ಮುಂಬೈ ಫೈರ್​ ಬ್ರಿಗೇಡ್​ ನೇಮಕಾತಿ: ದೈಹಿಕ ಪರೀಕ್ಷೆಯಲ್ಲಿ 147 ಮಂದಿಗೆ ಗಾಯ

author img

By

Published : Jan 25, 2023, 11:23 AM IST

ಮುಂಬೈ ಫೈರ್​ ಬ್ರಿಗೇಡ್​ ನೇಮಕಾತಿ ವೇಳೆ ದೈಹಿಕ ಪರೀಕ್ಷೆ ವೇಳೆ 147 ಮಂದಿಗೆ ಗಾಯ

ಅಗ್ನಿಶಾಮಕದಳ ನೇಮಕಾತಿಗೆ ದೈಹಿಕ ಪರೀಕ್ಷೆ ನಡೆಯುತ್ತಿದ್ದಾಗ 19 ಅಡಿ ಎತ್ತರದಿಂದ ಜಿಗಿಯುವ ಪರೀಕ್ಷೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಮುಂಬೈ: ಮುಂಬೈ ಫೈರ್​ ಬ್ರಿಗೇಡ್​ (ಅಗ್ನಿಶಾಮಕ ದಳ) ನೇಮಕಾತಿ ವೇಳೆ ನಡೆಸಲಾದ ದೈಹಿಕ ಪರೀಕ್ಷೆಯಲ್ಲಿ 147 ಅಭ್ಯರ್ಥಿಗಳು ಗಾಯಗೊಂಡಿದ್ದಾರೆ. 142 ಮಂದಿ ಸಣ್ಣಪುಟ್ಟ ಗಾಯಗಳಿಗೆ ತುತ್ತಾಗಿದ್ದು, 5 ಮಂದಿಗೆ ಮೂಳೆ ಮುರಿತವಾಗಿದೆ. ಗಾಯಾಳುಗಳನ್ನು ಬೃಹನ್ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್ (ಬಿಎಂಸಿ)​ ಆಸ್ಪತ್ರೆಗೆ ಸೇರಿಸಲಾಗಿದೆ.

ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ 18 ಅಡಿ ಎತ್ತರದಿಂದ ಹಾರುವಾಗ ಬಹುತೇಕ ಅಭ್ಯರ್ಥಿಗಳು ಗಾಯಗೊಂಡಿದ್ದಾರೆ. ಅಭ್ಯರ್ಥಿಗಳು ನೆಲದ ಬದಲು ಫ್ಲಾಟ್​ ಫಾರ್ಮ್​ ಮೇಲೆ ಜಿಗಿಯಬೇಕಿತ್ತು. ಈ ವೇಳೆ ಗಾಯಗೊಂಡಿದ್ದಾರೆ. ಈ ರೀತಿ ಜಿಗಿಯುವಾಗ ಅಗ್ನಿಶಾಮಕ ಸಿಬ್ಬಂದಿ ಮುನ್ನೆಚ್ಚರಿಕೆಯಾಗಿ ಜಂಪಿಂಗ್​ ಶೀಟ್​ಗಳನ್ನು ಹಿಡಿದಿದ್ದರು ಎಂದು ವಿವರಣೆ ನೀಡಿದ್ದಾರೆ.

