ETV Bharat / business

ದಿನಕ್ಕೆ 18 ರೂಪಾಯಿ ಕಟ್ಟಿದ್ರೆ 3 ಲಕ್ಷದವರೆಗೆ ಲಾಭ, ಮಕ್ಕಳಿಗಾಗಿ ಸೂಪರ್ ಸ್ಕೀಮ್! - Post Office Saving Scheme

author img

By ETV Bharat Karnataka Team

Published : May 4, 2024, 4:09 PM IST

BAL JEEVAN BIMA YOJANA SCHEME  POST OFFICE  SCHEME BENEFITS  SCHEME DETAILS IN KANNADA
ಮಕ್ಕಳಿಗಾಗಿ ಸೂಪರ್ ಸ್ಕೀಮ್ (Etv Bharat)

Bal Jeevan Bima Yojana Scheme : ನಿಮ್ಮ ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಲು ಉತ್ತಮ ಯೋಜನೆಗಾಗಿ ಹುಡುಕುತ್ತಿರುವಿರಾ? ಉಳಿತಾಯದ ಪ್ರಯೋಜನಗಳ ಜೊತೆಗೆ ವಿಮಾ ಪ್ರಯೋಜನಗಳನ್ನು ನೀಡುವ ಯೋಜನೆಯನ್ನು ಸಹ ನೀವು ಬಯಸುತ್ತೀರಾ?.. ಹಾಗಾದ್ರೆ, ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್ ಯೋಜನೆಯೊಂದು ಇದೆ. ಅದೇ.. ಬಾಲ ಜೀವನ್ ಬಿಮಾ ಯೋಜನೆ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Bal Jeevan Bima Yojana Scheme Benefits : ಇಂದಿನ ಆಧುನಿಕ ಯುಗದಲ್ಲಿ ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ ಎಷ್ಟು ಉಳಿತಾಯ ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಅದರಲ್ಲೂ ಮಕ್ಕಳಿರುವವರು ಚಿಕ್ಕ ವಯಸ್ಸಿನಿಂದಲೇ ಅವರ ಹೆಸರಿನಲ್ಲಿ ಉಳಿತಾಯ ಆರಂಭಿಸುವುದು ಉತ್ತಮ ನಿರ್ಧಾರ ಎನ್ನುತ್ತಾರೆ ತಜ್ಞರು. ಯಾಕೆಂದರೆ, ಮಕ್ಕಳು ಬೆಳೆದಂತೆ ಖರ್ಚು ಹೆಚ್ಚುತ್ತದೆ. ಮುಖ್ಯವಾಗಿ ತಮ್ಮ ವಿದ್ಯಾಭ್ಯಾಸಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಬೇಕಾದರೆ ಪುಸ್ತಕ, ಸಮವಸ್ತ್ರ ಇನ್ನಿತರ ವಿಷಯಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಬಹುದು ಎನ್ನುತ್ತಾರೆ ತಜ್ಞರು.

ಆದ್ದರಿಂದ ಮಕ್ಕಳ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರ ಹೆಸರಿನಲ್ಲಿ ಯಾವುದೇ ಯೋಜನೆಯಲ್ಲಿ ಉಳಿತಾಯ ಮಾಡದಂತೆ ಸೂಚಿಸಲಾಗಿದೆ. ಅದಕ್ಕಾಗಿ ನೂರಾರು, ಸಾವಿರ ಖರ್ಚು ಮಾಡುವ ಅಗತ್ಯವಿಲ್ಲ. 'ಭಾರತೀಯ ಅಂಚೆ ಕಚೇರಿ' (ಪೋಸ್ಟ್ ಆಫೀಸ್) ನೀಡುವ ಈ ಯೋಜನೆಯಲ್ಲಿ ದಿನಕ್ಕೆ ಕೇವಲ 6 ರೂಪಾಯಿ ಕಟ್ಟಿದ್ರೆ ಸಾಕು.. ಮೆಚ್ಯೂರಿಟಿ ಸಮಯದಲ್ಲಿ, ಅವರು ಕನಿಷ್ಠ ಒಂದು ಲಕ್ಷ ರೂಪಾಯಿಗಳ ಗ್ಯಾರಂಟಿ ರಿಟರ್ನ್ ಪಡೆಯುತ್ತಾರೆ ಎಂದು ಹೇಳುತ್ತಾರೆ. ಅದೇ.. 18 ರೂಪಾಯಿ ಕಟ್ಟಿದ್ರೆ 3 ಲಕ್ಷ ರೂಪಾಯಿ ಪಡೆಯಬಹುದು. ಹಾಗಾದರೆ, ಯೋಜನೆ ಏನು? ಅರ್ಹತೆಗಳೇನು? ಯಾವ ಪ್ರಯೋಜನಗಳನ್ನು ಪಡೆಯಬಹುದು? ಈ ಯೋಜನೆಗೆ ಸೇರುವುದು ಹೇಗೆ? ಎಂಬ ವಿವರಗಳು ಇಲ್ಲಿವೆ ನೋಡಿ..

