ನನ್ನ ಮಗನ ನೋವು ನೋಡಲಾಗ್ತಿಲ್ಲ : ದಯಾಮರಣ ನೀಡಿ ಎಂದು ಕೋರ್ಟ್ಗೆ ಬಂದ ತಾಯಿ!

ನನ್ನ ಮಗನ ನೋವು ನೋಡಲಾಗ್ತಿಲ್ಲ : ದಯಾಮರಣ ನೀಡಿ ಎಂದು ಕೋರ್ಟ್ಗೆ ಬಂದ ತಾಯಿ!
ಸಾಲ ಸೂಲ ಮಾಡಿ ಚಿಕಿತ್ಸೆ ಕೊಡಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕಾಯಿಲೆಯಿಂದ ಬಳಲುತ್ತಿರುವ ಹರ್ಷವರ್ಧನ್ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ..
ಆಂಧ್ರಪ್ರದೇಶ : ಚಿತ್ತೂರು ಜಿಲ್ಲೆಯ ಪುಣಗನೂರಿನಲ್ಲಿ ದಯಾಮರಣ ನೀಡುವಂತೆ ತಾಯಿಯೊಬ್ಬಳು ತನ್ನ ಮಗನನ್ನು ಸ್ಥಳೀಯ ನ್ಯಾಯಾಲಯಕ್ಕೆ ಕರೆದು ತಂದಿರುವ ಘಟನೆ ನಡೆದಿದೆ.
ಮಣಿ ಮತ್ತು ಅರುಣಾ ದಂಪತಿ ಪುತ್ರ ಹರ್ಷವರ್ಧನ್ (9)ಗೆ ಕಳೆದ 5 ವರ್ಷದಿಂದ ಅಪರೂಪದ ರಕ್ತ ಸಂಬಂಧಿತ ಕಾಯಿಲೆ ಕಾಣಿಸಿದೆ. ಸಾಲ ಸೂಲ ಮಾಡಿ ಚಿಕಿತ್ಸೆ ಕೊಡಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕಾಯಿಲೆಯಿಂದ ಬಳಲುತ್ತಿರುವ ಹರ್ಷವರ್ಧನ್ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.
ಇದರಿಂದ ತನ್ನ ಮಗ ಉಳಿಯಲ್ಲ ಎಂದು ಅರಿತ ಅರುಣಾ, ನನ್ನ ಮಗ ಬಳಲುತ್ತಿರುವುದನ್ನು ನಾನು ನೋಡಲಾರೆ. ದೈಹಿಕವಾಗಿ ಅವನು, ಮಾನಸಿಕವಾಗಿ ನಾವು ನೊಂದಿದ್ದೇವೆ. ನನ್ನ ಮಗನನ್ನು ಉಳಿಸಿ ಕೊಡಿ ಇಲ್ಲ ದಯಾಮರಣ ಕೊಡಿಸಿ ಎಂದು ನ್ಯಾಯಾಲಯದ ಬಳಿ ಬಂದಿದ್ದಾಳೆ. ಆದರೆ, ಕೊರೊನಾ ಹಿನ್ನೆಲೆ ಕೋರ್ಟ್ ಕಲಾಪ ಇಲ್ಲದ ಕಾರಣ ವಾಪಸಾಗಿದ್ದಾರೆ.
'ವಿಶ್ವ ಕ್ಷೀರ ದಿನ': ಹಾಲಿನ ಮಹತ್ವದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