ಮುಂಬೈ ಫೈರ್​ ಬ್ರಿಗೇಡ್‌​ನಲ್ಲಿ ಖಾಲಿ ಇರುವ 910 ಅಗ್ನಿಶಾಮಕ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜನವರಿ 13ರಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, 7,532 ಮಂದಿ ದೈಹಿಕ ಪರೀಕ್ಷೆಗೆ ಒಳಗಾಗಿದ್ದಾರೆ. ಇವರಲ್ಲಿ 147 ಅಭ್ಯರ್ಥಿಗಳು ಗಾಯಕ್ಕೆ ತುತ್ತಾಗಿದ್ದಾರೆ. ಗಾಯಗೊಂಡವರನ್ನು ತಕ್ಷಣಕ್ಕೆ ಆಂಬ್ಯುಲೆನ್ಸ್​ನಲ್ಲಿ ಮುನ್ಸಿಪಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದರಲ್ಲಿ ಐವರಿಗೆ ಮೂಳೆ ಮುರಿತವಾಗಿದೆ. ಉಳಿದೆಲ್ಲರನ್ನೂ ಚಿಕಿತ್ಸೆ ನೀಡಿದ ಬಳಿಕ ಮನೆಗೆ ಕಳುಹಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಮುಂಬೈ ಬ್ರಿಗೇಡ್​ನಲ್ಲಿ ಯಾವುದೇ ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ 1,200 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 910 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 20 ಸಾವಿರ ಪುರುಷ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮ: ಈ ಹುದ್ದೆಗೆ ದೈಹಿಕ ಪರೀಕ್ಷೆಯಲ್ಲಿ ಮೂರು ನಿಮಿಷದಲ್ಲಿ 800 ಮೀ ಓಟ, 20 ಪುಲ್​ ಅಪ್ಸ್​, 20 ಅಡಿ ಅಗ್ಗದಿಂದ ಕೆಳಗೆ ಜಿಗಿಯುವುದು. 19 ಅಡಿ ಎತ್ತರದಿಂದ ಕೆಳಗೆ ಇಳಿಯುವ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತದೆ. 30 ವರ್ಷದೊಳಗಿನ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದು, ದಿನದಲ್ಲಿ ಸಾವಿರಾರು ಅಭ್ಯರ್ಥಿಗಳು ಈ ರೀತಿ ಜಿಗಿಯುವ ಪರೀಕ್ಷೆ ಎದುರಿಸುತ್ತಿದ್ದಾರೆ. ಹೀಗೆ ಜಿಗಿಯುವಾಗ ಕೆಳಗೆ ನುರಿತ ಸಿಬ್ಬಂದಿ ನೆಟ್​ ಇಟ್ಟು, ಸುರಕ್ಷತೆಗೆ ಕ್ರಮ ವಹಿಸುತ್ತಿದ್ದಾರೆ. ಪ್ರತಿನಿತ್ಯ ಹಲವು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಿಗಿಯುತ್ತಿರುವುದರಿಂದ ನೆಟ್​ ಗುಣಮಟ್ಟ ಕುಸಿದಿದೆ ಎನ್ನಲಾಗಿದೆ. ಜನವರಿ 13ರಿಂದ ನಡೆಯುತ್ತಿರುವ ಈ ಪರೀಕ್ಷೆಯಲ್ಲಿ ದಿನಕ್ಕೆ 15 ರಿಂದ 16 ಮಂದಿ ಗಾಯಗೊಳ್ಳುತ್ತಿದ್ದಾರೆ. ಎರಡು ಅಂತಸ್ತಿನ ಕಟ್ಟಡದಷ್ಟು ಎತ್ತರದಿಂದ ಜಿಗಿಯುವಾಗ ಭಯಪಟ್ಟು ಅಥವಾ ಸರಿಯಾದ ರೀತಿಯಲ್ಲಿ ಜಿಗಿಯದೇ ಇರುವವರು ಗಾಯಗೊಳ್ಳುತ್ತಿದ್ದಾರೆ. ಈ ಪರೀಕ್ಷೆ ಅಂತಿಮವಾದ ಬಳಿಕ ಗಾಯಗೊಂಡವರ ಬಗ್ಗೆ ಸ್ಪಷ್ಟ ಸಂಖ್ಯೆ ಸಿಗಲಿದೆ ಎಂದು ಮುಂಬೈ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಜೆಎನ್​ಯುನಲ್ಲಿ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವೇಳೆ ಕಲ್ಲು ತೂರಾಟ: ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.