ಪಾಕ್​ ಗಡಿಯಲ್ಲಿ ಡ್ರೋನ್​ ಹೊಡೆದುರುಳಿಸಿ 30 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ

author img

By

Published : Jan 15, 2023, 11:10 PM IST

bsf-seizes-heroin-worth-rs-30-crore-dropped-from-pak-drone-in-rajasthan

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿ, ಡ್ರೋನ್​ವೊಂದನ್ನು​ ಹೊಡೆದುರುಳಿಸಿ 30 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ.

ಶ್ರೀಗಂಗಾನಗರ/ತರ್ನ್ ತರಣ್: ಭಾರತಕ್ಕೆ ಹೊಂದಿಕೊಂಡಿರುವ ಪಾಕಿಸ್ತಾನ ಗಡಿಯಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ ಮುಂದುವರೆದಿದೆ. ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‌ ಸೇಮತವಾಗಿ ಅಂದಾಜು 30 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್​ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಬಳಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಡ್ರೋನ್‌ ಹಾರಾಟದ ಗಮನಿಸಿ ಬಿಎಸ್‌ಎಫ್ ಯೋಧರು, ಡ್ರೋನ್‌ಗೆ ಗುಂಡು ಹಾರಿಸಿ ಕೆಳಗಡೆ ಬೀಳಿಸಿದ್ದಾರೆ. ಈ ಡ್ರೋಣ್​ನಲ್ಲಿ ಮೂರು ಚೀಲಗಳಲ್ಲಿ ಪ್ಯಾಕ್​ ಮಾಡಿದ್ದ ಆರು ಕೆಜಿ ತೂಕದ ಹೆರಾಯಿನ್​ ಪತ್ತೆಯಾಗಿದೆ. ಈ ಹೆರಾಯಿನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 30 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕ್ ಡ್ರೋನ್​ನಿಂದ ಭಾರತದೊಳಗೆ 15 ಕೋಟಿ ಮೌಲ್ಯದ ಹೆರಾಯಿನ್​ ಎಸೆತ: ನಾಲ್ವರು ಸ್ಮಗ್ಲರ್​ಗಳ ಸೆರೆ

ಮತ್ತೊಂದೆಡೆ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಕಾಲಿಯಾ ಗ್ರಾಮದ ಗಡಿ ಬಳಿಯ ಡ್ರೋನ್ ಪತ್ತೆಯಾಗಿದೆ. ಇದನ್ನು ಗಮನಿಸಿದ ಬಿಎಸ್‌ಎಫ್‌ನ 101 ಬೆಟಾಲಿಯನ್ ಪಡೆಗಳು ಡ್ರೋನ್‌ಗೆ ಏಳು ಸುತ್ತು ಗುಂಡು ಹಾರಿಸಿದ್ದಾರೆ. ಇದಲ್ಲದೇ, ಪಂಜಾಬ್ ರಾಜ್ಯದ​ ನಂಬರ್ ಪ್ಲೇಟ್ ಹೊಂದಿರುವ ಕಾರಿನಲ್ಲಿ ಪಂಜಾಬ್‌ನಿಂದ ಬಂದ ಇಬ್ಬರು ಕಳ್ಳಸಾಗಣೆದಾರರು ಭದ್ರತಾ ಪಡೆಗಳನ್ನು ಕಂಡು ಪರಾರಿಯಾಗಿದ್ದಾರೆ. ಆರೋಪಿಗಳು ಕಾರು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡು, ಪರಾರಿಯಾದ ಕಳ್ಳಸಾಗಣೆದಾರರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿರಂತರ ಕಾರ್ಯಾಚರಣೆ: ಭಾರತ ಮತ್ತು ಪಾಕಿಸ್ತಾನದಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಣೆ ಜೋರಾಗಿ ನಡೆಯುತ್ತಿದ್ದು, ಇದರ ವಿರುದ್ಧ ಬಿಎಸ್‌ಎಫ್ ಯೋಧರು ಹಾಗೂ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಭಾಗವಾಗಿಯೇ ಇತ್ತೀಚೆಗೆ ಪಂಜಾಬ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡು ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಪತ್ತೆ ಹೆಚ್ಚಿದ್ದರು.

ಇದನ್ನೂ ಓದಿ: ಗಡಿಯಾಚೆಗಿನ ಡ್ರಗ್ಸ್​ ದಂಧೆಯ ಕಿಂಗ್​ ಪಿನ್​ಗಳ ಸೆರೆ: 10 ಕೆಜಿ ಹೆರಾಯಿನ್, 20 ಲಕ್ಷದ ಅಮೆರಿಕನ್ ಡ್ರೋನ್ ಜಪ್ತಿ

ಅಲ್ಲದೇ, ಈ ಜಾಲದ ಪ್ರಮುಖ ಆರೋಪಿಗಳು ಮತ್ತು ಕಳ್ಳಸಾಗಾಣಿಕೆದಾರರಾದ ದಲ್ಬೀರ್ ಮತ್ತು ಜಗದೀಶ್ ಎಂಬ ಇಬ್ಬರನ್ನು ಬಂಧಿಸಿದ್ದರು. ಬಂಧಿತರಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ 10 ಕೆಜಿ ಹೆರಾಯಿನ್ ಮತ್ತು ಹೈಟೆಕ್ ಡ್ರೋನ್‌ ಅನ್ನೂ ಪೊಲೀಸರು ಜಪ್ತಿ ಮಾಡಿದ್ದರು. ಈ ವೇಳೆ ಡ್ರೋನ್‌ಗಳನ್ನು ಬಳಸಿ ಗಡಿಯಾಚೆಯಿಂದ ನಿಷಿದ್ಧ ಡ್ರಗ್ಸ್ ಸಂಗ್ರಹಿಸುತ್ತಿದ್ದರು ಎಂಬ ಮಾಹಿತಿ ಸಹ ಹೊರ ಬಿದ್ದಿತ್ತು.

ಇದಕ್ಕಾಗಿ ಕಳ್ಳಸಾಗಣೆದಾರು ಹೈಟೆಕ್ ಡ್ರೋನ್‌ ಬಳಕೆ ಮಾಡುತ್ತಾರೆ ಎಂಬುವುದೂ ಸಹ ಬಹಿರಂಗವಾಗಿತ್ತು. ಈ ವೇಳೆ ಬಂಧಿತರಿಂದ ಇತ್ತೀಚಿನ ಅಮೆರಿಕನ್ ಡ್ರೋನ್ ಸಹ ದೊರೆತಿತ್ತು. ಈ ಡ್ರೋಣ್​ ಬರೋಬ್ಬರಿ 20 ಲಕ್ಷ ರೂಪಾಯಿ ಆಗಿತ್ತು. ಇದು ದೀರ್ಘಾವಧಿಯ ಬ್ಯಾಟರಿ ಬ್ಯಾಕಪ್ ಮತ್ತು ಇನ್‌ಫ್ರಾರೆಡ್ ಆಧಾರಿತ ರಾತ್ರಿ ದೃಷ್ಟಿ ಕ್ಯಾಮರಾದಂತಹ ಹೈಟೆಕ್ ವೈಶಿಷ್ಟ್ಯಗಳನ್ನು ಹೊಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ಅಮೃತ್​ಸರ್​ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಡ್ರೋನ್​ ಪ್ರತ್ಯಕ್ಷ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.