ETV Bharat / business

ಮಹಿಳೆಯರಿಗೆ ಬಂಪರ್​​​ ಆಫರ್​, 5 ಲಕ್ಷ ರೂ. ಬಡ್ಡಿ ರಹಿತ ಸಾಲ; ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ? - How to Apply for Lakhpati Scheme

author img

By ETV Bharat Karnataka Team

Published : May 4, 2024, 11:21 AM IST

Lakhpati Didi Scheme
5 ಲಕ್ಷ ಬಡ್ಡಿ ರಹಿತ ಸಾಲ (Etv Bharat)

ಕೇಂದ್ರ ಸರ್ಕಾರ ಮಹಿಳೆಯರ ಕಲ್ಯಾಣಕ್ಕಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಬಂದರೆ ಮತ್ತಷ್ಟು ಯೋಜನೆಗಳನ್ನು ಜಾರಿ ತರಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆ ಕೂಡಾ ನೀಡಲಾಗಿದೆ. ಇನ್ನು ಮಹಿಳೆಯರ ಕಲ್ಯಾಣಕ್ಕೆ ಇರುವ ಲಖ್​​ಪತಿ ದೀದಿ ಕೂಡಾ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಇರುವ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಮಹಿಳೆಯರು ಬಡ್ಡಿ ರಹಿತ ಸಾಲ ಪಡೆಯಬಹುದು. ಆದರೆ, ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲ. ಅಂದ ಹಾಗೇ ಏನಿದು ಯೋಜನೆ ? ಯಾರು ಅರ್ಹರು? ಅದಲ್ಲದಕ್ಕೂ ಈ ಸ್ಟೋರಿಯಲ್ಲಿ ಉತ್ತರ ಇದೆ.

ಹೈದರಾಬಾದ್​: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದು ಕುಟುಂಬ ನಿರ್ವಹಣೆ ಮಾಡಿದರೆ, ದೇಶದ ಪ್ರಗತಿಗೂ ಇದು ದೊಡ್ಡ ಕೊಡುಗೆ ನೀಡುತ್ತದೆ ಎಂಬುದು ಸರ್ಕಾರದ ಯೋಚನೆ ಮತ್ತು ಯೋಜನೆಯಾಗಿದೆ. ಅದಕ್ಕಾಗಿಯೇ ಸರ್ಕಾರಗಳು ಮಹಿಳೆಯರಿಗೆ ವಿವಿಧ ಕೌಶಲ್ಯಗಳನ್ನು ಕಲಿಸಲು ಮತ್ತು ಉದ್ಯೋಗ ಒದಗಿಸಲು ನಾನಾ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರನ್ನು ಆರ್ಥಿಕ ಸ್ವಾತಂತ್ರ್ಯಗೊಳಿಸಲು ಇಂತಹ ಯೋಜನೆಗಳೂ ತೀರಾ ಸಹಾಯ ಮಾಡುತ್ತವೆ.

ಕೇಂದ್ರ ಸರ್ಕಾರ ಗ್ರಾಮೀಣ ಮಹಿಳೆಯರ ಶ್ರೇಯೋಭಿವೃದ್ಧಿ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಮತ್ತೊಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಆದರೆ, ಈ ಯೋಜನೆ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಯಾರು ಸಾಲ ಪಡೆಯಲು ಅರ್ಹರು? ಎಷ್ಟು ಲಕ್ಷದವರೆಗೆ ಸಾಲ ಪಡೆಯಬಹುದು ಎಂಬುದನ್ನು ಈಗ ಅರ್ಥ ಮಾಡಿಕೊಳ್ಳೋಣ

2023ರಲ್ಲಿ ಜಾರಿಗೆ ಬಂದಿದೆ ಲಖ್​​​ಪತಿ ದೀದಿ: ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿಸಲು ಕೇಂದ್ರ ಸರ್ಕಾರ 2023ರಲ್ಲಿ ಲಖ್​ಪತಿ ದೀದಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಜಾರಿಗೊಳಿಸಿದೆ. ಯೋಜನೆಯನ್ನು ಮೊದಲಿಗೆ ಪರಿಚಯಿಸಿದಾಗ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 2 ಕೋಟಿ ಮಹಿಳೆಯರಿಗೆ ಪ್ರಯೋಜನ ಅಥವಾ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗುರಿ ಹೊಂದಿತ್ತು. 2024-25ರ ಇತ್ತೀಚಿನ ಮಧ್ಯಂತರ ಬಜೆಟ್‌ನಲ್ಲಿ ಸುಮಾರು 3 ಕೋಟಿ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡಲು ಕೇಂದ್ರ ನಿರ್ಧರಿಸಿತ್ತು,. ಇವರಿಗೆಲ್ಲ ಸಾಲ ನೀಡುವ ಗುರಿಯನ್ನೂ ಕೂಡಾ ಹೊಂದಲಾಗಿದೆ.

