'ಬುಲ್ಡೋಜರ್ ಬಾಬಾ' ಬಳಿಕ 'ಬುಲ್ಡೋಜರ್ ರಾಖಿ'... ಯುಪಿಯಲ್ಲಿ ಟ್ರೆಂಡಿಂಗ್​ನಲ್ಲಿದೆ ವಿಶೇಷ ರಾಖಿ

author img

By

Published : Aug 6, 2022, 4:40 PM IST

Updated : Aug 6, 2022, 6:03 PM IST

Bulldozer rakhis

ಉತ್ತರ ಪ್ರದೇಶದ ವಿವಿಧ ಮಾರುಕಟ್ಟೆಗಳಲ್ಲಿ ಇದೀಗ ಬುಲ್ಡೋಜರ್ ರಾಖಿಗಳ ಸದ್ದು ಜೋರಾಗಿದೆ. ಗ್ರಾಹಕರು ವಿಶೇಷ ರಾಖಿಗಳ ಖರೀದಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.

ವಾರಣಾಸಿ(ಉತ್ತರ ಪ್ರದೇಶ): ಸಹೋದರ- ಸಹೋದರಿಯರ ಪ್ರೀತಿಯ ಪ್ರತೀಕ ರಕ್ಷಾ ಬಂಧನ ಆಚರಣೆಗೆ ದಿನಗಣನೇ ಆರಂಭಗೊಂಡಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ವಿಭಿನ್ನ ರೀತಿಯ ರಾಖಿಗಳು ಗಮನ ಸೆಳೆಯುತ್ತಿವೆ. ಆದರೆ, ಉತ್ತರ ಪ್ರದೇಶದಲ್ಲಿ ಬುಲ್ಡೋಜರ್​​ ರಾಖಿ ಸಿಕ್ಕಾಪಟ್ಟೆ ಟ್ರೆಂಡ್​​​ನಲ್ಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನ ಬುಲ್ಡೋಜರ್ ಬಾಬಾ ಎಂದು ಈ ಹಿಂದಿನಿಂದಲೂ ಬಿಂಬಿಸಲಾಗ್ತಿದೆ. ಇದೀಗ 'ಬುಲ್ಡೋಜರ್ ರಾಖಿ' ಎಂದು ಹೆಸರಿಟ್ಟಿರುವ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ.

ಪ್ರಮುಖವಾಗಿ ಉತ್ತರ ಪ್ರದೇಶದ ಪೂರ್ವಾಂಚಲ್​​ನಲ್ಲಿ ಇವುಗಳಿಗೆ ಇನ್ನಿಲ್ಲದ ಬೇಡಿಕೆ ಇದೆ. ಮಾರುಕಟ್ಟೆಗಳಲ್ಲಿ ಹೆಚ್ಚು ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಕಾರಣ ರಾಖಿ ಮಾರಾಟ ಮಳಿಗೆಗಳಿಗೆ ಹೆಚ್ಚಿನ ಗ್ರಾಹಕರು ಈ ವಿಶೇಷ ರಾಖಿ ಖರೀದಿಗೆ ಆಗಮಿಸ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವ್ಯಾಪಾರಿ ಮೊಹಮ್ಮದ್ ಆಸಿಫ್​, ಕಳೆದ 10 ದಿನಗಳಲ್ಲಿ 100ಕ್ಕೂ ಹೆಚ್ಚು ರಾಖಿಗಳ ಬಾಕ್ಸ್​ಗಳು ಮಾರಾಟವಾಗಿವೆ. ಈಗಲೂ ಹೆಚ್ಚಿನ ಆರ್ಡರ್​​ಗಳು ಬರುತ್ತಿದ್ದು, ಜನರು ಇವುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಮೋದಿ, ಸಿಎಂ ಯೋಗಿ ಭಾವಚಿತ್ರ ಇರುವ ರಾಖಿಗಳಿಗೂ ಬೇಡಿಕೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡ್ತಿದ್ದಾರೆಂದು ಹೇಳಿದ್ದಾರೆ.

ಯುಪಿಯಲ್ಲಿ ಟ್ರೆಂಡಿಂಗ್​ನಲ್ಲಿದೆ ವಿಶೇಷ ಬುಲ್ಡೋಜರ್​​ ರಾಖಿ

2017ರಿಂದಲೂ ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ್​ ಅವರು ಆರೋಪಿಗಳ ವಿರುದ್ಧ ಸಮರ ಸಾರಿದ್ದು, ಬುಲ್ಡೋಜರ್​​ಗಳ ಮೂಲಕ ಅವರ ನಿವಾಸ, ಕಚೇರಿ ಧ್ವಂಸಗೊಳಿಸುತ್ತಿದ್ದಾರೆ. ಹೀಗಾಗಿ, ಅವರನ್ನು ಬುಲ್ಡೋಜರ್ ಬಾಬಾ ಎಂದು ಜನರು ಕರೆಯುತ್ತಿದ್ದಾರೆ.

ಇದನ್ನೂ ಓದಿರಿ: ಪರಿಸರ ಸಂರಕ್ಷಣೆ ಸಂದೇಶದೊಂದಿಗೆ ರಕ್ಷಾ ಬಂಧನ ಆಚರಿಸಿದ ಮಾಜಿ ಸಚಿವ ಎಂ ಬಿ ಪಾಟೀಲ್..

Last Updated :Aug 6, 2022, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.