ETV Bharat / technology

ಸ್ಮಾರ್ಟ್​ಫೋನ್ ಓವರ್ ಹೀಟ್ ಆಗ್ತಿದೆಯಾ? ತಣ್ಣಗಾಗಿಸಲು ಹೀಗೆ ಮಾಡಿ - Smartphone Overheating

author img

By ETV Bharat Karnataka Team

Published : May 3, 2024, 4:08 PM IST

ಸ್ಮಾರ್ಟ್​ಫೋನ್ ಓವರ್ ಹೀಟ್
ಸ್ಮಾರ್ಟ್​ಫೋನ್ ಓವರ್ ಹೀಟ್ (IANS)

ಸ್ಮಾರ್ಟ್ ಫೋನ್ ಓವರ್ ಹೀಟ್ ಆದಾಗ ಅದರ ಬಿಸಿ ಕಡಿಮೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹೈದರಾಬಾದ್: ದೇಶದ ಹಲವಾರು ಭಾಗಗಳಲ್ಲಿ ಬಿಸಿಲಿನ ಬೇಗೆ ತೀವ್ರವಾಗಿದ್ದು, ಬಹುತೇಕ ಕಡೆಗಳಲ್ಲಿ ಶಾಖದ ಅಲೆಗಳು ಬೀಸುತ್ತಿವೆ. ಇಂಥ ವಿಪರೀತ ಬಿಸಿಯ ಹವಾಮಾನದಲ್ಲಿ ನಿಮ್ಮ ಮೊಬೈಲ್ ಫೋನ್ ಕೂಡ ಒಮ್ಮೊಮ್ಮೆ ಓವರ್ ಹೀಟ್ ಆಗಲು ಕಾರಣವಾಗುತ್ತದೆ. ಸ್ಮಾರ್ಟ್​ಫೋನ್ ಓವರ್ ಹೀಟ್ ಆದಾಗ ಅದರ ಕೆಲಸ ಮಾಡುವ ವೇಗ ಕಡಿಮೆಯಾಗಬಹುದು ಅಥವಾ ಕೆಲವೊಮ್ಮೆ ಅದರೊಳಗಿನ ಬ್ಯಾಟರಿ ಸ್ಫೋಟವೂ ಆಗಬಹುದು.

ನಿಮ್ಮ ಫೋನ್ ಬಿಸಿಯಾಗಲು ಮುಖ್ಯ ಕಾರಣಗಳು: ಐಒಎಸ್ ಅಥವಾ ಆಂಡ್ರಾಯ್ಡ್ ಆಗಿರಲಿ ನಿಮ್ಮ ಫೋನ್ ಅತಿಯಾಗಿ ಬಿಸಿಯಾಗಲು ಕಾರಣವಾಗುವ ಹಲವಾರು ವಿಷಯಗಳಿವೆ. ಅವುಗಳಲ್ಲಿ ಕೆಲ ಕಾರಣಗಳು ಹೀಗಿವೆ:

  • ಫೋನ್​ ಅನ್ನು ನೇರವಾಗಿ ಬಿಸಿಲಿಗೆ ಒಡ್ಡಿದಾಗ ಅಥವಾ ತೀರಾ ಬಿಸಿಯಾದ ವಾತಾವರಣದಲ್ಲಿ ಫೋನ್ ಬಳಸಿದಾಗ ಅದು ಓವರ್ ಹೀಟ್​ ಆಗಬಹುದು.
  • ಕೆಲ ಬಾರಿ ನಿರಂತರವಾಗಿ ಫೋನ್ ಬಳಸಿದಾಗ ಬ್ಯಾಟರಿಯ ಮೇಲೆ ಒತ್ತಡ ಬೀಳುತ್ತದೆ. ಹೀಗಾದಾಗ ಬ್ಯಾಟರಿ ಬಿಸಿಯಾಗಿ ಫೋನ್ ಓವರ್ ಹೀಟ್ ಆಗಬಹುದು.
  • ಬ್ಯಾಕ್ ಗ್ರೌಂಡ್ ನಲ್ಲಿ ಕೆಲಸ ಮಾಡುವ ಅನೇಕ ಅಪ್ಲಿಕೇಶನ್​ಗಳು ನಿಮ್ಮ ಫೋನ್ ಬಿಸಿಯಾಗಲು ಕಾರಣವಾಗಬಹುದು. ನಿಮ್ಮ ಸಾಧನದಿಂದ ಕ್ಯಾಶೆ ಮೆಮೊರಿಯನ್ನು ಆಗಾಗ ಕ್ಲೀನ್ ಮಾಡುವುದನ್ನು ಮರೆಯಬೇಡಿ.
  • ಪದೇ ಪದೆ ಚಾರ್ಜ್ ಮಾಡುವುದರಿಂದಲೂ ಫೋನ್ ಅತಿಯಾಗಿ ಬಿಸಿಯಾಗಬಹುದು.