ಈ ಯೋಜನೆ ಲಾಭ ಪಡೆದುಕೊಳ್ಳಲು ಯಾರು ಅರ್ಹರು?; ಸ್ವಸಹಾಯ ಸಂಘಗಳ ಸದಸ್ಯರಾಗಿರುವವರು ಮತ್ತು 18 ರಿಂದ 50 ವರ್ಷದೊಳಗಿನ ಮಹಿಳೆಯರು ಲಖ್​ಪತಿ ದೀದಿ ಯೋಜನೆಗೆ ಅರ್ಹರಾಗಿರುತ್ತಾರೆ.

ಈ ಯೋಜನೆಯನ್ನು ಪಡೆಯಲು ಅಗತ್ಯವಿರುವ ದಾಖಲೆಗಳು:

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್​ಬುಕ್​
  • SHG ಸದಸ್ಯತ್ವ ಕಾರ್ಡ್
  • ಜಾತಿ ಪ್ರಮಾಣಪತ್ರ
  • ದೂರವಾಣಿ ಸಂಖ್ಯೆ
  • ಪಾಸ್ಪೋರ್ಟ್ ಫೋಟೋ

ಅರ್ಜಿ ಸಲ್ಲಿಸುವುದು ಹೇಗೆ?:

  • ಈ ಯೋಜನೆಯ ಮೂಲಕ ಸಾಲ ಪಡೆಯಬೇಕು ಎಂದು ಬಯಸಿದರೆ, ನೀವು ನಿಮ್ಮ ಜಿಲ್ಲೆಯ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಭೇಟಿ ನೀಡಬೇಕು.
  • ಅಲ್ಲಿ ಲಖ್​​ಪತಿ ದೀದಿ ಸ್ಕೀಮ್​​ನ ಫಾರ್ಮ್ ತೆಗೆದುಕೊಂಡು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕು.
  • ನಂತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು.
  • ಅಧಿಕಾರಿಗಳು ನಿಮ್ಮ ಅರ್ಜಿ ನಮೂನೆಯನ್ನು ಪರಿಶೀಲಿಸಿ, ನೀವು ಅರ್ಹರಾಗಿದ್ದರೆ ಬಡ್ಡಿ ರಹಿತ ಸಾಲವನ್ನು ಮಂಜೂರು ಮಾಡುತ್ತಾರೆ.

ಅರ್ಹತೆ ಪಡೆದವರಿಗೆ ಇದೆ ತರಬೇತಿ: ಈ ಯೋಜನೆಯ ಮೂಲಕ ಮಹಿಳೆಯರಿಗೆ ಎಲ್ ಇಡಿ ಬಲ್ಬ್ ತಯಾರಿಕೆ ತರಬೇತಿ, ಪಶುಪಾಲನೆ, ಅಣಬೆ ಕೃಷಿಯಂತಹ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ನಂತರ ಅವರಿಗೆ ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್, ಆನ್‌ಲೈನ್ ವ್ಯವಹಾರ, ವ್ಯವಹಾರದಲ್ಲಿ ತರಬೇತಿ ನೀಡಿ ಅವರ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಪ್ರೋತ್ಸಾಹಿಸಲಾಗುತ್ತದೆ. ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನು ಓದಿ: ಮೊನ್ನೆ ಇಳಿಕೆ, ನಿನ್ನೆ ಏರಿಕೆ ಇಂದು ಮತ್ತೆ ಇಳಿಕೆ: ಬೆಂಗಳೂರಿನಲ್ಲಿ ಪ್ರಸ್ತುತ ದರ ಎಷ್ಟಿದೆ ಗೊತ್ತಾ? - Gold Rate in Karnataka

ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ: ನೀವು ಬಯಸಿದಾಗಲೆಲ್ಲಾ ಹಣ ಹಿಂಪಡೆಯಲು ಅವಕಾಶ!, ಲಾಭ ಏನು ಅಂತೀರಾ? - SBI Special FD Scheme

ETV Bharat Logo

Copyright © 2024 Ushodaya Enterprises Pvt. Ltd., All Rights Reserved.