸ್ಥಳಗಳಿಗೆ ಕರೆದೊಯ್ಯಲು ತನಿಖಾಧಿಕಾರಿಗಳು ಕೋರ್ಟ್​ ಅನುಮತಿ ಕೇಳಿದರು. ಇದನ್ನು ಅಫ್ತಾಬ್​ ಕಾನೂನು ಸಲಹೆಗಾರರು ವಿರೋಧಿಸಿ, ಈ ಎಲ್ಲಾ ಸ್ಥಳಗಳು ಆತನಿಗೆ ಹೊಸತು. ಹೀಗಾಗಿ ಘಟನೆಯನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಾದಿಸಿದರು.
  8. ಶ್ರದ್ಧಾ ಹತ್ಯೆ ಆರೋಪಿ ಪೂನಾವಾಲಾನ ಸುಳ್ಳು ಪತ್ತೆ ಪರೀಕ್ಷೆ(ಪಾಲಿಗ್ರಾಫ್​) ನಡೆಸುವ ಕುರಿತಾಗಿ ದೆಹಲಿ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯವನ್ನು (ಎಫ್‌ಎಸ್‌ಎಲ್) ಸಂಪರ್ಕಿಸಿದ್ದಾರೆ. ನಾಳೆ(ಬುಧವಾರ) ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಅಫ್ತಾಬ್‌ನಲ್ಲಿ ನಾರ್ಕೋ ಪರೀಕ್ಷೆಯನ್ನು ಮುಂದಿನ 5 ದಿನಗಳ ಒಳಗೆ ನಡೆಸುವಂತೆ ಕೋರ್ಟ್​ ಆದೇಶಿಸಿದೆ. ಇದರ ಜೊತೆಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುಮತಿ ಕೋರಿ ದೆಹಲಿ ಪೊಲೀಸರು ಕೆಳ ನ್ಯಾಯಾಲಯದ ಮೊರೆ ಹೋಗಿದ್ದರು.
  9. ಆರು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಶ್ರದ್ಧಾ ತಂದೆಯ ದೂರಿನ ಆಧಾರದ ಮೇಲೆ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಬಂಧಿಸಿದ್ದಾರೆ.
  10. ಅಫ್ತಾಬ್ ಮತ್ತು ಶ್ರದ್ಧಾ ಡೇಟಿಂಗ್ ಆ್ಯಪ್​ ಮೂಲಕ ಪರಿಚಯವಾದರು. ನಂತರ ಪ್ರೀತಿಸಿ, ಮುಂಬೈನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ಬಳಿಕ ದೆಹಲಿಗೆ ವಲಸೆ ಹೋಗಿ ಅಲ್ಲಿ ನೆಲೆಸಿದ್ದರು. ಶ್ರದ್ಧಾ ತಂದೆ ನೀಡಿದ ನಾಪತ್ತೆ ದೂರಿನ ಮೇರೆಗೆ ಪೊಲೀಸರು ನವೆಂಬರ್ 10 ರಂದು ಎಫ್ಐಆರ್ ದಾಖಲಿಸಿದ್ದರು.

ಓದಿ: ಒಂದು ಕಡೆ ಭೀಭತ್ಸ.. ಮತ್ತೊಂದು ಕಡೆ ಒಲುಮೆಯ ಸ್ನೇಹ.. ಎರಡು ವೈರುಧ್ಯದ ಪ್ರೇಮ್​ ಕಹಾನಿ

ಶ್ರದ್ಧಾ ಮರ್ಡರ್ ಕೇಸ್​: ಆರೋಪಿ ಅಫ್ತಾಬ್​ಗೆ ನಡೆಯದ ನಾರ್ಕೊ ಟೆಸ್ಟ್​

Last Updated :Nov 22, 2022, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.