ETV Bharat / technology

ಡೆಲ್ Alienware x16 R2 ಗೇಮಿಂಗ್ ಲ್ಯಾಪ್​ಟಾಪ್ ಬಿಡುಗಡೆ: ಬೆಲೆ 2,86,990 ರಿಂದ ಶುರು - DELL GAMING LAPTOP

author img

By ETV Bharat Karnataka Team

Published : Apr 25, 2024, 2:06 PM IST

Dell launches new Alienware gaming laptop in India
Dell launches new Alienware gaming laptop in India

ಡೆಲ್​ ತನ್ನ ಹೊಸ ಗೇಮಿಂಗ್ ಲ್ಯಾಪ್​ಟಾಪ್​ Alienware x16 R2 ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನವದೆಹಲಿ : ಡೆಲ್ ಟೆಕ್ನಾಲಜೀಸ್ ಗುರುವಾರ ಭಾರತದಲ್ಲಿ ಹೊಸ ಗೇಮಿಂಗ್ ಲ್ಯಾಪ್ ಟಾಪ್ ಏಲಿಯನ್ ವೇರ್ ಎಕ್ಸ್ 16 ಆರ್ 2 (Alienware x16 R2) ಅನ್ನು ಬಿಡುಗಡೆ ಮಾಡಿದೆ. ಹೊಸ ಲ್ಯಾಪ್ ಟಾಪ್ ಏಪ್ರಿಲ್ 25 ರಿಂದ ಡೆಲ್ ಎಕ್ಸ್ ಕ್ಲೂಸಿವ್ ಸ್ಟೋರ್ಸ್ (ಡಿಇಎಸ್), Dell ಡಾಟ್ com, Amazon ಡಾಟ್ in, ರಿಟೇಲ್ ಮಳಿಗೆಗಳು ಮತ್ತು ಮಲ್ಟಿ-ಬ್ರಾಂಡ್ ಮಳಿಗೆಗಳಲ್ಲಿ 2,86,990 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

"ಹಲವಾರು ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಎಐ ಸಾಮರ್ಥ್ಯಗಳಿಂದ ತುಂಬಿರುವ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ವಿನ್ಯಾಸದ ಎಕ್ಸ್​ ಸರಣಿಯ ಗೇಮಿಂಗ್ ಲ್ಯಾಪ್ ಟಾಪ್ ಆಗಿದೆ" ಎಂದು ಡೆಲ್ ಟೆಕ್ನಾಲಜೀಸ್ ಇಂಡಿಯಾದ ಉತ್ಪನ್ನ ಮಾರ್ಕೆಟಿಂಗ್, ಗ್ರಾಹಕ ಮತ್ತು ಸಣ್ಣ ವ್ಯವಹಾರದ ನಿರ್ದೇಶಕ ಪೂಜನ್ ಚಡ್ಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏಲಿಯನ್ ವೇರ್ ಎಕ್ಸ್ 16 ಆರ್ 2 ಕೃತಕ ಬುದ್ಧಿಮತ್ತೆ (ಎಐ) ವೇಗವರ್ಧನೆ ಮತ್ತು ಕಾರ್ಯಾಚರಣೆ ಮತ್ತು ಟಾಸ್ಕ್ ಲೋಡ್​ಗಳಲ್ಲಿ ಸಮತೋಲಿತ ಕಾರ್ಯಕ್ಷಮತೆಗಾಗಿ ಇಂಟೆಲ್ ಕೋರ್ ಅಲ್ಟ್ರಾ 9 185 ಎಚ್ ಪ್ರೊಸೆಸರ್​ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಪ್ರಕ್ರಿಯೆಯ ಬೆಂಬಲದೊಂದಿಗೆ, 2021 ರಿಂದ ಬಿಡುಗಡೆಯಾದ ಇದೇ ರೀತಿಯ ಏಲಿಯನ್​ವೇರ್ ಲ್ಯಾಪ್​ಟಾಪ್​ಗಳಿಗೆ ಹೋಲಿಸಿದರೆ ಹೊಸ ಲ್ಯಾಪ್​ಟಾಪ್​ಗಳು ಶೇಕಡಾ 41 ರಷ್ಟು ಹೆಚ್ಚಿನ ಕಾರ್ಯಕ್ಷಮತೆ ಮತ್ತು 1.9ರಷ್ಟು ಹೆಚ್ಚಿನ ಬ್ಯಾಟರಿ ಬಾಳಿಕೆ ಹೊಂದಿವೆ ಎಂದು ಕಂಪನಿ ತಿಳಿಸಿದೆ.

ಇದಲ್ಲದೇ ಎಫ್ಎಚ್​ಡಿ ಎಚ್​ಡಿಆರ್ ಐಆರ್ ಕ್ಯಾಮೆರಾ ಮತ್ತು ನವೀಕೃತ 240 ಹರ್ಟ್ಜ್ ರಿಫ್ರೆಶ್ ರೇಟ್ ಡಿಸ್ ಪ್ಲೇ (ಏಲಿಯನ್ ವೇರ್ ಎಕ್ಸ್ 16 ಆರ್ 1 ಗಿಂತ 165 ಹರ್ಟ್ಸ್​ನಷ್ಟು ಹೆಚ್ಚಳ) ಕ್ಯಾಮೆರಾ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ ಅಡೆತಡೆಯಿಲ್ಲದ ದೃಶ್ಯ ವರ್ಧನೆಗಳನ್ನು ನೀಡುತ್ತದೆ ಎಂದು ಕಂಪನಿ ಉಲ್ಲೇಖಿಸಿದೆ.

ಡೆಲ್ ಇನ್ ಕಾರ್ಪೊರೇಟೆಡ್ ಇದು ಕಂಪ್ಯೂಟರ್ ಹಾರ್ಡ್ ವೇರ್ ತಯಾರಕ ಮತ್ತು ವಿತರಕ ಕಂಪನಿಯಾಗಿದೆ. ಮಾರಾಟವಾದ ಘಟಕಗಳ ಪ್ರಮಾಣ ಮತ್ತು ಒಟ್ಟು ಆದಾಯ ಎರಡರ ದೃಷ್ಟಿಯಿಂದಲೂ ಕಂಪನಿಯು ವಿಶ್ವದ ಅತಿದೊಡ್ಡ ಕಂಪ್ಯೂಟರ್ ವಿತರಕರಲ್ಲಿ ಒಂದಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್​ನ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಡೆಲ್ ಕಂಪ್ಯೂಟರ್ ಅನ್ನು 1984 ರಲ್ಲಿ ವಿಶ್ವವಿದ್ಯಾಲಯದ ಡ್ರಾಪ್ ಔಟ್ ವಿದ್ಯಾರ್ಥಿ ಮೈಕೆಲ್ ಡೆಲ್ 'ಪಿಸಿ ಲಿಮಿಟೆಡ್' ಎಂಬ ಹೆಸರಿನಲ್ಲಿ ಸ್ಥಾಪಿಸಿದರು.

ಇದನ್ನೂ ಓದಿ : 324 ಕೋಟಿ ತಲುಪಿದ ಮೆಟಾ ಆ್ಯಪ್​ ಬಳಕೆದಾರರ ಸಂಖ್ಯೆ: ರೀಲ್ಸ್​ಗೆ ಅತ್ಯಧಿಕ ವೀಕ್ಷಕರು - META APPS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.