ಮೊಟ್ಟೆ ತಂದ ಆಪತ್ತು: ತಿನ್ನುವ ವೇಳೆ ಗಂಟಲಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ ಮಹಿಳೆ

author img

By

Published : Oct 14, 2021, 3:02 PM IST

Egg

ಮಹಿಳೆಯೊಬ್ಬಳು ಮೊಟ್ಟೆ ತಿನ್ನಲು ಹೋಗಿದ್ದಾಗ ಅದು ಗಂಟಲಿನ ಭಾಗದಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಾಗರ್ ಕರ್ನೂಲ್​ನಲ್ಲಿ ನಡೆದಿದೆ.

ನಾಗರ್​ ಕರ್ನೂಲ್​(ತೆಲಂಗಾಣ): ಹಣ್ಣಿನ ಬೀಜ, ನಾಣ್ಯಗಳು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವ ಸುದ್ದಿ ನಾವು - ನವೆಲ್ಲರೂ ಕೇಳಿರುತ್ತೇವೆ. ಆದರೆ, ಮಹಿಳೆಯೊಬ್ಬಳು ಮೊಟ್ಟೆ ತಿನ್ನುತ್ತಿದ್ದ ವೇಳೆ, ಅದು ಗಂಟಲಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ನಾಗರ್​ ಕರ್ನೂಲ್​​ ಜಿಲ್ಲೆಯ ನೇರಳಪಲ್ಲಿಯಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ನೀಲಮ್ಮ ಮನೆಯಲ್ಲಿ ಊಟ ಮಾಡಿದ ನಂತರ ಬೇಯಿಸಿದ ಮೊಟ್ಟೆ ತಿನ್ನಲು ಬಾಯಿಯೊಳಗೆ ಹಾಕಿಕೊಂಡಿದ್ದಾಳೆ. ಈ ವೇಳೆ, ಅದು ನೇರವಾಗಿ ಗಂಟಲಿನ ಭಾಗದಲ್ಲಿ ಸಿಲುಕಿಕೊಂಡಿದೆ. ಇದರಿಂದ ಕ್ಷಣಾರ್ಧದಲ್ಲೇ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿರಿ: ಇಂದು ವಿಶ್ವ ದೃಷ್ಟಿ ದಿನ: ನಿಮ್ಮ ಕಣ್ಣುಗಳ ಮೇಲಿರಲಿ ಪ್ರೀತಿ, ಕಾಳಜಿ..

ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಕುಟುಂಬಸ್ಥರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.