ಕರ್ನಾಟಕ ಸೇರಿ ದೇಶಾದ್ಯಂತ ಸಂಸದರು, ಶಾಸಕರ ವಿರುದ್ಧ 56 ಸಿಬಿಐ ಕೇಸ್​

author img

By

Published : Dec 7, 2022, 3:23 PM IST

56-cases-were-registered-by-cbi-against-mlas-and-mps

ಕರ್ನಾಟಕದ ಇಬ್ಬರು ಸೇರಿ ದೇಶಾದ್ಯಂತ ಸಂಸದರು ಹಾಗೂ ಶಾಸಕರ ವಿರುದ್ಧ 56 ಕೇಸ್​ಗಳನ್ನು ಸಿಬಿಐ ದಾಖಲಿಸಿದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.

ನವದೆಹಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದರು ಹಾಗೂ ಶಾಸಕರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ)ಯಲ್ಲಿ 56 ಮೊಕದ್ದಮೆಗಳು ದಾಖಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ಎರಡು ಕೇಸ್​ ಸಹ ಸೇರಿವೆ.

ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಂಪಿ ಮತ್ತು ಎಂಎಲ್​ಎಗಳ ವಿರುದ್ಧದ ಸಿಬಿಐ ಕೇಸ್​ಗಳ ಕುರಿತಾದ ಮಾಹಿತಿಯನ್ನು ಲೋಕಸಭೆಗೆ ನೀಡಿದ್ದು, 2017ರಿಂದ 2022ರ ಅಕ್ಟೋಬರ್​ 31ರವರೆಗೆ ದಾಖಲಾದ ಪ್ರಕರಣಗಳ ಮಾಹಿತಿ ಬಹಿರಂಗ ಪಡಿಸಿದೆ. ಒಟ್ಟಾರೆ 56 ಕೇಸ್​ಗಳ ಪೈಕಿ ಈಗಾಗಲೇ 22 ಕೇಸ್​ಗಳಲ್ಲಿ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ.

  • 56 cases were registered by CBI against MLAs and MPs from 2017 to 2022 (up to 31.10.2022) out of which chargesheet were filed in 22 cases: Department of Personnel & Training (DoPT) in Lok Sabha pic.twitter.com/fRnKrfnR4l

    — ANI (@ANI) December 7, 2022 " class="align-text-top noRightClick twitterSection" data=" ">

ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಎಂದರೆ ಹತ್ತು ಕೇಸ್​ಗಳನ್ನು ಸಿಬಿಐ ದಾಖಲಿಸಿದೆ. ಉತ್ತರ ಪ್ರದೇಶ, ಕೇರಳ ತಲಾ 6, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ತಲಾ 5, ತಮಿಳುನಾಡು 4, ದೆಹಲಿ, ಮಣಿಪುರ, ಬಿಹಾರ ತಲಾ 3, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ ತಲಾ 2 ಹಾಗೂ ಹರಿಯಾಣ, ಛತ್ತೀಸ್​ಗಢ, ಮೇಘಾಲಯ, ಉತ್ತರಾಖಂಡ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪದಲ್ಲಿ ತಲಾ ಒಂದು ಸಿಬಿಐ ಕೇಸ್​ ದಾಖಲಾಗಿದೆ.

ಇದನ್ನೂ ಓದಿ: ಸಂಸತ್ ಅಧಿವೇಶನ ಫಲಪ್ರದವಾಗಲು ಸಹಕರಿಸಿ: ಪ್ರಧಾನಿ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.