ದುಬೈ- ಬೆಂಗಳೂರು, ದುಬೈ- ಹೈದರಾಬಾದ್​ ವಿಮಾನಗಳ ನಡುವೆ ಸ್ಪಲ್ಪದರಲ್ಲೇ ತಪ್ಪಿದ ಡಿಕ್ಕಿ: ವರದಿ ಕೇಳಿದ ಡಿಜಿಸಿಎ

author img

By

Published : Jan 15, 2022, 1:40 PM IST

EMIRATES-COLLISION

ನಿಗದಿಯಂತೆ ದುಬೈ ಬೆಂಗಳೂರು ವಿಮಾನ ಬೆಂಗಳೂರಿನತ್ತ ಹೊರಡಲು ಟೇಕ್​ ಅಪ್ ಆಗಿತ್ತು. ಇದೇ ವೇಳೆ ರಾತ್ರಿ 9;45ಕ್ಕೆ ಟೇಕ್​ ಅಪ್​ ಆಗಬೇಕಿದ್ದ ವಿಮಾನ ಸಹ ಪೂರ್ವ ನಿಗದಿಗಿಂತ ಮೊದಲೇ ಟೇಕ್​ ಆಗಿದೆ. ಹೀಗಾಗಿ ಎರಡು ವಿಮಾನಗಳ ನಡುವೆ ಡಿಕ್ಕಿ ಆಗುವ ಸಂಭವ ಇತ್ತು. ಆದರೆ ಅದೃಷ್ಟವಶಾತ್​​ ಎರಡೂ ವಿಮಾನಗಳ ನಡುವೆ ಸಂಭವಿಸಬಹುದಾಗಿದ್ದ ಡಿಕ್ಕಿ ಕೂದಲೆಳೆ ಅಂತರದಿಂದ ತಪ್ಪಿದ್ದು, ಭಾರಿ ಅನಾಹುತವೊಂದು ತಪ್ಪಿದೆ.

ದುಬೈ/ ನವದೆಹಲಿ: ದುಬೈನ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುತ್ತಿದ್ದ ವೇಳೆ ದುಬೈನಿಂದ ಹೈದರಾಬಾದ್ ಮತ್ತು ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಎಮಿರೇಟ್ಸ್ ವಿಮಾನಗಳ ನಡುವೆ ಆಗಬೇಕಿದ್ದ ಡಿಕ್ಕಿ ಸ್ಪಲ್ಪದರಲ್ಲೇ ತಪ್ಪಿದ್ದು, ಭಾರಿ ಅನಾಹುತದಿಂದ ಬಚಾವ್​ ಆಗಿ ನಿಟ್ಟುಸಿರು ಬಿಡುವಂತಾಗಿದೆ.

ನಿಗದಿಯಂತೆ ದುಬೈ ಬೆಂಗಳೂರು ವಿಮಾನ ಬೆಂಗಳೂರಿನತ್ತ ಹೊರಡಲು ಟೇಕ್​ ಅಪ್ ಆಗಿತ್ತು. ಇದೇ ವೇಳೆ, ಮತ್ತೊಂದು ವಿಮಾನ ಸಹ ಟೇಕ್​ ಅಪ್​ ಆಗಿದೆ. ಹೀಗಾಗಿ ಎರಡು ವಿಮಾನಗಳ ನಡುವೆ ಡಿಕ್ಕಿ ಆಗುವ ಸಂಭವ ಇತ್ತು. ಆದರೆ ಅದೃಷ್ಟವಶಾತ್​​ ಎರಡೂ ವಿಮಾನಗಳ ನಡುವೆ ಸಂಭವಿಸಬಹುದಾಗಿದ್ದ ಡಿಕ್ಕಿ ಕೂದಲೆಳೆ ಅಂತರದಿಂದ ತಪ್ಪಿದೆ.

ಹೀಗಾಗಿದ್ದು ಏಕೆ?

ಎಮಿರೇಟ್ಸ್ ವಿಮಾನ ವೇಳಾಪಟ್ಟಿ ಪ್ರಕಾರ, ಎರಡು ವಿಮಾನಗಳ ನಿರ್ಗಮನ ಸಮಯದ ನಡುವೆ ಕೆಲ ನಿಮಿಷಗಳ ಅಂತರವಿರುತ್ತದೆ. ದುಬೈನಿಂದ ಹೈದರಾಬಾದ್ ಗೆ ಬರುತ್ತಿದ್ದ ಇಕೆ -524 ವಿಮಾನ 30 ಆರ್ ನಿಂದ ಟೇಕ್ ಆಫ್ ಮಾಡಲು ಬರುತ್ತಿದ್ದಾಗ ಅದೇ ದಿಕ್ಕಿನಲ್ಲಿ ಅತಿ ವೇಗವಾಗಿ ಮತ್ತೊಂದು ವಿಮಾನ ಬರುತ್ತಿರುವುದನ್ನು ಸಿಬ್ಬಂದಿ ನೋಡಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ವಿಮಾನಯಾನ ನಿಯಂತ್ರಣ ಅಧಿಕಾರಿಗಳು ಟೆಕ್​ ಅಪ್​ ಆಗದಂತೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಆಗಬಹುದಾಗಿದ್ದ ಅನಾಹುತವೊಂದು ತಪ್ಪಿದೆ.

ಶುರುವಾದ ತನಿಖೆ: ಮಾಹಿತಿ ಹಂಚಿಕೊಳ್ಳುವಂತೆ ಭಾರತದ ಮನವಿ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಯುಎಇ ವಾಯುಯಾನ ಸಂಸ್ಥೆ ತನಿಖೆಗೆ ಆದೇಶಿಸಿದ್ದು, ತನಿಖೆ ಕೂಡಾ ಆರಂಭಿಸಿದೆ. ಈ ನಡುವೆ ಈ ತನಿಖೆಯ ಮಾಹಿತಿಯನ್ನು ತನ್ನೊಂದಿಗೆ ಹಂಚಿಕೊಳ್ಳಬೇಕು ಎಂದು ಅಲ್ಲಿನ ಅಧಿಕಾರಿಗಳನ್ನು ಕೇಳಿಕೊಂಡಿದೆ. ಈ ವಿಷಯವನ್ನಿ ಡಿಜಿಸಿಎ ಮುಖ್ಯಸ್ಥ ಅರುಣ್​ ಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಆ ದೇಶದಲ್ಲಿ ಈ ಘಟನೆ ನಡೆದಿರುವುದರಿಂದ ಭಾರತೀಯ ವಿಮಾನಯಾನ ಇಲಾಖೆ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ತನಿಖಾ ಮಾಹಿತಿ ಹಂಚಿಕೊಳ್ಳುವಂತೆ ಕೇಳಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದನ್ನು ಓದಿ:ಕುಸಿದ ಮನೆ ಅವಶೇಷದಡಿ ಸಿಲುಕಿದ್ದ ಶ್ವಾನ.. ಆರು ದಿನಗಳ ಬಳಿಕವೂ ಬದುಕುಳಿದ ಬಡಜೀವ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.