ರಾಜ್ಯಗಳು ಒಪ್ಪಿದರೆ ಗ್ರಾಹಕರಿಗೆ ಬಂಪರ್​... ಅಡುಗೆ ಎಣ್ಣೆ ಬೆಲೆ ಕಡಿಮೆ ಮಾಡುವಂತೆ ಸೂಚಿಸಿ 8 ರಾಜ್ಯಗಳಿಗೆ ಕೇಂದ್ರದ ಪತ್ರ..

author img

By

Published : Oct 14, 2021, 9:52 PM IST

edible oil

ಅಡುಗೆ ಎಣ್ಣೆಗಳ ಬೆಲೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವು ಎಂಟು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ರಾಜ್ಯಗಳು ಪತ್ರಕ್ಕೆ ಒಪ್ಪಿಗೆ ನೀಡಿದರೆ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಪ್ರತಿ ಕೆಜಿಗೆ ರೂ.15 ರಿಂದ 20 ರೂ. ಕಡಿಮೆಯಾಗಲಿದೆ.

ನವದೆಹಲಿ: ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಎಲ್ಲಾ ಪ್ರಮುಖ ತೈಲ ಉತ್ಪಾದಿಸುವ ರಾಜ್ಯಗಳಿಗೆ ಪತ್ರ ಬರೆದು, ಆಮದು ಸುಂಕ ಕಡಿತಕ್ಕೆ ಅನುಗುಣವಾಗಿ ಖಾದ್ಯ ತೈಲಗಳ ಬೆಲೆಯನ್ನು ಇಳಿಸಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ತೈಲ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಗೆ ಪತ್ರ ಬರೆಯಲಾಗಿದೆ.

ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲೆ ಕೇಂದ್ರ ಸರ್ಕಾರವು ವಿಧಿಸಿದ್ದ ಶುಲ್ಕವನ್ನು 2.5 ರಿಂದ ಶೂನ್ಯಕ್ಕೆ ಇಳಿಸಿದೆ. ಈ ಎಣ್ಣೆಗಳ ಮೇಲಿನ ಕೃಷಿ ಸೆಸ್ ಅನ್ನು ಕಚ್ಚಾ ತಾಳೆ ಎಣ್ಣೆಗೆ ಶೇ 20 ರಿಂದ 7.5 ಮತ್ತು ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ ಶೇ 5 ಕ್ಕೆ ಇಳಿಸಲಾಗಿದೆ.

ಸುಂಕ ಇಳಿಕೆಯ ಲಾಭವನ್ನು ಗ್ರಾಹಕರಿಗೆ ನೀಡಿ: ಕೇಂದ್ರದ ಸಲಹೆ

ಖಾದ್ಯ ತೈಲಗಳ ಬೆಲೆ ಹೆಚ್ಚಿರುವುದರಿಂದ ಮುಂಬರುವ ಹಬ್ಬ ಹರಿದಿನಗಳಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೇಂದ್ರದಿಂದ ಮಾಡಿದ ಸುಂಕ ಕಡಿತದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಗಿದೆ.

ಪತ್ರಕ್ಕೆ ರಾಜ್ಯಗಳು ಒಪ್ಪಿಗೆ ಸೂಚಿಸಿದರೆ ಖಾದ್ಯ ತೈಲಗಳ ಬೆಲೆ ಪ್ರತಿ ಕೆಜಿಗೆ (ಅಂದಾಜು) ರೂ.15-20 ರೂ, ನಷ್ಟು ಇಳಿಯಲಿದೆ ಎಂದು ಅಂದಾಜಿಸಲಾಗಿದೆ.

ಅ.14 ರಿಂದಲೇ ಸುಂಕ ಕಡಿತ ಜಾರಿ

ಸುಂಕ ಕಡಿತವು ಅಕ್ಟೋಬರ್ 14, 2021 ರಿಂದ ಮಾರ್ಚ್ 31, 2022 ರವರೆಗೆ ಜಾರಿಯಲ್ಲಿರುತ್ತದೆ. ಎಲ್ಲಾ ಕಚ್ಚಾ ಖಾದ್ಯ ಎಣ್ಣೆಗಳ ಮೇಲಿನ ಕೃಷಿ ಮೂಲ ಸೌಕರ್ಯ ಸೆಸ್ ಇದುವರೆಗೆ ಶೇ 20ರಷ್ಟಿತ್ತು. ಕಡಿತದ ನಂತರ, ಕಚ್ಚಾ ತಾಳೆ ಎಣ್ಣೆಯ ಮೇಲೆ ಪರಿಣಾಮಕಾರಿ ತೆರಿಗೆ ಶೇ 8.25, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಪ್ರತಿ ಹಿಂದಿನ ಶೇ.5.5 ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೂರ್ಯಕಾಂತಿ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲೆ ಶೇ 32.5 ಆಗಲಿದೆ.

ಹೀಗಾಗಿ, ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಮತ್ತು ಆರ್​​ಬಿಡಿ ಪಾಮೋಲಿನ್, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಗಳಿಗೆ ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ.

ಭಾರತ ಸರ್ಕಾರದ ಈ ಕ್ರಮವು ಭಾರತದಲ್ಲಿ ಖಾದ್ಯ ತೈಲಗಳ ದೇಶೀಯ ಬೆಲೆಯನ್ನು ತಗ್ಗಿಸಲಿದ್ದು, ಇದರಿಂದ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಪ್ರತಿ ಕೆಜಿಗೆ ರೂ.15 ರಿಂದ 20 ರೂ. ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.