ನಿಮ್ಮ ಫೋನ್ ಅನ್ನು ತಂಪಾಗಿಸುವ 5 ಸುಲಭ ಮಾರ್ಗಗಳು

1. ಫೋನ್ ಅನ್ನು ಆಫ್ ಮಾಡಿ / ರಿಸ್ಟಾರ್ಟ್​ ಮಾಡಿ

ನಿಮ್ಮ ಸ್ಮಾರ್ಟ್ ಫೋನ್ ಓವರ್ ಹೀಟ್ ಆಗಿ ನಿಧಾನವಾದರೆ ಫೋನ್ ಅನ್ನು ಸ್ವಲ್ಪ ಸಮಯದವರೆಗೆ ಆಫ್ ಮಾಡಿ ಮತ್ತೆ ಆನ್ ಮಾಡಿಕೊಳ್ಳಬಹುದು. ಫೋನ್ ತೀರಾ ಬಿಸಿಯಾಗಿರುವಾಗ ಅದನ್ನು ಆಫ್ ಮಾಡದೆ ಮತ್ತೆ ಬಳಸಿದರೆ ಅದರ ಶಾಖ ಮತ್ತೂ ಹೆಚ್ಚಾಗುತ್ತದೆ.

2. ಸ್ಕ್ರೀನ್ ಬ್ರೈಟ್​ನೆಸ್ ಕಡಿಮೆ ಮಾಡಿಕೊಳ್ಳಿ

ಸ್ಕ್ರೀನ್ ಬ್ರೈಟ್​ನೆಸ್ ಹೆ್ಚ್ಚಾಗಿ ಇಡುವುದರಿಂದ ಬ್ಯಾಟರಿಯ ಬಳಕೆ ಹೆಚ್ಚಾಗಿ ಫೋನ್ ಕೂಡ ಬಿಸಿಯಾಗುತ್ತದೆ. ಕನಿಷ್ಠ ಫೋನ್ ತಣ್ಣಗಾಗುವವರೆಗಾದರೂ ಸ್ಕ್ರೀನ್ ಬ್ರೈಟ್​ನೆಸ್ ಅನ್ನು ಕಡಿಮೆ ಮಾಡುವುದು ಒಳಿತು.

3. ನಿಮ್ಮ ಮೊಬೈಲ್ ಕೇಸ್ / ಕವರ್ ಅನ್ನು ತೆಗೆಯಿರಿ

ಸಾಮಾನ್ಯವಾಗಿ ಫೋನ್​ಗಳು ತಮ್ಮಲ್ಲಿ ಉತ್ಪತ್ತಿಯಾದ ಶಾಖವನ್ನು ಹೊರಗೆ ಹಾಕುವಂತೆ ವಿನ್ಯಾಸವಾಗಿರುತ್ತವೆ. ಆದರೆ ಸುರಕ್ಷತೆಗಾಗಿ ನೀವು ಹಾಕುವ ಕೇಸ್ ಗಳು ಅಥವಾ ಕವರ್​ಗಳು ಬಿಸಿಯನ್ನು ಹಿಡಿದಿಟ್ಟುಕೊಳ್ಳಬಹುದು. ಹೀಗಾಗಿ ನಿಮ್ಮ ಫೋನ್ ಅನ್ನು ತ್ವರಿತವಾಗಿ ತಂಪಾಗಿಸಬೇಕಾದರೆ ಫೋನ್ ಕೇಸ್ ಅನ್ನು ತೆಗೆದೂ ಬಿಡಿ.

4. ಇಂಟರ್ ನೆಟ್ ಮತ್ತು ಬ್ಲೂಟೂತ್ ಆಫ್ ಮಾಡಿ

ನೀವು ಇಂಟರ್ ನೆಟ್ ಸಂಪರ್ಕ, ಹಾಟ್ ಸ್ಪಾಟ್ ಅಥವಾ ಬ್ಲೂಟೂತ್ ಆನ್ ಮಾಡಿದ್ದರೆ ಫೋನ್ ಬಿಸಿಯಾಗುತ್ತದೆ. ಆದರೆ ಈ ಸೌಲಭ್ಯಗಳನ್ನು ಬಳಸದಿರುವಾಗ ಇವನ್ನು ಆಫ್ ಮಾಡಿದರೆ ಆದಷ್ಟೂ ಫೋನ್ ಬಿಸಿಯಾಗದಂತೆ ತಡೆಯಬಹುದು.

5. ಅಸಲಿ ಚಾರ್ಜರ್​ಗಳನ್ನು ಬಳಸಿ

ನಿಮ್ಮ ಫೋನ್​ಗಳನ್ನು ಯಾವಾಗಲೂ ಅಸಲಿ ಚಾರ್ಜರ್​​ಗಳಿಂದ ಚಾರ್ಜಿಂಗ್ ಮಾಡುವುದು ಸುರಕ್ಷಿತ. ಅಲ್ಲದೆ ಚಾರ್ಜರ್ ಅಥವಾ ನಿಮ್ಮ ಸ್ಮಾರ್ಟ್ ಫೋನ್​ನ ಚಾರ್ಜಿಂಗ್ ಪೋರ್ಟ್​ಗೆ ಹಾನಿಯಾಗಿದ್ದರೂ ಸಹ ಫೋನ್ ವಿಪರೀತವಾಗಿ ಬಿಸಿಯಾಗಬಹುದು.

ಇದನ್ನೂ ಓದಿ : ಮಹಾನ್​​ ಕ್ರಾಂತಿಕಾರಿ ಆವಿಷ್ಕಾರ: ಬ್ಲೂಟೂತ್​ನಿಂದ 600 ಕಿಮೀ ದೂರದ ಉಪಗ್ರಹದೊಂದಿಗೆ ಸಂಪರ್ಕ - BLUETOOTH CONNECTION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.