ETV Bharat / technology

ಅತ್ಯಧಿಕ ಮಾರಾಟವಾದ ಸ್ಮಾರ್ಟ್​ಫೋನ್ ಆಗಿ ಹೊರಹೊಮ್ಮಿದ ಆ್ಯಪಲ್​ iPhone 15 Pro Max - APPLES IPHONE

author img

By ETV Bharat Karnataka Team

Published : May 6, 2024, 8:06 PM IST

ಆ್ಯಪಲ್​ನ ಐಫೋನ್ 15 ಪ್ರೊ ಮ್ಯಾಕ್ಸ್ ಅತ್ಯಧಿಕ ಮಾರಾಟವಾದ ಸ್ಮಾರ್ಟ್​ಪೋನ್ ಆಗಿ ಹೊರಹೊಮ್ಮಿದೆ.

Apples iPhone 15 Pro Max best selling smartphone
Apples iPhone 15 Pro Max best selling smartphone ((image: ians))

ನವದೆಹಲಿ: ಆಪಲ್​ನ ಐಫೋನ್ 15 ಪ್ರೊ ಮ್ಯಾಕ್ಸ್ 2024 ರ ಮೊದಲ ತ್ರೈಮಾಸಿಕದಲ್ಲಿ (ಕ್ಯೂ 1) ಅತ್ಯಧಿಕ ಮಾರಾಟವಾದ ಸ್ಮಾರ್ಟ್​ಫೋನ್ ಆಗಿ ಹೊರಹೊಮ್ಮಿದೆ ಎಂದು ಹೊಸ ವರದಿ ಸೋಮವಾರ ತೋರಿಸಿದೆ. ಕೌಂಟರ್​ ಪಾಯಿಂಟ್ ರಿಸರ್ಚ್ ಪ್ರಕಾರ ಆ್ಯಪಲ್ ಮತ್ತು ಸ್ಯಾಮ್​ಸಂಗ್ ಮೊದಲ ತ್ರೈಮಾಸಿಕದಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್​ಫೋನ್​ಗಳ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿವೆ. ಅಗ್ರ 10 ಸ್ಮಾರ್ಟ್​ಫೋನ್​ಗಳ ಪಟ್ಟಿಯಲ್ಲಿ ಎರಡೂ ಬ್ರಾಂಡ್​ಗಳು ತಲಾ ಫೋನ್​ಗಳನ್ನು ಹೊಂದಿವೆ.

"ಪ್ರೊ ಮ್ಯಾಕ್ಸ್ ಮಾಡೆಲ್​ ಆ್ಯಪಲ್​ನ ನಾನ್- ಸೀಸನಲ್ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಅಗ್ರ ಸ್ಥಾನ ಪಡೆದುಕೊಂಡಿದೆ. ಇದು ಹೈ-ಎಂಡ್ ಸ್ಮಾರ್ಟ್​ ಫೋನ್​ಗಳಿಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ" ಎಂದು ವಿಶ್ಲೇಷಕರು ಹೇಳಿದ್ದಾರೆ. "ಎಲ್ಲ ನಾಲ್ಕು ಐಫೋನ್ 15 ಮಾಡೆಲ್​ಗಳು ಮತ್ತು ಐಫೋನ್ 14 ಟಾಪ್ 10 ಬೆಸ್ಟ್ ಸೆಲ್ಲರ್ ಗಳಲ್ಲಿ ಸೇರಿವೆ. ಇದಲ್ಲದೇ, ಐಫೋನ್ 15 ಶ್ರೇಣಿಯು ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ" ಎಂದು ಅವರು ಹೇಳಿದರು.

