ಕರ್ನಾಟಕ

karnataka

ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ ₹ 45 ಕೋಟಿ ಗೆದ್ದ ಕೇರಳದ ನರ್ಸ್!

By

Published : Jun 4, 2023, 3:44 PM IST

Keralite nurse wins Abu Dhabi Big Ticket draw of Rs 45 cr

ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ ಕೇರಳ ಮೂಲದ ನರ್ಸ್​​ವೊಬ್ಬರು 45 ಕೋಟಿ ರೂಪಾಯಿ ಗೆದ್ದಿದ್ದಾರೆ.

ತಿರುವನಂತಪುರಂ (ಕೇರಳ): ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ನರ್ಸ್​​ವೊಬ್ಬರು ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ ಎಂದರೆ ಸುಮಾರು 45 ಕೋಟಿ ರೂಪಾಯಿ ಗೆದ್ದಿದ್ದಾರೆ. ಲವ್ಲ್ಮೋಲ್ ಅಚಾಮಾ ಎಂಬುವವರಿಗೆ ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಈ ಬಂಪರ್​ ಲಾಟರಿ ಹೊಡೆದಿದೆ.

ಇದನ್ನೂ ಓದಿ:ಕೇರಳ ಬಂಪರ್​ ಲಾಟರಿ: ಮಲಪ್ಪುರಂನಲ್ಲಿ ಮಾರಾಟವಾದ ಟಿಕೆಟ್‌ಗೆ 12ಕೋಟಿ ಬಹುಮಾನ!

ಅಬುಧಾಬಿಯಲ್ಲಿ ಕಳೆದ 21 ವರ್ಷಗಳಿಂದ ನರ್ಸ್​ ಆಗಿ ಕೆಲಸ ಮಾಡುತ್ತಿರುವ ಲವ್ಲ್ಮೋಲ್ ಅಚಾಮಾ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾರೆ. ತನ್ನ ಪತಿ ಪ್ರತಿ ತಿಂಗಳು ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗ್ ಟಿಕೆಟ್ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಬಹುಮಾನದ ಮೊತ್ತದ ಕುಟುಂಬದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿರುವ ಅವರು, ಬಾಕಿ ಹಣವನ್ನು ತನ್ನ ಮಕ್ಕಳ ಶಿಕ್ಷಣಕ್ಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೇ, ಶನಿವಾರ ನಡೆದ ಇತರ ಡ್ರಾಗಳಲ್ಲಿ ನಾಲ್ವರು ಕೇರಳಿಗರು ಬಂಪರ್​ ಬಹುಮಾನ ಗೆದ್ದಿದ್ದಾರೆ. ಯುಎಇಯ ರಾಜಧಾನಿ ಅಬುಧಾಬಿಯು ಕಳೆದ ಐದು ದಶಕಗಳಿಂದ ಅನೇಕ ವಲಸಿಗ ಕೇರಳೀಯರ ನೆಲೆಯಾಗಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಕೇರಳದಲ್ಲೂ ಓಣಂ ಲಾಟರಿಯಲ್ಲಿ ವ್ಯಕ್ತಿಯೊಬ್ಬರಿಗೆ 25 ಕೋಟಿ ರೂಪಾಯಿ ಬಹುಮಾನ ಬಂದಿತ್ತು. ಇದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇದನ್ನೂ ಓದಿ:ಕೇರಳ ಲಾಟರಿ ಟಿಕೆಟ್‌.. ಆನ್​ಲೈನ್​ ಹಾಗೂ ಹೊರ ರಾಜ್ಯದವರು ಖರೀದಿಸಬಹುದೇ, ಗೆದ್ದ ಹಣ ಪಡೆಯುವುದು ಹೇಗೆ?

ಆಟೋ ರಿಕ್ಷಾ ಚಾಲಕ ಕಮ್​ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಅನೂಪ್ ಎಂಬುವವರಿಗೆ ಈ ಲಕ್​ ಖುಲಾಯಿಸಿತ್ತು. ಮಲೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದ ಈ ಅನೂಪ್​ ಇದಕ್ಕಾಗಿ 3 ಲಕ್ಷ ರೂಪಾಯಿಗಳ ಸಾಲಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಅರ್ಜಿ ಅಂಗೀಕಾರವಾದ ಮರು ದಿನವೇ 25 ಕೋಟಿ ರೂ.ಗಳ ಬಂಪರ್ ಬಹುಮಾನ ದೊರೆದಿತ್ತು. ಅನೂಪ್ ಗೆದ್ದಿರುವ ಅಷ್ಟೂ ಹಣಕ್ಕೆ ಶೇ.30 ಕ್ಕಿಂತಲೂ ಹೆಚ್ಚು ತೆರಿಗೆ ಕಟ್ಟಬೇಕು. ಅಂದರೆ ಗೆದ್ದ 25 ಕೋಟಿ ರೂಪಾಯಿಗಳಲ್ಲಿ 10 ಕೋಟಿಯಷ್ಟು ತೆರಿಗೆ ರೂಪದಲ್ಲಿ ಕಡಿತವಾಗಿ ಅನೂಪ್​ಗೆ 15 ಕೋಟಿ ರೂಪಾಯಿ ಸಿಗುತ್ತೆ ಎಂದು ವರದಿಯಾಗಿತ್ತು.

ಮತ್ತೊಂದೆಡೆ, ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ ಆಗಿದ್ದ ಅನೂಪ್​ಗೆ ಸಂಕಷ್ಟ ಕೂಡ ಎದುರಾಗಿತ್ತು. ಹಣ ಬಂದೊಡನೆ ಅವರಿಗೆ ಗೊತ್ತಿರುವವರು, ಗೊತ್ತಿಲ್ಲದವರು ಆರ್ಥಿಕ ಸಹಾಯ ಕೋರಿ ದುಂಬಾಲು ಬೀಳಲು ಆರಂಭಿಸಿದ್ದರು. ಇದರಿಂದ ರೋಸಿ ಹೋಗಿ ಅನೂಪ್​ ತಾನು ಈ ಹಣ ಗೆಲ್ಲದಿದ್ದರೆ ಚೆನ್ನಾಗಿರುತ್ತಿತ್ತು ಎಂದೂ ಬೇಸರ ವ್ಯಕ್ತಪಡಿಸುತ್ತಿದ್ದ ಬಗ್ಗೆಯೂ ವರದಿಯಾಗಿತ್ತು.

ಇದನ್ನೂ ಓದಿ:ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್​

ABOUT THE AUTHOR

...view details