ರಾಷ್ಟ್ರಪತಿ ಚುನಾವಣೆಗೋಸ್ಕರ ಮಹಾರಾಷ್ಟ್ರ ಸರ್ಕಾರದ ಅಸ್ಥಿರ ಯತ್ನ: ಖರ್ಗೆ

author img

By

Published : Jun 23, 2022, 5:58 PM IST

BJP and Centre fully responsible for destabilising a stable govt in Maharashtra says Mallikarjun Kharge

ಬಿಜೆಪಿಯವರು ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳ್ಳಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೇ ಈ ಹಿಂದೆ ಕರ್ನಾಟಕ, ಮಧ್ಯಪ್ರದೇಶ ಮತ್ತು ಗೋವಾದಲ್ಲೂ ಮಾಡಿದ್ದರು ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಮಹಾರಾಷ್ಟ್ರದಲ್ಲಿ ಸದೃಢವಾಗಿದ್ದ ಮಹಾವಿಕಾಸ್ ಆಘಾಡಿ ಮೈತ್ರಿಕೂಟದ ಸರ್ಕಾರ ಅಸ್ಥಿರಗೊಳ್ಳುತ್ತಿರುವುದಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರವೇ ಸಂಪೂರ್ಣ ಹೊಣೆ ಮತ್ತು ಇದೆಲ್ಲವನ್ನೂ ರಾಷ್ಟ್ರಪತಿ ಚುನಾವಣೆಗೋಸ್ಕರ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ, ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಆದರೆ, ಬಿಜೆಪಿ ಆ ಸರ್ಕಾರವನ್ನು ಅಸ್ಥಿರಗೊಳ್ಳಿಸಲು ಪ್ರಯತ್ನಿಸುತ್ತಿದೆ. ಇದನ್ನೇ ಈ ಹಿಂದೆ ಕರ್ನಾಟಕ, ಮಧ್ಯಪ್ರದೇಶ ಮತ್ತು ಗೋವಾದಲ್ಲೂ ಅವರು ಮಾಡಿದ್ದರು. ಈಗ ಮಹಾರಾಷ್ಟ್ರದಲ್ಲೂ ತಮ್ಮ ಸರ್ಕಾರ ರಚಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: 'ನನ್ನನ್ನು ಅಪಹರಿಸಿದ್ರು' ಎಂದಿದ್ದ ಶಾಸಕನ ಫೋಟೋ ಬಿಡುಗಡೆ ಮಾಡಿದ ರೆಬೆಲ್ಸ್‌ 'ಸೇನೆ'​!

ಅಲ್ಲದೇ, ನಮ್ಮ ಕಾಂಗ್ರೆಸ್​ ಪಕ್ಷ ಮಹಾವಿಕಾಸ್ ಆಘಾಡಿ ಮೈತ್ರಿಕೂಟದೊಂದಿಗೆ ಇದೆ. ನಾವು ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ಕಾಂಗ್ರೆಸ್​, ಶಿವಸೇನೆ ಮತ್ತು ಎನ್​ಸಿಪಿ ಎಲ್ಲರೂ ಕೂಡಿಕೊಂಡು ನಮ್ಮ ಮೈತ್ರಿಕೂಟವನ್ನು ಇನ್ನಷ್ಟು ಗಟ್ಟಿಗೊಳ್ಳಿಸಬೇಕೆಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: 'ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧ'- ರಾವುತ್​: ದಿಢೀರ್​ ಸಭೆ ಕರೆದ ಕಾಂಗ್ರೆಸ್-ಎನ್​ಸಿಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.