ಭೂಸ್ವಾಧೀನದ ವಿರುದ್ಧ ರಾಜಸ್ಥಾನ ರೈತರ ಆಂದೋಲನ ಹೇಗಿದೆ ನೋಡಿ

author img

By

Published : Mar 11, 2020, 2:06 PM IST

Rajasthan farmers agitate

ಭಾರತ್ಮಾಲಾ ಯೋಜನೆಯಡಿ ಉದ್ದೇಶಿತ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಆರು ಮಹಿಳೆಯರು ಸೇರಿದಂತೆ ಇಪ್ಪತ್ತೆರಡು ರೈತರು ರಾಜಸ್ಥಾನದ ಜಲೋರ್‌ನಲ್ಲಿ ಭೂ ಸಮಾಧಿ ಹೋರಾಟ ತೆಗೆದುಕೊಳ್ಳುವ ಮೂಲಕ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲೋರ್​(ರಾಜಸ್ಥಾನ್​): ಜೈಪುರ ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನದ ವಿರುದ್ಧ ಜಿಲ್ಲೆಯ ರೈತರು ಆಂದೋಲನವನ್ನು ಪ್ರಾರಂಭಿಸಿದ್ದು, ನೆಲದಲ್ಲಿ ಗುಂಡಿ ತಗೆದು ತಮ್ಮನ್ನು ತಾವು ಕುತ್ತಿಗೆವರೆಗೆ ಹೂತುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಭಾರತಮಾಲಾ ಯೋಜನೆಯಡಿ ಉದ್ದೇಶಿತ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರೈತರಿಂದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಭೂರಹಿತ ರೈತರನ್ನಾಗಿಸಿದ್ದಾರೆ ಎಂದು ಆರೋಪಿಸಿ ಈ ಆಂದೋಲನವನ್ನು ಪ್ರಾರಂಭಿಸಲಾಗಿದೆ.

ಜೈಪುರ ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನದ ವಿರುದ್ದ ಕಳೆದ 10 ದಿನಗಳಿಂದ ಈ ಹೋರಾಟ ನಡೆಸುತ್ತಿದ್ದರೂ ಯಾವೊಬ್ಬ ನಾಯಕನಾಗಲಿ, ಅಧಿಕಾರಿಗಳಾಗಲಿ ಇತ್ತ ಮುಖ ಹಾಕಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಹಳ್ಳಿಗರು ಇದೀಗ ಉಪವಾಸ ಸತ್ಯಾಗ್ರಹ ಸಹ ಕೈಗೊಂಡಿದ್ದಾರೆ.

ಭೂಸ್ವಾಧೀನ ವಿರುದ್ಧ ರೈತರ ಆಂದೋಲನ

ಈ ಹೋರಾಟದಲ್ಲಿ 6 ಮಹಿಳೆಯರು ಸೇರಿದಂತೆ 22 ರೈತರು ಸಮಾಧಿ ಹೋರಾಟವನ್ನು ಕೈಗೊಂಡಿದ್ದು, 221 ರೈತರು ಉಪವಾಸ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯತ್ನ ಮಾಡುತ್ತಿದ್ದಾರೆ.

ಭಾರತಮಾಲಾ ಯೋಜನೆಯಡಿ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಮಾಡಲು 600 ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಸರಿಯಾದ ಪರಿಹಾರವನ್ನೂ ಸಹ ಇದೂವರೆಗೆ ನೀಡಿಲ್ಲ ಎಂಬ ಆರೋಪ ಹಳ್ಳಿಗರದ್ದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.