ಹೈದರಾಬಾದ್ ವಿದ್ಯಾರ್ಥಿಗೆ 1.30 ಕೋಟಿ ರೂ. ವಿದ್ಯಾರ್ಥಿವೇತನ: ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ ಬಂಪರ್ ಆಫರ್

author img

By

Published : Aug 6, 2022, 12:10 PM IST

case-western-reserve-university-bumper-offer-of-rs-dot-1-30-crore-scholarship-for-hyderabad-student

ಅಮೆರಿಕದ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಿಂದ ಹೈದರಾಬಾದಿನ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗೆ ರೂ 1.30 ಕೋಟಿ ವಿದ್ಯಾರ್ಥಿವೇತನವನ್ನು ನೀಡಲಾಗಿದೆ.

ಹೈದರಾಬಾದ್ : ಅಮೆರಿಕದ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯವು ಹೈದರಾಬಾದಿನ ವಿದ್ಯಾರ್ಥಿಗೆ ಅಮೆರಿಕದಲ್ಲಿ ಪದವಿ ವ್ಯಾಸಂಗವನ್ನು ಮುಂದುವರೆಸಲು 1.30 ಕೋಟಿ ರೂ ವಿದ್ಯಾರ್ಥಿವೇತನವನ್ನು ನೀಡಿದೆ. ಈ ಬಗ್ಗೆ ವಿಶ್ವವಿದ್ಯಾಲಯವು ಸ್ವೀಕಾರ ಪತ್ರ ಮತ್ತು ವಿದ್ಯಾರ್ಥಿವೇತನ ಪತ್ರವನ್ನು ವಿದ್ಯಾರ್ಥಿಗೆ ಕಳುಹಿದೆ.

ಇಲ್ಲಿನ ಗಚಿಬೌಲಿಯ ಖಾಸಗಿ ಶಾಲೆಯಲ್ಲಿ ICSE ಪಠ್ಯಕ್ರಮದೊಂದಿಗೆ 12 ನೇ ತರಗತಿ ಪೂರ್ಣಗೊಳಿಸಿರುವ ವೇದಾಂತ್(18), ಈ ಮೂಲಕ ಅಮೆರಿಕದಲ್ಲಿ ನರವಿಜ್ಞಾನವನ್ನು ಅಧ್ಯಯನ ಮಾಡಲಿದ್ದಾರೆ. ಶೈಕ್ಷಣಿಕ ಅವಕಾಶಗಳು ಮತ್ತು ತರಬೇತಿಯ ಮೂಲಕ ವಿದ್ಯಾರ್ಥಿಗಳನ್ನು ಪೋಷಿಸುವ ಡೆಕ್ಸ್‌ಟೆರಿಟಿ ಗ್ಲೋಬಲ್‌ ಸಂಸ್ಥೆ ಈ ವಿದ್ಯಾರ್ಥಿಯನ್ನು ಗುರುತಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದೆ. ಇದೇ ತಿಂಗಳ 12ರಂದು ವೇದಾಂತ್ ಅಮೆರಿಕಕ್ಕೆ ತೆರಳಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿ ವೇದಾಂತ್​, ಈ ವಿಶ್ವವಿದ್ಯಾಲಯವು ವೈದ್ಯಕೀಯ ಅಧ್ಯಯನದಲ್ಲಿ ವಿಶ್ವಮಟ್ಟದಲ್ಲಿ 16ನೇ ಸ್ಥಾನದಲ್ಲಿದ್ದು, ಒಟ್ಟು 17 ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಈ ವಿಶ್ವವಿದ್ಯಾಲಯ ರೂಪಿಸಿದೆ. ಇಂತಹ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೇತನ ಸಿಕ್ಕಿದ್ದು ಖುಷಿಯಾಗಿದೆ ಎಂದು ಹೇಳಿದರು. ವೇದಾಂತ್ ಅವರ ತಂದೆ ಖಾಸಗಿ ಆಸ್ಪತ್ರೆಯಲ್ಲಿ ದಂತವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ :Vice president election: ಉಪರಾಷ್ಟ್ರಪತಿ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ, ಹಕ್ಕು ಚಲಾಯಿಸಿದ ಪಿಎಂ ಮೋದಿ!

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.