ETV Bharat / business

ಷೇರು ಮಾರುಕಟ್ಟೆ: ಬಿಎಸ್​​ಇ ಸೆನ್ಸೆಕ್ಸ್​ 609 & ನಿಫ್ಟಿ 150 ಅಂಕ ಕುಸಿತ - Stock Market

author img

By ETV Bharat Karnataka Team

Published : Apr 26, 2024, 7:50 PM IST

BSE Sensex down 609 points Nifty down 150 points
BSE Sensex down 609 points Nifty down 150 points

ಶುಕ್ರವಾರದಂದು ಭಾರತದ ಷೇರು ಮಾರುಕಟ್ಟೆಗಳು ಕುಸಿತದೊಂದಿಗೆ ಕೊನೆಗೊಂಡಿವೆ.

ಮುಂಬೈ: ಶುಕ್ರವಾರದ ದಿನದ ಆರಂಭದಲ್ಲಿ ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಆರಂಭವಾದರೂ ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ನೆಸ್ಲೆ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಎಂ & ಎಂ, ಕೊಟಕ್ ಮಹೀಂದ್ರಾ ಬ್ಯಾಂಕ್, ಜೆಎಸ್ ಡಬ್ಲ್ಯೂ ಸ್ಟೀಲ್, ಮಾರುತಿ ಸುಜುಕಿ, ಎಚ್ ಸಿಎಲ್ ಟೆಕ್ ಮತ್ತು ಎಸ್​ಬಿಐ ಷೇರುಗಳ ಮೌಲ್ಯ ಕುಸಿತದಿಂದಾಗಿ ನಾಟಕೀಯವಾಗಿ ಇಳಿಕೆ ಕಂಡವು.

ಶುಕ್ರವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 609 ಪಾಯಿಂಟ್ಸ್ ಅಥವಾ ಶೇಕಡಾ 0.28 ರಷ್ಟು ಕುಸಿದು 73,730 ರಲ್ಲಿ ತಲುಪಿದೆ. ಎನ್ಎಸ್ಇ ನಿಫ್ಟಿ 50 ಕೂಡ 150 ಪಾಯಿಂಟ್ಸ್ ಅಥವಾ ಶೇಕಡಾ 0.67 ರಷ್ಟು ಕುಸಿದು 22,420 ರಲ್ಲಿ ಕೊನೆಗೊಂಡಿತು.

ಬಿಎಸ್ಇ ಸೆನ್ಸೆಕ್ಸ್​ನ 30 ಷೇರುಗಳ ಪೈಕಿ ಟೆಕ್ ಮಹೀಂದ್ರಾ, ವಿಪ್ರೋ, ಆಕ್ಸಿಸ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಐಟಿಸಿ, ಟೈಟಾನ್ ಮತ್ತು ಟಾಟಾ ಮೋಟಾರ್ಸ್ ಕೇವಲ ಈ ಏಳು ಷೇರುಗಳು ಮಾತ್ರ ಏರಿಕೆಯಲ್ಲಿ ಕೊನೆಗೊಂಡವು. ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಇಂಡಸ್ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ ಮತ್ತು ಮಹೀಂದ್ರಾ & ಮಹೀಂದ್ರಾ ಇಂದು ಗರಿಷ್ಠ ಕುಸಿತ ಕಂಡ ಷೇರುಗಳಾಗಿವೆ.

ನಿಫ್ಟಿ 50 ರಲ್ಲಿ 17 ಷೇರುಗಳು ಏರಿಕೆಯಲ್ಲಿ ಕೊನೆಗೊಂಡವು. ಟೆಕ್ ಮಹೀಂದ್ರಾ, ದಿವಿಸ್ ಲ್ಯಾಬೊರೇಟರೀಸ್, ಎಲ್​ಟಿಐ ಟ್ರೀ, ಬಜಾಜ್ ಆಟೋ ಮತ್ತು ಬಿಪಿಸಿಎಲ್ ದಿನದಲ್ಲಿ ಗರಿಷ್ಠ ಲಾಭ ಗಳಿಸಿದರೆ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಇಂಡಸ್ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ ಮತ್ತು ಎಸ್​ಬಿಐ ಲೈಫ್ ನಷ್ಟಕ್ಕೀಡಾದವು.

ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.83 ಮತ್ತು ಶೇಕಡಾ 0.27 ರಷ್ಟು ಏರಿಕೆ ಕಂಡಿದ್ದರಿಂದ ವಿಶಾಲ ಮಾರುಕಟ್ಟೆಗಳು ಮುಂಚೂಣಿ ಸೂಚ್ಯಂಕಗಳನ್ನು ಮೀರಿಸಿದವು. ವಲಯಗಳ ಪೈಕಿ ನಿಫ್ಟಿ ಫೈನಾನ್ಷಿಯಲ್ ಸರ್ವಿಸ್ ಸೂಚ್ಯಂಕವು ಶೇಕಡಾ 0.74 ರಷ್ಟು ಕುಸಿದರೆ, ನಿಫ್ಟಿ ಬ್ಯಾಂಕ್ ಸೂಚ್ಯಂಕ (ಶೇಕಡಾ 0.41 ರಷ್ಟು ಕುಸಿತ) ನಂತರದ ಸ್ಥಾನದಲ್ಲಿದೆ. ನಿಫ್ಟಿ ಫಾರ್ಮಾ ಸೂಚ್ಯಂಕವು ಶೇಕಡಾ 0.92 ರಷ್ಟು ಏರಿಕೆಯಾಗಿದೆ.

ಸಾಗರೋತ್ತರ ಅಮೆರಿಕನ್ ಕರೆನ್ಸಿ ಬಲವರ್ಧನೆ ಮತ್ತು ದೇಶೀಯ ಷೇರುಗಳಲ್ಲಿನ ಮಾರಾಟದ ಕಾರಣದಿಂದ ಭಾರತೀಯ ರೂಪಾಯಿ ಶುಕ್ರವಾರ ಯುಎಸ್ ಡಾಲರ್ ವಿರುದ್ಧ 7 ಪೈಸೆ ಕುಸಿದು 83.35 ಕ್ಕೆ (ತಾತ್ಕಾಲಿಕ) ಕೊನೆಗೊಂಡಿತು.

ಇದನ್ನೂ ಓದಿ : 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕದಲ್ಲೇ ಆಸನ ನೀಡಿ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚನೆ - DGCA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.