60 ಸಾವಿರ ರೂ. ನಾಣ್ಯಗಳ ಠೇವಣಿಗೆ ನಿರಾಕರಿಸಿದ ಬ್ಯಾಂಕ್​.. ಮುಂದೆ ನಡೆದಿದ್ದೇನು?

author img

By

Published : Nov 25, 2021, 2:30 PM IST

bank refused to take coins, bank refused to take coins by lady, chhindwara news, Madhya Pradesh news, ನಾಣ್ಯಗಳ ಠೇವಣಿಗೆ ನಿರಾಕರಿಸಿದ ಬ್ಯಾಂಕ್, ನಾಣ್ಯಗಳ ಜಮಾ ಮಾಡಲು ನಿರಾಕರಿಸಿದ ಬ್ಯಾಂಕ್​, ಛಿಂದ್ವಾರಾ ಸುದ್ದಿ, ಮಧ್ಯಪ್ರದೇಶ ಸುದ್ದಿ,

60 ಸಾವಿರ ರೂಪಾಯಿಗಳ ನಾಣ್ಯಗಳನ್ನು ಸಂಗ್ರಹಿಸಿದ್ದ ದಿನಸಿ ಅಂಗಡಿ ಮಾಲಕಿಯೊಬ್ಬರು ಸಂಕಷ್ಟವೊಂದಕ್ಕೆ ಸಿಲುಕಿದ್ದಾರೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶ ಛಿಂದ್ವಾರದಲ್ಲಿ ಬೆಳಕಿಗೆ ಬಂದಿದೆ.

ಛಿಂದ್ವಾರ: ಜಿಲ್ಲಾಡಳಿತ ಕಚೇರಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 60 ಸಾವಿರ ರೂಪಾಯಿಗಳ ನಾಣ್ಯ ಸಂಗ್ರಹಿಸಿದ್ದ ದಿನಸಿ ಅಂಗಡಿ ಮಾಲಕಿಯೊಬ್ಬಳು ಸಂಕಷ್ಟ ಸಿಲುಕಿದ್ದಾರೆ. ನಾಣ್ಯಗಳನ್ನು ಬ್ಯಾಂಕ್​ಗೆ ಜಮಾ ಮಾಡಲು ಹೋದಾಗ ಅಲ್ಲಿನ ಅಧಿಕಾರಿಗಳು ಠೇವಣಿಗೆ ನಿರಾಕರಿಸಿದ್ದರಿಂದ ಯುವತಿ ಬೇಸರ ವ್ಯಕ್ತಪಡಿಸಿದ್ದಾರೆ.

ಛಿಂದ್ವಾರದ ಗುಲಾಬ್ರಾ ಪ್ರದೇಶದಲ್ಲಿ ದಿನಸಿ ಅಂಗಡಿ ನಡೆಸುತ್ತಿರುವ ದೀಕ್ಷಾ ಮಾಳವಿಯಾ ಸುಮಾರು 60 ಸಾವಿರ ರೂಪಾಯಿಗಳಷ್ಟು ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಇದನ್ನು ಬ್ಯಾಂಕ್​ಗೆ ಜಮೆ ಮಾಡಲು ತೆರಳಿದ್ದಾರೆ. ಆದ್ರೆ ಬ್ಯಾಂಕ್​ನವರು ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

ನಾಣ್ಯಗಳ ಠೇವಣಿಗೆ ನಿರಾಕರಿಸಿದ ಬ್ಯಾಂಕ್

ಮಂಗಳವಾರ 60,000 ನಾಣ್ಯಗಳೊಂದಿಗೆ ಜಿಲ್ಲಾಧಿಕಾರಿಗಳ ಸಾರ್ವಜನಿಕ ವಿಚಾರಣೆಗೆ ದೀಕ್ಷಾ ಹಾಜರಾದರು. ಜಿಲ್ಲಾಧಿಕಾರಿ ಸೌರಭ್​ ಕುಮಾರ್​ ಸುಮನ್​ ಅವರನ್ನು ಭೇಟಿ ಮಾಡಿದ ದೀಕ್ಷಾ ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ನಾನು ಹಲವಾರು ತಿಂಗಳಿನಿಂದ ಈ ನಾಣ್ಯಗಳನ್ನು ಸಂಗ್ರಹಿಸಿದ್ದೇನೆ. ಆದ್ರೆ ಬ್ಯಾಂಕ್​ನವರು ತೆಗೆದುಕೊಳ್ಳುಲು ನಿರಾಕರಿಸಿದ್ದಾರೆ. ನನಗೆ ಮುಂದಿನ ದಾರಿ ಯಾವುದೆಂದು ದೋಚುತ್ತಿಲ್ಲ. ಈ ಸಮಸ್ಯೆ ನೀವೇ ಬಗೆಹರಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಅಂಗಡಿ ಯಜಮಾನಿಯ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಸೌರಭ್, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ ಯಾವುದೇ ವ್ಯಕ್ತಿಯಿಂದ ದಿನಕ್ಕೆ 1000 ನಾಣ್ಯಗಳನ್ನು ಪಡೆಯಬಹುದು. ಬ್ಯಾಂಕ್​ನವರು ಇವರ ಬಳಿ ದಿನಕ್ಕೆ 1000 ನಾಣ್ಯಗಳು ಸಂಗ್ರಹಿಸಿಕೊಳ್ಳಬಹುದೆಂದು ಬ್ಯಾಂಕ್‌ಗೆ ಆದೇಶಿಸಿದರು. ಇದರ ಪ್ರಕಾರ ಬ್ಯಾಂಕ್​ನವರು ಪ್ರತಿ ದಿನ ಸಾವಿರ ನಾಣ್ಯ ಜಮೆ ಮಾಡುವಂತೆ ಅಂಗಡಿ ಮಾಲಕಿಗೆ ಲಿಖಿತ ಭರವಸೆ ನೀಡಿದ್ದಾರೆ.

ಡಿಸಿ ಆದೇಶದಂತೆ ರಜಾ ದಿನಗಳನ್ನು ಹೊರತುಪಡಿಸಿ ಮಹಿಳೆ ಪ್ರತಿದಿನ ಸಾವಿರ ರೂಪಾಯಿ ನಾಣ್ಯಗಳನ್ನು ಬ್ಯಾಂಕ್​ಗೆ ಜಮಾ ಮಾಡಬಹುದಾಗಿದೆ. ಒಟ್ಟು ನಾಣ್ಯಗಳನ್ನು ಬ್ಯಾಂಕಿಗೆ ಜಮಾ ಮಾಡಲು ಆ ಮಹಿಳೆ ಸರಿ ಸುಮಾರು ಎರಡೂವರೆ ತಿಂಗಳ ಸಮಯವಾದ್ರೂ ಬೇಕಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.