ಕಳಪೆ ಅಂಕ ಗಳಿಸಿದ್ದಾರೆ ಎಂದು ಪೋಷಕರಿಗೆ ದೂರು.. ಗರ್ಭಿಣಿ ಶಿಕ್ಷಕಿಯನ್ನು ಥಳಿಸಿದ ವಿದ್ಯಾರ್ಥಿಗಳು!

author img

By

Published : Nov 29, 2022, 5:32 PM IST

5 month pregnant teacher mercilessly beaten by students in Assam

ಪರೀಕ್ಷೆಯಲ್ಲಿ ಕಳಪೆ ಅಂಕ ಗಳಿಸಿದ್ದಾರೆ ಎಂದು ಪೋಷಕರಿಗೆ ದೂರು ನೀಡಿದ ಗರ್ಭಿಣಿ ಶಿಕ್ಷಕಿಗೆ ಮನಬಂದಂತೆ ಥಳಿಸಿರುವ ಘಟನೆ ಅಸ್ಸೋಂ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದಿದೆ.

ದಿಬ್ರುಗಢ (ಅಸ್ಸೋಂ) : ಪರೀಕ್ಷೆಯಲ್ಲಿ ಕಳಪೆ ಅಂಕ ಗಳಿಸಿದ್ದಾರೆ ಎಂದು ಪೋಷಕರಿಗೆ ದೂರಿದ ಐದು ತಿಂಗಳ ಗರ್ಭಿಣಿ ಶಿಕ್ಷಕಿಗೆ ವಿದ್ಯಾರ್ಥಿಗಳು ಮನಬಂದಂತೆ ಥಳಿಸಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

ಕಳೆದ ನ.27ರಂದು ಜಿಲ್ಲೆಯ ಮೋರಾನ್​ನ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭ ಶಿಕ್ಷಕಿಯೋರ್ವರು ವಿದ್ಯಾರ್ಥಿಗಳ ಪೋಷಕರಲ್ಲಿ, ಮಕ್ಕಳು ಕಡಿಮೆ ಅಂಕ ಗಳಿಸಿರುವುದಲ್ಲದೆ ಶಾಲಾ ನಿಯಮಗಳನ್ನು ಗಾಳಿಗೆ ತೂರಿ ಶಾಲಾ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ದೂರಿದ್ದಾರೆ. ಬಳಿಕ 3 ಗಂಟೆ ವೇಳೆಗೆ ಶಿಕ್ಷಕಿಯು ತರಗತಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕರೆಯುವಾಗ ಸುಮಾರು 22 ವಿದ್ಯಾರ್ಥಿಗಳ ಗುಂಪು ಗರ್ಭಿಣಿ ಶಿಕ್ಷಕಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿಕ್ಷಕಿ ಅಂಜು ರಾಣಿಯನ್ನು ಸಹ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಪ್ರಾಂಶುಪಾಲರು, 9ನೇ ತರಗತಿಯಿಂದ 12 ನೇ ತರಗತಿಯವರೆಗಿನ ಸುಮಾರು 22 ವಿದ್ಯಾರ್ಥಿಗಳ ಗುಂಪು ಶಿಕ್ಷಕಿ ಅಂಜು ರಾಣಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಎಲ್ಲಾ 22 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಈ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಯುವತಿ ಮತ್ತು ಆಕೆಯ ಸ್ನೇಹಿತನ ಮೇಲೆ ಮೂವರಿಂದ ಹಲ್ಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.