ಮಕ್ಕಳ ಭವಿಷ್ಯದ ಅಗತ್ಯಗಳಿಗಾಗಿ ಭಾರತೀಯ ಅಂಚೆ ಇಲಾಖೆ ತಂದಿರುವ ಯೋಜನೆಯ ಹೆಸರು ಬಾಲ ಜೀವನ್ ಬಿಮಾ ಯೋಜನೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು.. ಅವರ ಆರ್ಥಿಕ ಸಾಮರ್ಥ್ಯದ ಪ್ರಕಾರ, ದಿನಕ್ಕೆ ಕನಿಷ್ಠ ರೂ. 6, ಗರಿಷ್ಠ ರೂ. 18ರ ವರೆಗೆ ಹೂಡಿಕೆ ಮಾಡಬಹುದು. ಆದರೆ ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಈ ಉಳಿತಾಯವನ್ನು ಪ್ರಾರಂಭಿಸಬೇಕು. ಪಾಲಕರು ತಮ್ಮ ಮಕ್ಕಳಿಗಾಗಿ 5 ರಿಂದ 20 ವರ್ಷಗಳವರೆಗೆ ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಉಳಿತಾಯ ಮಾಡಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಪೋಷಕರ ವಯಸ್ಸು 45 ವರ್ಷಗಳನ್ನು ಮೀರಿರಬಾರದು.

ರೂ. 18ಕ್ಕೆ ರೂ. 6 ಲಕ್ಷ ಆದಾಯ! : ಬಾಲ ಜೀವನ್ ಬಿಮಾ ಯೋಜನೆಯಡಿ ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಮಕ್ಕಳು ಮಾತ್ರ ಪ್ರಯೋಜನ ಪಡೆಯಬಹುದು. ಸಣ್ಣ ಮೊತ್ತವನ್ನು ಉಳಿಸಲು ಬಯಸುವವರು ದಿನಕ್ಕೆ ಕನಿಷ್ಠ 6 ರೂಪಾಯಿ ಕಟ್ಟಬೇಕು. ಮೆಚ್ಯೂರಿಟಿಯ ಕೊನೆಯಲ್ಲಿ ಕನಿಷ್ಠ ಖಾತರಿ ಮೊತ್ತವು 1 ಲಕ್ಷ ರೂಪಾಯಿವರೆಗೆ ಬರುತ್ತದೆ. ಅದೇ ಗರಿಷ್ಠ.. ನೀವು ದಿನಕ್ಕೆ 18 ರೂಪಾಯಿ ಕಟ್ಟಿದ್ರೆ ಮೆಚ್ಯೂರಿಟಿ ನಂತರ ರೂ. 3 ಲಕ್ಷದವರೆಗೆ ಪಡೆಯಬಹುದು. ಇಲ್ಲದಿದ್ದರೆ.. ಇಬ್ಬರು ಮಕ್ಕಳಿಗೆ ದಿನಕ್ಕೆ ರೂ. 36 (ಪ್ರತಿ ರೂ. 18) ಕಟ್ಟಿದ್ರೆ ಮುಕ್ತಾಯದ ಸಮಯದಲ್ಲಿ ಎರಡರ ಒಟ್ಟು ಮೊತ್ತ ರೂ. 6 ಲಕ್ಷದವರೆಗೂ ಸಿಗುವ ಸಾಧ್ಯತೆ ಇದೆ.

