ಶಿವ - ಕಾಳಿ ಮಾತೆ ಆಕ್ಷೇಪಾರ್ಹ ಫೋಟೋ: ನಿಯತಕಾಲಿಕೆ ವಿರುದ್ಧ ಬಿಜೆಪಿ ಮುಖಂಡನ ದೂರು

author img

By

Published : Aug 5, 2022, 10:08 AM IST

Updated : Aug 5, 2022, 10:58 AM IST

objectionable photos of shiva and kali in Uttar Pradesh,  bjp leader prakash sharm, Kanpur crime news,  ಬಿಜೆಪಿ ಮುಖಂಡ ಪ್ರಕಾಶ್ ಶರ್ಮಾ, ನಿಯತಕಾಲಿಕೆ ದಿ ವೀಕ್ ವಿರುದ್ಧ ಎಫ್‌ಐಆರ್, ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಘಟನೆ, ಉತ್ತರಪ್ರದೇಶ ಅಪರಾಧ ಸುದ್ದಿ,

ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ ಎಂಬ ಬಿಜೆಪಿ ನಾಯಕ ಪ್ರಕಾಶ್ ಶರ್ಮಾ ಅವರ ದೂರಿನ ಮೇರೆಗೆ ಕಾನ್ಪುರದ ನಿಯತಕಾಲಿಕೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವ ನಿಯತಕಾಲಿಕೆಯೊಂದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಿಜೆಪಿ ಮುಖಂಡ ಪ್ರಕಾಶ್ ಶರ್ಮಾ ಕೊತ್ವಾಲಿಯಲ್ಲಿ ಮ್ಯಾಗಜೀನ್ ವಿರುದ್ಧ ದೂರು ನೀಡಿದ್ದಾರೆ. ಅದರಲ್ಲಿ ಶಿವ ಮತ್ತು ಕಾಳಿ ಮಾತೆಯ ಆಕ್ಷೇಪಾರ್ಹ ಫೋಟೋಗಳನ್ನು ಪತ್ರಿಕೆ ಮುದ್ರಿಸಿದೆ ಎಂದು ಬರೆಯಲಾಗಿದೆ. ಇದು ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದ್ದಾರೆ.

ಜುಲೈ 30 ರಂದು ಅವರು ದೆಹಲಿಯಿಂದ ಕಾನ್ಪುರಕ್ಕೆ ಬಂದಿದೆ. ಈ ವೇಳೆ ಜುಲೈ 24 ರಂದು ಪ್ರಕಟವಾದ ನಿಯತಕಾಲಿಕೆಯನ್ನು ಸೆಂಟ್ರಲ್ ಸ್ಟೇಷನ್‌ನಲ್ಲಿರುವ ಬುಕ್ ಸ್ಟಾಲ್‌ನಿಂದ ಖರೀದಿಸಿದೆ. ಪತ್ರಿಕೆಯ ಪುಟ 62 ಮತ್ತು 63ರಲ್ಲಿ ಶಿವ ಮತ್ತು ತಾಯಿ ಕಾಳಿಯ ಆಕ್ಷೇಪಾರ್ಹ ಫೋಟೋಗಳನ್ನು ಮುದ್ರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಂತಹ ಚಿತ್ರಗಳು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತವೆ. ಇನ್ನು ದೇಶದಲ್ಲಿ ಸೆನ್ಸಾರ್ ಮಂಡಳಿ ರಚನೆ ಆಗಬೇಕು. ಅವರು ಇಂತಹ ಮ್ಯಾಗಜೀನ್​ಗಳನ್ನು ಬ್ಯಾನ್ ಮಾಡಿ ಇಂತಹ ಕೆಲಸಗಳಿಗೆ ಕಡಿವಾಣ ಹಾಕಬೇಕು. ಈ ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಆಡಳಿತ ಮತ್ತು ಸರಕಾರದಿಂದ ನನ್ನ ಆಗ್ರಹವಾಗಿದೆ ಅಂತಾ ಬಿಜೆಪಿ ಮುಖಂಡ ಪ್ರಕಾಶ್ ಶರ್ಮಾ ಹೇಳಿದರು.

ಓದಿ: ನವವೃಂದಾವನ ಗಡ್ಡೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಬ್ರೇಕ್ನವವೃಂದಾವನ ಗಡ್ಡೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಬ್ರೇಕ್


Last Updated :Aug 5, 2022, 10:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.