ETV Bharat / business

F77 Mach-2 ಎಲೆಕ್ಟ್ರಿಕ್ ಮೋಟರ್ ಸೈಕಲ್ ಬಿಡುಗಡೆ: ವಿಶೇಷತೆ, ವಿನ್ಯಾಸ, ಬೆಲೆ- ಸಂಪೂರ್ಣ ವಿವರ - Electric Motorcycle

author img

By ETV Bharat Karnataka Team

Published : Apr 24, 2024, 5:39 PM IST

Ultraviolette launches e-motorcycle
Ultraviolette launches e-motorcycle

ಅಲ್ಟ್ರಾವಯೋಲೆಟ್ ಕಂಪನಿಯ ಇ-ಮೋಟಾರ್ ಸೈಕಲ್ ಎಫ್ 77 ಮ್ಯಾಕ್ 2 ಬಿಡುಗಡೆಯಾಗಿದೆ.

ನವದೆಹಲಿ : ಎಲೆಕ್ಟ್ರಿಕ್ ವಾಹನ (ಇವಿ) ಕಂಪನಿ ಅಲ್ಟ್ರಾವಯೋಲೆಟ್ ಬುಧವಾರ ಹೊಸ ಇ-ಮೋಟಾರ್ ಸೈಕಲ್ ಎಫ್ 77 ಮ್ಯಾಕ್ 2 ಅನ್ನು ಬಿಡುಗಡೆ ಮಾಡಿದೆ. ಎಫ್ 77 ಮ್ಯಾಕ್ 2 ಮೋಟರ್ ಸೈಕಲ್ 2,99,000 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಇದಕ್ಕೂ ಹೆಚ್ಚಿನ ಸಾಮರ್ಥ್ಯದ ಎಫ್ 77 ಮ್ಯಾಕ್ 2 ರೆಕಾನ್​ಗೆ 3,99,000 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಎಫ್77 ಮ್ಯಾಕ್ 2 ಮತ್ತು ಎಫ್77 ಮ್ಯಾಕ್ 2 ರೆಕಾನ್ ಇ-ಮೋಟರ್​ ಸೈಕಲ್​ಗಳು ಸ್ಟೆಲ್ಲರ್ ವೈಟ್, ಸೂಪರ್ ಸಾನಿಕ್ ಸಿಲ್ವರ್, ಲೈಟ್ನಿಂಗ್ ಬ್ಲೂ, ಪ್ಲಾಸ್ಮಾ ರೆಡ್, ಟರ್ಬೊ ರೆಡ್, ಆಫ್ಟರ್ ಬರ್ನರ್ ಯೆಲ್ಲೋ, ಸ್ಟೆಲ್ತ್ ಗ್ರೇ, ಆಸ್ಟೆರಾಯ್ಡ್​ ಗ್ರೇ ಮತ್ತು ಕಾಸ್ಮಿಕ್ ಗ್ರೇ ಎಂಬ ಒಂಬತ್ತು ಬಣ್ಣಗಳಲ್ಲಿ ಲಭ್ಯವಾಗಲಿವೆ. ಎಫ್ 77 ಮ್ಯಾಕ್ 2 ದೇಶಾದ್ಯಂತ 15 ನಗರಗಳಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ. ಮೇ 2024 ರಿಂದ ಮೋಟರ್​ ಸೈಕಲ್ ಖರೀದಿಗೆ ಸಿಗಲಿದೆ.

ಅತ್ಯಾಧುನಿಕ ವೈಲೆಟ್ ಎಐ ಸಿಸ್ಟಮ್ ಅನ್ನು ಒಳಗೊಂಡಿರುವ ಎಫ್ 77 ಮ್ಯಾಕ್ 2 ಅನ್ನು ನೈಜ ಪ್ರಪಂಚದ ಅನುಭವದಿಂದ ಸಂಗ್ರಹಿಸಲಾದ ವ್ಯಾಪಕ ಮಾಹಿತಿಯನ್ನು ಆಧರಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯ ಸಿಟಿಒ ಮತ್ತು ಸಹ-ಸಂಸ್ಥಾಪಕ ನೀರಜ್ ರಾಜ್ ಮೋಹನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಂಪನಿಯ ಪ್ರಕಾರ, ಎಫ್ 77 ಮ್ಯಾಕ್ 2 ರೆಕಾನ್ 323 ಕಿಮೀ ಐಡಿಸಿ ಶ್ರೇಣಿಯನ್ನು ಹೊಂದಿದೆ. ಇದು ಕೇವಲ 2.8 ಸೆಕೆಂಡುಗಳಲ್ಲಿ 0 ರಿಂದ 60 ಕಿ.ಮೀ ವೇಗವನ್ನು ತಲುಪುತ್ತದೆ, 155 ಕಿ.ಮೀ ಟಾಪ್ ಸ್ಪೀಡ್ ಅನ್ನು ಸಾಧಿಸುತ್ತದೆ.

ಮೋಟರ್​ ಸೈಕಲ್​ನ ಸುರಕ್ಷತೆ ಮತ್ತು ಉತ್ತಮ ಕಾರ್ಯಕ್ಷಮತೆಗಾಗಿ ಎಫ್ 77 ಮ್ಯಾಕ್ 2 ನಲ್ಲಿ 3-ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಅನ್ನು ಕೂಡ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ವಿಭಿನ್ನ ಚಾಲನಾ ಪರಿಸ್ಥಿತಿಗಳಲ್ಲಿ ಸೂಕ್ತವಾದ ಚಲನೆ ಮತ್ತು ಸ್ಥಿರತೆಯನ್ನು ಖಚಿತಪಡಿಸುತ್ತದೆ. ಇದಲ್ಲದೆ, ಈ ಬೈಕಿನಲ್ಲಿ 10 ಹಂತದ ರಿಜನರೇಟಿವ್ ಬ್ರೇಕಿಂಗ್ ಅನ್ನು ಅಳವಡಿಸಲಾಗಿದ್ದು ಇದು ಹೆಚ್ಚುವರಿ ಅನುಕೂಲ ನೀಡುತ್ತದೆ.

ಅಲ್ಟ್ರಾವಯೋಲೆಟ್ ಆಟೋಮೋಟಿವ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು 2016 ರಲ್ಲಿ ನಾರಾಯಣ್ ಸುಬ್ರಮಣಿಯಂ ಮತ್ತು ನೀರಜ್ ರಾಜ್ ಮೋಹನ್ ಸ್ಥಾಪಿಸಿದರು. ಪ್ರಗತಿಪರ ವಿನ್ಯಾಸ ಮತ್ತು ಇಂಧನ ಉಳಿತಾಯ ತಂತ್ರಜ್ಞಾನದ ವಾಹನಗಳನ್ನು ತಯಾರಿಸುವುದು ಕಂಪನಿಯ ಗುರಿಯಾಗಿದೆ.

ಇದನ್ನೂ ಓದಿ : ಫಿ-3-ಮಿನಿ: ಅತ್ಯಂತ ಚಿಕ್ಕ ಗಾತ್ರದ ಎಐ ಮಾಡೆಲ್ ಹೊರತಂದ ಮೈಕ್ರೊಸಾಫ್ಟ್ - Phi 3 Mini

ETV Bharat Logo

Copyright © 2024 Ushodaya Enterprises Pvt. Ltd., All Rights Reserved.