ಈ ಯೋಜನೆಯ ಬಗ್ಗೆ ಇನ್ನೂ ಕೆಲವು ವಿವರಗಳು:

  • ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಪಾಲಿಸಿದಾರರ ವಯಸ್ಸು (ತಾಯಿ ಅಥವಾ ತಂದೆ) 45 ವರ್ಷಗಳನ್ನು ಮೀರಬಾರದು.
  • ಪಾಲಿಸಿದಾರನು ಪಾಲಿಸಿಯ ಮುಕ್ತಾಯದ ಮೊದಲು ಮರಣ ಹೊಂದಿದರೆ, ನಂತರ ಪಾಲಿಸಿ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ಪಾಲಿಸಿಯ ಅವಧಿಯ ಕೊನೆಯಲ್ಲಿ ಮಕ್ಕಳಿಗೆ ಪೂರ್ಣ ಮೆಚ್ಯೂರಿಟಿ ಮೊತ್ತವನ್ನು ಪಾವತಿಸಲಾಗುತ್ತದೆ.
  • ಪೋಷಕರು ಪಾಲಿಸಿ ಪ್ರೀಮಿಯಂ ಪಾವತಿಸಬೇಕು. ಈ ಪಾಲಿಸಿಯಲ್ಲಿ ಯಾವುದೇ ಸಾಲದ ಪ್ರಯೋಜನವಿಲ್ಲ ಎಂದು ಗಮನಿಸಬೇಕು.
  • ನೀವು ಮಧ್ಯದಲ್ಲಿ ಪಾಲಿಸಿಯಿಂದ ಹಿಂದೆ ಸರಿಯಲು ಬಯಸಿದರೆ.. 5 ವರ್ಷಗಳ ನಂತರ ಸರೆಂಡರ್​ ಆಗುವ ಅವಕಾಶವಿದೆ.
  • ರೂ. 1000 ಖಾತರಿ ಮೊತ್ತದ ಮೇಲೆ ಪ್ರತಿ ವರ್ಷ ರೂ. 48 ಬೋನಸ್ ನೀಡುತ್ತಾರೆ.

ನಿಮ್ಮ ಮಗುವಿನ ಹೆಸರಿನಲ್ಲಿ ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಬಯಸಿದರೆ, ಮೊದಲು ಹತ್ತಿರದ ಅಂಚೆ ಕಚೇರಿಗೆ ಹೋಗಿ. ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ ಯೋಜನೆಯ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ. ನಂತರ ಅರ್ಜಿ ನಮೂನೆಯಲ್ಲಿ ನಿಮ್ಮ ಮಗುವಿನ ಬಗ್ಗೆ ಸಂಪೂರ್ಣ ವಿವರಗಳನ್ನು ನಮೂದಿಸಿ. ಜೊತೆಗೆ.. ಪಾಲಿಸಿದಾರರ(ಗಳ) ವಿವರಗಳನ್ನು ಸಹ ಒದಗಿಸಬೇಕು. ಅರ್ಜಿದಾರರ ಗುರುತು, ವಿಳಾಸ ಪುರಾವೆ ಸಲ್ಲಿಸಿ.. ನಂತರ ನಿಮ್ಮ ಮಗುವಿನ ಹೆಸರಿನ ಮೇಲೆ ಖಾತೆ ರೆಡಿಯಾಗುತ್ತದೆ.

Note: ಮೇಲಿನ ಎಲ್ಲಾ ಮಾಹಿತಿ ಮತ್ತು ಸೂಚನೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವ್ಯಾಪಾರ ತಜ್ಞರ ಸಲಹೆಯಂತೆ ಈ ಮಾಹಿತಿ ನೀಡುತ್ತಿದ್ದೇವೆ. ಹಾಗಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಹೂಡಿಕೆ ಮಾಡುವುದು ಉತ್ತಮ.

ಓದಿ: ರಾತ್ರಿ ಹೊತ್ತಲ್ಲೂ ಬೆವರುತ್ತಿದ್ದೀರಾ? ಹಾಗಾದ್ರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಚ್ಚರ.. ಎಚ್ಚರ! - WHY SWEATING IN COLD WEATHER

ETV Bharat Logo

Copyright © 2024 Ushodaya Enterprises Pvt. Ltd., All Rights Reserved.