ಇದಲ್ಲದೆ, ಸ್ಯಾಮ್​ಸಂಗ್​ನ ಗ್ಯಾಲಕ್ಸಿ ಎಸ್ 24 ಸರಣಿಯು 1ನೇ ತ್ರೈಮಾಸಿಕದಲ್ಲಿ ಅಗ್ರ 10 ರಲ್ಲಿ ಎರಡು ಸ್ಥಾನಗಳನ್ನು ಗಳಿಸಿದೆ. ಅದರ ಅಲ್ಟ್ರಾ ಮಾಡೆಲ್ ಐದನೇ ಸ್ಥಾನದಲ್ಲಿದೆ ಮತ್ತು ಬೇಸ್ ಮಾಡೆಲ್​ ಒಂಬತ್ತನೇ ಸ್ಥಾನದಲ್ಲಿದೆ. ವಿಶ್ಲೇಷಕರ ಪ್ರಕಾರ, ಎಸ್ 24 ಸರಣಿಯ ಉತ್ತಮವಾದ ಕಾರ್ಯಕ್ಷಮತೆಗೆ ಸ್ಯಾಮ್​ಸಂಗ್​ನ ಸರಣಿಯ ಆರಂಭಿಕ ಅಪ್ಡೇಟ್​ ಮತ್ತು ಜನರೇಟಿವ್​ ಎಐ (ಜೆಎನ್ ಎಐ) ತಂತ್ರಜ್ಞಾನದ ಅಳವಡಿಕೆಗಳು ಕಾರಣವಾಗಿವೆ.

"ಎಸ್ 24 ಸರಣಿಯು ಜೆನ್​ ಎಐ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳೊಂದಿಗೆ ಮಾರುಕಟ್ಟೆಗೆ ಬಂದ ಮೊದಲ ಸ್ಮಾರ್ಟ್ ​ಫೋನ್ ಆಗಿದ್ದು, ಬಳಕೆದಾರರಿಗೆ ಅನನ್ಯ ಕಂಟೆಂಟ್​ಗಳನ್ನು ರಚಿಸಲು ಮತ್ತು ತಮ್ಮ ಸ್ಮಾರ್ಟ್ ಫೋನ್​ಗಳೊಂದಿಗೆ ಹೊಸ ಮಟ್ಟದ ಸಂವಹನ ಅನುಭವಿಸಲು ಅನುವು ಮಾಡಿಕೊಡುತ್ತದೆ" ಎಂದು ವಿಶ್ಲೇಷಕರು ಹೇಳಿದ್ದಾರೆ. ಅಲ್ಲದೇ ಮೊದಲ ತ್ರೈಮಾಸಿಕದ ಎಲ್ಲ ಟಾಪ್ 10 ಸ್ಮಾರ್ಟ್​ಪೋನ್​ಗಳು 5ಜಿ ಫೋನ್​ಗಳಾಗಿರುವುದು ವಿಶೇಷವಾಗಿದೆ.

ಒಇಎಂಗಳು (ಮೂಲ ಉಪಕರಣ ತಯಾರಕರು) ಜೆಎನ್ಎಐ ಸೇರಿದಂತೆ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ತೆಳುವಾದ ಸ್ಮಾರ್ಟ್​ಪೋನ್​ ತಯಾರಿಸುವತ್ತ ಗಮನ ಹರಿಸುತ್ತಿರುವುದರಿಂದ ಮುಂಬರುವ ಸಮಯದಲ್ಲಿ ಟಾಪ್ 10 ಹೆಚ್ಚು ಮಾರಾಟವಾಗುವ ಸ್ಮಾರ್ಟ್​ಫೋನ್​ಗಳು ಒಟ್ಟು ಸ್ಮಾರ್ಟ್​ಫೋನ್ ಮಾರಾಟದಲ್ಲಿ ಹೆಚ್ಚಿನ ಪಾಲು ಪಡೆದುಕೊಳ್ಳುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇದನ್ನೂ ಓದಿ : ಎಐ ತಂತ್ರಜ್ಞಾನ ಬಳಕೆಯಿಂದ ಸಮಯದ ಉಳಿತಾಯ: ಶೇ 94ರಷ್ಟು ವೃತ್ತಿಪರರ ಅಭಿಪ್ರಾಯ - AI in Workplace

ETV Bharat Logo

Copyright © 2024 Ushodaya Enterprises Pvt. Ltd., All Rights Reserved.